ಪುಟ:ಅರಮನೆ.pdf/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ OME ಅಮೂಲ್ಯ ಸೋಭೆಯನ್ನು ವರಣನ ಮಾಡಲಕ ಆದಿಸೇಸನಿಗೂ ಅಸದಳ..” ರಂದು ಮುಂತಾಗಿ ಗುಬ್ಬಮ್ಮ ತಾನು ಕಂಡುಂಡ ಅನುಭವವನ್ನು ಸಾದರಪಡಿಸುತಲಿತ್ತು. ತಾನೂ ಜಗಲೂರೆವ್ವನ ನೇತುತ್ವದ ನಿಯೋಗದೊಂದಿಗೆ ಕೂಡ್ಲಿಗಿ ಮಟ ಹೋಗಿ ಬಂದಿತ್ತಲ್ಲಾ... ಆರಕ್ಕೇರದ ಮೂರಕ್ಕಿಳಿಯದ ಜಾಂಯಮಾನವಂದಿಗಳಾದ ಆಕೆಯ ಕಟ್ಟಾ ಅಭಿಮಾನಿಯಾಗಿ ತಾನೂ ಪರಿವರನಗೊಂಡಿತ್ತಲ್ಲಾ... ನಿಯೋಗ ಕುದುರೆಡವು ಕಡೇಕ ಮರಳಿದ ತರುವಾಯ ತಾನೂ ಕುಂಪಣಿ ಸರಕಾರದ ಬಂಗಲೆಯೊಳಗೆ ವುಳಕೊಂಡಿತ್ತಲ್ಲಾ... ಯಡ್ಡವರನ ಹೆಂಡತಿ ಜೆನ್ನಿಫರಮ್ಮಳ ಸವುಂದರಕ್ಕೆ ತಾನೂ ಮರುಳಾಗಿತ್ತಲ್ಲಾ.... 'ಮಲೈ ಕಾಗೆಮ್ಮನೇ ಹೇಳುತೇನಿ ಕೇಳು.. ಆಕೆಯ ಸವುಂದರ ಮಾಮೂಲು ಸವುಂದರ ಅಲ್ಲ ಕಣೇ ನಮ್ಮವ್ವನೇ.. ಹಸುಕೊಂಡೋನಿಗೆ ವುಂಡೊಡನೆ ಆಗುವ ಅನುಭೂತಿಗೆ ಸರಿಸಮನಾದ ಸವುಂದರ ತತ್ವ ಗೀತೆಯೊಳಗಿರುವ ಅನುಭಾವ, ಹೂವಿನೊಳಗೆ ಅಡಕವಾಗಿರುವ ಸಿದ್ಧತೆ, ಅನ್ನದೊಳಗಿರುವ ಸಂತ್ರುಪ್ತಿ, ನೀರಿನೊಳಗಿರುವ ನೆಮ್ಮದಿ, ತಾಯಿ ಯದೆಯೊಳಗಿರುವ ವಾತ್ಸಲ್ಯ, ಹಿರಿಯರ ಮನಸ್ಸಿನೊಳಗಿರುವ ಸಾಂತುವನ ಯಿವೆಲ್ಲ ಕೂಡಿದಲ್ಲಿ ಯೇನಾಗುವುದೋ ಅವೆಲ್ಲ ತಾನಾಗಿರುವಳು ನೋಡು, ಆಕೆಗೆ ತನ್ನ ಬಗ್ಗೆ ವಂಥಟಗಾರ ಹಮ್ಮಿಲ್ಲ.. ವಂಥಟಗಾರ ಬಿಮ್ಮಿಯಿಲ್ಲ.... ಆಕೆ ವಂದೊಂದು ಹೆಜ್ಜೆ ಯಿಕ್ಕುತಾ ಯಿದ್ದರ ಭೂವಾಯಿ ಪುಳಕ ಗೊಳ್ಳುತಲಿದ್ದಳು. ತನ್ನೊಂದೊಂದು ನೋಟದಿಂದ ಮಂಪರನ್ನು ಬಿತ್ತಿ ಬೆಳೆಯುತ ಲಿದ್ದಳು. ತನ್ನೊಂದೊಂದು ಮಾತಿನಿಂದ ತಾನು ಅದ್ವಿತೀಯ ತಾಯಿ ಯಂಬುದನು ಭಾಸ ಮಾಡುತಲಿದ್ದಳು. ಆ ಮಾತುಗಳನ್ನು ಕೇಳಿಸಿಕೊಂಡು ಕಾಗಮ್ಮನ ಹೊಟ್ಟೆ ತೊಳಸಿ ಬಂತು.. ಯಲಾಯ್ ಗುಬ್ಲೆಮ್ಮನೇ, ಆಕೆಯ ಸವುಂದರನ ವರಣನ ಮಾಡಿ ನನಗ ಅವಮಾನ ಮಾಡಬ್ಯಾಡ. ಆಕೆ ಯೇಟಿದ್ದರೂ ಪರಂಗಿ ಹೆಣುಮಗಳಂಬುದನ ಮರೆಯಬ್ಯಾಡ.. ಮುಂದೇನಾತಂಬುದನ ಲಗೂನ ಹೇಳು” ಯಂದು ಕೊಸರಿ ನುಡಿಯಲದಕ್ಕೆಯಿದ್ದು ಗುಬ್ಬಿಮ್ಮನು, “ಅದಕ್ಯಾಕೆ ಮನಸನ ತಟಗು ಮಾಡಿಕಂತಿ ಕಾಗೆಮ್ಮ.. ನೀನು ಕರಗಿರುವುದಕಲ್ಲ ಯೀಟು ಸಿಟ್ಟು.. ಯಪ್ಪಾ ನೀನು ಸುಳ್ಳು ಹೇಳಿದರೆ ಕೇಳುತ್ತಿ, ಖರೆ ಹೇಳಿದರೂ ಕೇಳುತ್ತೀ. ಯಾಕಂದರ ನೀನು ಅರೀದಾಕಿ ಅದೀ.. ಆ ಅಯ್ತುಗೇಡಿ ಮೋಬಯ್ಯನ ಅಯ್ತು ಬಡಕೊಂಡು ಮೂರುವದಕನ ಬಿಟ್ಟು