ಪುಟ:ಅರಮನೆ.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

xix

ಉದ್ಗರಿಸುತ್ತಾನೆ. ಆದರೆ ಅದೇ ನಿರೂಪಕ ಮತ್ತೊಂದೆಡೆ, ಮುಗ್ಧನಂತೆ, ದೇವಿಗೆ ಭಕ್ತಿಯಿಂದ ಜನಸ್ತೋಮ ಪ್ರಾರ್ಥನೆ ಸಲ್ಲಿಸುವಾಗ, ಹರಕೆ ಕಟ್ಟಿಕೊಳ್ಳುವಾಗ, ಜಾತ್ರೆಯ ಉತ್ಸವ ನಡೆಯುವಾಗ, ಇತ್ಯಾದಿ ಸಂದರ್ಭಗಳಲ್ಲಿ, ಜನಸಾಮಾನ್ಯರ ನಂಬಿಕೆಗಳನ್ನು ಪ್ರಶ್ನಾಶೀತವೆಂಬಂತೆ, ಆ ನಂಬಿಕೆಗಳ ಕಾರಣದಿ೦ದಲೇ ಅವರಿಗೆ ಪ್ರೀತಿ-ದಯೆ- ಸ್ನೇಹ ಇತ್ಯಾದಿ ಗುಣಗಳು ಸಾಧ್ಯವಾಗಿರುವಂತೆ ವರ್ಣಿಸುತ್ತಾನೆ. ಪ್ರಾಯಃ “ಭೂತಕಾಲದಿಂದ ಬೇರುಪಡಿಸಿದ ಯಿಂಡಿಯಾಕ್ಕೆ ಅಸ್ತಿತ್ವಯೆಂಬುದೇ ಇರುವುದಿಲ್ಲ” ಎಂಬ ಮನ್ರೋ- ನಿಲುವನ್ನು ನಿರೂಪಕನೂ ಒಪುಔತ್ತಾನೆ.

೩ ಸಾಮಾಜಿಕ ಆಯಾಮ : ಕೃತಿಯ ಮೂರನೆಯ ಆಯಾಮವೆಂದರೆ ಒಂದು ಅರಮನೆಯ ಕಥೆ- ಅಂದಿನ ಕಾಲಘಟ್ಟದಲ್ಲಿ ಭಾರತದಲ್ಲಿದ್ದ ಸಾವಿರಾರು ಅರಮನೆಗಳ, ರಾಜಮನೆತನಗಳ ಕಥೆ; ಯಾವುದೋ ಒಂದು ಸಂದರ್ಭದಲ್ಲಿ ಅಸಾಧಾರಣ ವ್ಯಕ್ತಿಯೊಬ್ಬನ ಧೈರ್ಯ ಸಾಹಸಗಳಿಂದಾಗಿ ಅಸ್ತಿತ್ವಕ್ಕೆ ಬಂದ ಇಂತಹ ರಾಜ್ಯಗಳು ಹಾಗೂ ಅರಮನೆಗಳು ಕಾಲಾಂತರದಲ್ಲಿ ಆ ರಾಜವಂಶದವರ ಉತ್ತರಾಧಿಕಾರಿಗಳ ಸ್ವಾರ್ಥ-ಲಾಲಸೆ-ದೌರ್ಬಲ್ಯಗಳಿಂದಾಗಿ ತಮ್ಮ ಭವ್ಯತೆಯನ್ನು ಕಳೆದುಕೊಂಡು, ನಿಧಾನವಾಗಿ ಹೀನಾಯ ಸ್ಥಿತಿಗೆ ಬಂದು, ಕೊನೆಗೆ ಬ್ರಿಟಿಷ್‌ ಸಾಮ್ರಾಜ್ಯದ ಸಾಗರದಲ್ಲಿ ಬಿಂದುವಾಗಿ ಹೋದ ಕಥೆ.

ಕೃತಿಯಲ್ಲಿ ಬರುವ ಕುದುರೆಡವು ಗ್ರಾಮದಲ್ಲಿರುವ ಅರಮನೆಯ ಕಥೆಯೂ ಇದೆ. ಕೃತಿಯ ಪ್ರಾರಂಭದಲ್ಲಿ ಆ ರಾಜಮನೆತನ ದಯನೀಯ ಸ್ಥಿತಿಯಲ್ಲಿದ್ದು, ರಾಜಮಾತೆ ಭಯ್ರಮಾಂಬೆ ತನ್ನ ಸವತಿ ಮಗನಿಗೆ ಏನೂ ಆಸ್ತಿ ಸಿಗದಂತೆ ಮಾಡಲು ಅನೇಕ ಕುಯುಕ್ತಿಗಳನ್ನು ಯೋಜಿಸುತ್ತಿರುತ್ತಾಳೆ. ಕೃತಿ ಮುಂದುವರೆದಂತೆ, ಒಂದು ಕಾಲದಲ್ಲಿ ಅರಮನೆಯಲ್ಲಿ ಪೀಕದಾನಿ ಹಿಡಿಯುತ್ತಿದ್ದ ಓಬಯ್ಯ ಸಾ೦ಭವಿಯ ವಸ್ತಿಯಾಗಿ, ಅನಂತರ ಅರಮನೆಯನ್ನೇ ಆಕ್ರಮಿಸಿಕೊಂಡು, ಅಲ್ಲಿಯ ಸಿ೦ಹಾಸನದ ಮೇಲೇ ಕೂರುತ್ತಾನೆ.” (ಇಂತಹ) ಯೋಸೋ ಸಿಮ್ಮಾಸನಗಳು ಪ್ರಜೆಗಳ ಕಾಲಿನಿಂದೊದೆಸಿಕೊಂಡು ಯಾವ ಮಾಮೂಲು ಮಂದಿಯ ಅಂಡುಗಳಡಿ ತಳ್ಳಲ್ಪಟ್ಟುವು. ತರಕಾರಿ ಕಾಯಿಗೆಡ್ಡೇನ ಹೆಜ್ಜೋ ಸಲುವಾಗಿ ಹೆಣುಮಕ್ಕಳೆಷ್ಟೋ ಮಂದಿ ಕತ್ತಿ ಕಠಾರಿಗಳನ್ನೆತ್ತೊಯ್ದರು... ಸಿಕ್ಕವರಿಗೆ ಸಿವಲಿಂಗಮೋ” (ಪುಟ ೫೧೭).

ಈ ಬಗೆಯ ಮೂರು ಪ್ರಮುಖ ಕಥೆಗಳಿಂದ ಕಟ್ಟಲ್ಪಟ್ಟಿರುವ ಈ ಕಥಾನಕ ಸಾಗುತ್ತಾ ಸಾಗುತ್ತಾ, ಸಾಂಪ್ರದಾಯಿಕ ಸ್ಥಳಪುರಾಣಗಳು; ತಿಲ್ಲಾನ ತಾಯಮ್ಮ ಮತ್ತವಳ ಮಗಳು ಚಿನ್ನಾಸಾನಿ ಇವರುಗಳ ಪ್ರಣಯ ಕಥೆ, ಭಾರತೀಯ