ಪುಟ:ಅರಮನೆ.pdf/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೫೬ ಅರಮನೆ ಮದ್ಯಾಣದಂದು ಅಲ್ಲಿಗೆ ಬಂದು ಸದರಿ ಯೀರಗಲ್ಲಿಗೆ ಕಾಯಿ ವಡದು ಸಣು ಮಾಡಿ ಹೋಗುತ್ತಿದ್ದನೆಂಬ ಸಂಗತಿ ಯಲ್ಲೋ ವಬ್ಬಿಬ್ಬರಿಗೆ ಗೊತ್ತಿದ್ದರೆ ಗೊತ್ತಿರಬೌದು.. ಸಿಡೇಗಲ್ಲಿನಿಂದ ಕುದುರೆಡವು ಕಡೇಕ, ಕುದುರೆಡವಿನಿಂದ ಸಿಡೇಗಲ್ಲಿನ ಕಡೇಕ ಹೋಗುವ ದಾರಿ ಹೋಕ ಮಂದಿ ತಮಗ ವಳ್ಳೇದು ಮಾಡಪ್ಪಾ ಯಂದು ಸದರಿ ಯೀರಗಲ್ಲಿಗೆ ವಂದು ಚಟಾಕು ಯಣ್ಣೆ ಯರೆದು ಪ್ರಾರ್ಥಿಸಿ ಸಣ ಮುಕ್ಕೊಳ್ಳುತ್ತಿರುವರು. ಹಿಂಗಾಗಿ ಹೋರ ಸೊರಗದಲ್ಲಿರೋ ಸಿರಿಗನಿಗೆ ದಯವತ್ವವು ಪ್ರಾಪ್ತವಾಗಿರುವುದು. ಅಂಥ ಯೀರಗಲ್ಲಿನ ಬಲಗಡೇಕಿರೋ ಹಾದಿಗುಂಟ ವಂದು ದಮ್ಮು ನಡೆದಲ್ಲಿ ಎಂದು ವಕ್ತಾಣಿ ಬರುವುದು. ಅದು ನುಂಕೇಮಲೇಲಿದ್ದ ರಸಾಸಿದ್ದರು ಕಟ್ಟಿಸಿರುವಂಥಾದ್ದು. ದಾರಿಹೋಕರ, ಕಾಗೆಮ್ಮ ಗುಬ್ಬಿಮ್ಮಗಳ ದಾಹ ತಣಿಸುವಂಥ ತೆಂಗಿನೆಳನೀರಿನಂಥಾ ವುದಕ ಅದರೊಳಗ ವಂದು ಕಾಲಕ್ಕೆ ಯಿತ್ತು. ನಿಚ್ಚಾಪದ ಯುದ್ಧಾಳುಗಳು ತಮ್ಮ ರಕ್ತಸಿಕ್ತ ಖಡುಗಗಳನ್ನು ಯಾವತ್ತದರಲ್ಲಿ ತೊಳಕೊಂಡರೋ ಆ ಹೊತ್ತಿನಿಂದ ಮಂದಗೊಂಡು, ಪಾಚಿ ಬೆಳೆದು ದಾಹ ತಣಿಸುವ ತಾಕತ್ತನ್ನು ಕಳಕೊಂಡಿರುವುದು. ಸದರಿ ವಕ್ರಾಣಿಯ ಯಡಕ್ಕೆ ಬರೋಬ್ಬರಿ ಮುವ್ವತ್ತೊಂದು ಹೆಜ್ಜೆ ಹಾಕಿದಲ್ಲಿ ಬರುವ ಮರವೇ ಅಗಾಧವಾದ ಬೇಯಿನ ಮರವು. ನೋಡಲಿಕ್ಕ ಗಿಡ್ಡ ಸೊಭಾವದ್ದಾದ ಅದು ದ್ವಾಪರ ಕಾಲದ್ದು. ಹತ್ತಾರು ಮಂದಿ ರಾಕ್ಷಸರನ್ನು ತನ್ನೆದೆಯೊಳಗಿಟುಕೊಂಡು ದೊರೆಯುತ್ತಿದ್ದಂಥಾ ದಂಡು ದವಲತ್ತು, ಗತ್ತು ಗಯತ್ತು, ದಂಡು ಜಬರದಸ್ತುಗಳನ್ನು ಮುರಿದು ಮುಕ್ಕುತಲಿದ್ದಂಥಾ ಯುದ್ಧಮಾರಿಯು ತನ್ನ ಹಲ್ಲು ಸಂದುಗಳೊಳಗ ಸಿಕ್ಕೊಂಡಿದ್ದಥಾ ಹೆಣಗಳನ್ನು ತೆಗೆಯಲು ವಂದು ಬೇಯಿನ ಕಡ್ಡಿಯನ್ನು ವುಪಯೋಗಿಸಿದಳಂತೆ. ಆಕೆ ತನ್ನ ಯರಡೂ ದವಡೆಗಳಿಂದ ಕಿತ್ತುಹಾಕಲ್ಪಟ್ಟ ಹೆಣಗಳು ವಂದಾ, ಯರಡಾ, ಸಾವಿರಾರು ಗುಡ್ಡ ಬಿದ್ದಂಥಾ ಹೆಣಗಳ ರಾಸಿಯೇ ಮುಂದ ಮುಂದಕ ಯಮುಕೇಮಿ ಯಂದು ಹೆಸರು ಪಡೆಯಿತಂತೆ. ಅದರೊಳಗ ಸಿದ್ದರ ಗವಿಯಂಬ ಡೊಳ್ಳು ಯಿತ್ತಂತೆ. ಅದು ಹೇಗೆ ಮುಚ್ಚಿಹೋಗಿರುವುದು. ಕಣ್ಣಿಗಟೆಯದೆ ಕೇವಲ ಕಿವಿಗಳಿಗಷ್ಟೆ ಅಟೆಯುತ್ತ ನಿಗೂಢವಾಗಿ ವುಳುಕೊಂಡು ಬಂದಿರುವ ಸದರಿ ಅಗೋಚರ ಗವಿಯ ಶತ್ರುವು ರಾಯದುಗ್ಗದಲ್ಲಿದ್ದ ಸಿದ್ದನಾಥನೆಂಬ ಮುನಿಯಂತೆ.. ಯಿದಕ್ಕೊಂದು ತಳಕು ಹಾಕಿಕೊಂಡಿರುವ ಕಥೆಯು.. ವಂದಾನೊಂದು ಕಾಲದಲ್ಲಿ ರಾಯದುಗ್ಗದ ಕೋಟೆಯನ್ನು ರಾಜರಾಜೇಂದ್ರಯಂಬುವ ಅರಸನು ಆಳುತ್ತಿದ್ದನಷ್ಟೆ. ಅವನಿಗೆ