ಪುಟ:ಅರಮನೆ.pdf/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೧೫೭ ಗತಿಸಿದ ಹೆಂಡತಿಯ ಹೊಟ್ಟೆಯಲ್ಲಿ ಸಾರಂಗಧರನೆಂಬ ಸುಂದರಾಂಗನೂ, ಪರಾಕ್ರಮಿಯೂ ಆದ ರಾಜಕುಮಾರನು ಹುಟ್ಟಿ ಯವ್ವನಕ್ಕೆ ಬಂದಿದ್ದನಷ್ಟೆ ರಾಜನು ಮದುವೆ ಮಾಡಿಕೊಂಡಿದ್ದ ರಾಣಿಯು ಕಾಮಾಗ್ನಿಯಿಂದ ದಹನವಾಗುತ್ತಿದ್ದಳಷ್ಟೆ ಆಕೆ ರಾಜಕುಮಾರನನ್ನು ತನ್ನ ಸಯನ ಮಂದಿರಕ್ಕೆ ವತ್ತಾಯಪೂರುವಕವಾಗಿ ಕಯ್ಯ ಹಿಡಿದು ಯಳೆದಳಷ್ಟೆ ಅವನು 'ತಾಯೇ' ಯಂದು ವುದ್ದಾರ ತೆಗೆದ ಕಾರಣಕ್ಕೆ ತಾಯಿಗಂಡ ಯಂದು ಜರೆದು ಗಂಡಗೆ ದೂರುಕೊಟ್ಟಳಷ್ಟ ರಾಜನು ಯಿಂಥ ಮಗನಿದ್ದರೆಷ್ಟು? ಸತ್ತರೆಷ್ಟು? ಯಂದು ಕೊಲೆ ಮಾಡಿಸಿ ತದನಂತರ ತಾನು ಗ್ರಾನೋದಯಗೊಂಡನಷ್ಟೆ... ಸತ್ಯಾಸತ್ಯದ ಪರಿಸೋಧ ಮಾಡಿದ ರಾಜರಾಜೇಂದ್ರನು ಹೆಂಗಾದ್ರುಮಾಡಿ ತನ್ನ ಯಿದ್ದೂಬ್ಬ ಮಗನನ್ನು ಬದುಕಿಸಿಕೊಡಿರಿ ತಂದೆಯೇ ಯಂದು ರಸಾಸಿದ್ಧನನ್ನು ಬೇಡಿಕೊಂಡನಂತೆ. ಅದಕ್ಕೆ ಸಮ್ಮತಿಸಿದ ಆ ಸಿದ್ದನಾಥನು ದಿವ್ಯದ್ರುಸ್ಸಿ ತೆಗೆದು ನೋಡಲಾಗಿ ಹೆಣಗಳ ರಾಶಿ ಆಳದಲ್ಲಿ ಬಿದ್ದಿರುವುದು ಗಮನಕ್ಕೆ ಬಂತಂತೆ, ಮನೋ ವೇಗದಲ್ಲಿ ಅಲ್ಲಿಗೆ ತಲುಪಿದ ತಾಪಸಿಯು ತನ್ನ ಕಣ್ಣ ನೋಟದಿಂದ ಬಕ್ಕೋತ ಬಕ್ಕೋತ ವಳೀಕ್ಕೆ ಹೋಗಿ ಆ ಹಣವನ್ನು ಹೊರಕ್ಕೆ ತಂದು ಸಂಜೀಯಿನಿ ಮಂತ್ರಜಪಿಸಿ ಬದುಕಿಸಿ ಸಾರಂಗಧರನನ್ನಾಗಿ ಮಾಡಿ ದುಕ್ಕತಪ್ತ ತಂದೆಗೆ ವಪ್ಪಿಸಿದನಂತೆ, ಆ ಗವಿಯೇ ಯಿದಾಗಿರುವುದು, ಯುದ್ದಮಾರಿ ಬಲಿ ತಗೋತಾಳೆಂಬ ಕಾರಣಕ್ಕೆ ಸದರಿ ಗವಿಯ ದ್ವಾರವು ಕಾಲ ಕ್ರಮೇಣ ಮುಚ್ಚಲ್ಪಟ್ಟಿರುವುದಂತೆ. ಸದರಿ ಯಮುಕೇ ಮಲೆಯ ಆಳದ ಯಲುವುಗಳಿಂದ ಬಂಗಾರ ಮಾಡಲಕಂತ, ವಜ್ರಮಾಡಲಕಂತ ವಬ್ಬರಲ್ಲಾ ವಬ್ಬರು ರಸಾಸಿದ್ದರು ಅಲ್ಲಿಗೆ ಬರುವುದು, ಹೋಗುವುದು ಮಾಡುತಲಿದ್ದರಂತೆ. ಅವರ ತಂತ್ರಯಿದ್ದೆಯ ಪುಣ್ಯ ಫಲವು ತಮಗೆ ದೊರೆಯಲೆಂದು ಕೆಲವು ಮಂದಿ ಪುಣ್ಯಾತುಮರು ಅದರ ಬಲ ಮಗ್ಗುಲು ವಂದು ಕಲ್ಲಿನ ಮಂಟಪ ಕಟ್ಟಿಸಿದರಂತೆ. ಅದು ಆ ಕಾಲದ ಮಾತು.. ರಸಾಸಿದ್ದರ ಕಾಲ ಮುಗಿತೋ ಮುಗಿತು, ಅಲ್ಲಿಗೀಗ ಯಾರು ಬರಾಣಿಲ್ಲ.. ಹೋಗಾಣಿಲ್ಲ.. ಕೇಡುಂಟಾತದೆ ಯಂಬ ಕಾರಣಕ್ಕೆ ವಂದೇ ವಂದು ನರಹುಳುಮೊಅತ್ತ ಸುಳಿಯಾಣಿಲ್ಲದ ಕಾರಣಕ್ಕೆ ಹಗಲಿಪ್ಪತ್ನಾಕು ತಾಸು ಆ ಪ್ರದೇಸವು ಬಿಕೋ ಅಂತಿರುವುದು.... ಅಂಥ ನಿಗೂಢವೂ, ಭಯ ಯಿಹ್ವಲಮೂಆದ ಆ ಪಾಳುಮಂಟಪದ ನಟ್ಟ ನಡುವೆ ಗುಡಿ ಹಿ೦ದಲ ಮೂಳೆ ಮೋಬಯ್ಯ ಯಂಬ ಹೆಸರುಳ್ಳ ಭವುತಿಕ ತನುವು ಮಲಕ್ಕೊಂಡಯಿತೆ ಸಿವ ಸಂಕರ ಮಾದೇವಾss ಕಣ್ಣು ತೆರೆದದ್ದು