ಪುಟ:ಅರಮನೆ.pdf/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬೦ ಅರಮನೆ ಬಂದವಳದೀ.. ಯಿರಲಿ ಕೇಳು.. ಆ ಪರಂಗಿ ಹೆಣ್ಣುಮಗಳು ಕುದುರೆಡವಳಗ ವಂದೊಂದು ಮಗುವನ್ನು ಯದೆಗೆ ಅವುಚಿಕೊಂಡು ಮುದ್ದಾಡಿದಳವ್ವಾ.. ವಂದೊಂದು ಮಗುವಿಗೆ ತಾನs ಗಿಲಗಂಚಿ ಆದಳವ್ವಾ.. ಹಸಿದ ಕಂದಮ್ಮಗಳ ಬಾಯಿsಗ ತನ್ನ ಮೊಲೆಗುಂಡಿಗಳನ್ನ ಅಮುಕಿದಳವ್ವಾ, ಆಕೆಯ ಮಾತುಪ್ರದಾನ ವರನಕ ಮರುಳಾಗಿ ತಾಯಂದಿರು ತಮ್ಮ ತಮ್ಮ ಕೂಸುಗಳಿಗೆ ಜೆನ್ನಿಫರಮ್ಮಾ.. ಜೆನ್ನಿಫರಪ್ಪ ಯಂದು ಮರುನಾಮಕರಣ ಮಾಡಿದರೇ ಕಾಗೆಷ್ಟೋ..... ಹಿಂಗ ವಂದೆಲ್ಲು ದಿವಸ ಆ ಪಟ್ಟಣದ ಬೀದಿಬೀದಿ ತುಂಬೆಲ್ಲ ತಿರುಗಾಡೀ ತಿರುಗಾಡೀ ತನ್ನ ಮನಸ್ಸನ್ನು ವರಿ ಮಾಡಿಕೊಂಡು ಕೂಡ್ಲಿಗಿ ಕಡೇಕ ಮುಖ ಮಾಡಿದಳು ಕಣವ್ವಾ, ಆಕೆಯ ಗಂಟುಮೂತಿ ಗಂಡ ಸುಮಕಿರಬೇಕಲ್ಲ..” ಯಂದು ಮಾರುದ್ದನೆಯ ನಿಟ್ಟುಸುರು ಬಿಟ್ಟಿತು.... - ಸಾಂದ್ರತು ಅಲ್ಲಿ ಗಿಜಿಗಿಜಿಗುಡುತ್ತಿದ್ದ ತರಾವರಿ ಪಚ್ಚೆಗಳು ಕಾಗೆಮ್ಮ ಗುಬ್ಲೆಮ್ಮಂದಿರ ಯೀಕ್ಷಕ ಯಿವರಣೆಯನ್ನು ಕೇಳಿಸಿಕೊಳ್ಳದಿರಲಿಲ್ಲ. ತಮ್ಮ ಪ್ರೀತಿಯ ಪಟ್ಟಣವಾದ ಕುದುರೆಡವ ಅಯ್ಯಾತಿ ದುಸ್ಥಿತಿಗೆ ಮರುಗದೆ ಯಿರಲಿಲ್ಲ. ತಮ್ಮ ಪಚ್ಚಿ ಭಾಷೆಯೊಳಗ ಮೋಬಯ್ಯನ ಅಯ್ದ ಗೇಡಿತನವನ್ನು ಸಹಿಸದೆ ಯಿರಲಿಲ್ಲ. ಹೆಂಗಪ್ಪಾ ಕುದುರೆಡವು ಗಮನವನ್ನು ಯಿವಯ್ಯನತ್ತ ಸೆಳೆಯುವುದು? ಯಂದು ಚಿಂತಿಸುತ್ತಿರಬೇಕಾದರ ಕೆಲ ಕವುಜಗಗಳು ಆ ಕೂಡಲೆ ಮುಂದೆ ಬಂದು... * ಪ್ಲಾ.. ಹಾ... ವಂದಲ್ಲಾ...ಯಂಟೊಂಬತ್ತು ಕವುಜಗ.. ಅಗೋ ಯಿಲ್ಲಿ.. ಯಿಗೋ ಯಲ್ಲಿ ವನುವಾಸಯ್ಯನು ಬೊಟ್ಟು ತೋರಿದೊಡನೆ ಗುರಿ ನಿಪುಣನಾದ ವುಪಾಸಯ್ಯನು ಬಿಲ್ಲು ಯದೆಗೇರಿಸಿ ಬಾಣ ಬಿಟ್ಟನು.. ಅದು ಸುಯ್ಯಂತ ಹೋಯಿತು. ಆದರೆ ಆ ಚಲಾಕಿ ಪಕ್ಷಿಗಳಿಗೆ ತಗುಲಬೇಕಲ್ಲ, ತಗುಲಲಿಲ್ಲ. 'ಅರೆ ಯಿವನವನ' ಯಂದನಕಂತ ಅವರೀಲ್ವರು ಅವು ಹೆಂಗೆಂಗೋತಾಮೋ ಹಂಗಂಗೇ ಬಾಣ ಬಿಟುಗಂತ ಮುಂದ ಮುಂದಕ ಧಾವಿಸಿದರು. ಬರು ಬರುತಾ ವುಪಾಸಯ್ಯನು ತನ್ನ ಬತ್ತಳಿಕೆಯಲ್ಲಿದ್ದ ಬ್ರೆಮಾಸ್ತರವನ್ನು ತೆಗೆದು ಅದಕ್ಕೆ ಭೂಮಂತರಗಾಳಿ ಯಂಬುವ ಮಂತರವ ಜಪಿಸಿ ಬೇಟೆಯ ಕುಲದೇವತೆಯಾದ ಬಾಹುಕಮ್ಮಳನ್ನು ಮನದಲ್ಲೇ ನೆನೆದು ಬಿಟ್ಟನು.. ಅದು ಮೊದಲೇ ಬೊಮ್ಮಾಸ್ತರವು.. ದ್ವಾಪರಕಾಲದ ಅರುನಂದು.. ಅದು ಹೆಂಗ ಯಿವಯ್ಯನ ಬತ್ತಳಿಕೆಯೊಳಗ ಆಶ್ರಯ ಪಡಕೊಂಡಿತ್ತೋ.. ಅದು ಬಿಲ್ಲಿನಿಂದ ಹೊಂಟೊಡನೆ.. - ಆ ಸೋದರೀಲ್ವರು ಆನಂದ ತುಂದಿಲರಾಗಿ ಅದನ್ನು ಹುಡುಕ್ಕೋತ... ಹುಡಕ್ಕೋತ ಯೀರಗಲ್ಲು ದಾಟುತ ಯಮುಕೇ ಮಲೆಯನ್ನು ಹತ್ತಿಳಿಯೂತ..