ಪುಟ:ಅರಮನೆ.pdf/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೧೫೫ ಮಾಕನ ಕಿವಿಯಲ್ಲಿ ಯಿಂಗಲೀಸು ಭಾಷೆಯೊಳಗೆ ಅದೇನನ್ನೋ ಹೇಳಿ ಮುಂದಕ ಹೊಂಟೂ ಹೊಂಟೂss ಅತ್ತ ಕೂಡ್ಲಿಗಿ ಪಟ್ಟಣದೊಳಗ ತಾಯವ್ವ ತನ್ನ ಮಗಳು ಚಿನ್ನಾಸಾನಿಯ ಮಯ್ಲಿಗೆ ಬಟ್ಟೆಯನ್ನು ಮಡಿ ಮಾಡಿಕೊಂಡು ಬರುವುದಾಗಿ ವಯ್ದ ಅಗಸರವ ವಾರವಾದರೂ ಪತ್ತೆಯಿಲ್ಲವಲ್ಲಾ ಯಂಬ ಚಿಂತೆಯಲ್ಲಿದ್ದಳು. ವಾಸ್ತವದ ಸಂಗತಿ ಅಂದರ ಅವುರಂಮ್ಯ ತನ್ನ ಕುಟುಂಬದ ಅನುಗಾಲ ಬಡತನದ ನಿರೂಲನಾರವಾಗಿ ಚಿನ್ನಾಸಾನಿಯ ಅಮೂಲ್ಯ ಮಯ್ಲಿಗೆ ಬಟ್ಟೆಯನ್ನು ವನಾಂತರದೊಳಗೆ ಮ್ಯಾಕುಲ ಚಿತ್ತೀಯ ಸಿರಿಮಂತ ಹಯಕಳುಗಳಿಗೆ ಹರಾಜು ಹಾಕಿ ಸಿಕ್ಕ ಅರವತ್ತೆಪ್ಪತ್ತು ಬೆಳ್ಳಿ ರೂಪಾಯಿಗಳ ಹಿಡಿಗಂಟನ್ನು ಟೊಂಕಕ್ಕೆ ಕಟ್ಟಿಕೊಂಡು ಸಮುಸಾರ ಸಮೇತ ತನ್ನ ಬೀಗರೂರಾದ ಹಾರಾಳಿಗೆ ಪರಾರಿಯಾಗಿದ್ದನೆಂಬಲ್ಲಿಗೆ.. ಅತ್ತ ಕುದುರೆಡವಿನಿಂದ ಸಿಡೇಗಲ್ಲ ಕಡೇಕ ಬಲೆಯಂಥಾ ಹಾದಿಯೊಂದು ಅನಾದಿ ಕಾಲದಿಂದ ಬಿದ್ದಿರುವುದು, ಅದರ ವಂದು ಕಡೇಕ ಮೀರಗಲ್ಲುಯಿರುವುದು, ಕಾಳಾಯುಕ್ತನಾಮ ಸಂವತ್ಸರದಲ್ಲಿ ತಂಬರಹಳ್ಳಿ ಕೋಟೆಯ ದೊರೆ ಮುದಿಗೋಣೆಪ್ಪನಾಯಕನು ಸಿಡೇಗಲ್ಲು ಕೋಟೆ ಮ್ಯಾಲ ಧಾಳಿ ಮಾಡಿದ ಕಾಲದಲ್ಲಿ ನೆತ್ತರುಡುಗೆ ವುಟ್ಟು ತನ್ನ ರಕ್ಷಣೆಗೆ ನಿಂತಿದ್ದ ಮೀರ ಸಿರಿಗನು ಹೋರಾಡಿ ಮಡಿದದ್ದು ಯಿಧಿತವು. ಅವನು ಮಡಿದಂಥಾ ಆ ಜಾಗದಲ್ಲಿ ಆ ದೊರೆಯ ಮೀರ ಸಿರಿಗನ ಹೆಸರಲ್ಲಿ ನಡೆಸಿದಂಥಾ ಯೀರಗಲ್ಲು ಅದಾಗಿದ್ದಿತು. ಆ ಯೀರ ಸಿರಿಗನು ಕಾಲವಸನಾದ ತರುವಾಯ ಅವನ ತಂದಿ ತಾಯಿಗಳು ಯಿದ್ದೊಬ್ಬ ಮಗನನ್ನು ಕಳಕೊಂಡೆವು ಯಂದು ದುಕ್ತವ ಮಾಡಿದರು. ರಂಡಮುಂಡೆಯಾಗಿ ಯಾಕ ಬದುಕಿರಬೇಕೂಂತ ಆತನ ಹೆಂಡತಿ ಜಕ್ಕವ್ವ ಚಿತಾ ಪ್ರವೇಶ ಮಾಡಿದಳು. ಬಂಧು ಬಳಗ ಅಸದಳ ರೀತಿ ವಳಗ ದುಕ್ಕ ಮಾಡಿತು. ಯುದ್ಧದ ಗೊಡವೆಯೇ ಬ್ಯಾಡವೆಂದು ಆ ಕುಟುಂಬವು ತೀರುಮಾನವ ತಗೊಂಡಿದ್ದು ಕುಂತಳ ಪ್ರಾಂತೀಯದಲ್ಲಿ ಅದೇ ಪ್ರಪ್ರಥಮ. ಆ ಕುಟುಂಬವು ತುಂಬರಹಳ್ಳಿಯಿಂದ ಗುಳೇ ಹೊಂಟು ಬಂದು ಸಿಡೇಗಲ್ಲು ನೂರೊಳಗೆ ನೆಲಗೊಂಡಿತು. ಆ ಯೀರ ವಮುಸಗ್ಗದ ಕರುಳು ಬಳ್ಳಿ ಯಲ್ಲೋ ವಂದು ರೀತಿಯಲ್ಲಿ ಗುಡಿ ಹಿ೦ದಲ ಮೂಳೆ ಮೋಬಯ್ಯನನ್ನು ತಗುಲಿಕೊಂಡಿರುವುದು. ಆ ಕರುಳು ಬಳ್ಳಿಯ ಸಂಬಂಧದ ತಳ ಬುಡ ಗೊತ್ತಿಲ್ಲದ ಮೋಬಯ್ಯನು ಪ್ರತಿ ಸಂವತ್ಸರ ಯಳ್ಳಮವಾಸೆಯ ಮಟಮಟ