ಪುಟ:ಅರಮನೆ.pdf/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೧೬೧ ವಕ್ರಾಣಿಯನ್ನು ಪರದಕ್ಷಿಣೆ ಹಾಕುತ ಬಂದೂ.. ಬಂದೂ ಆ ಪಾಳು ಮಂಟಪವನ್ನು ಪ್ರವೇಸ ಮಾಡಿದರೆಂಬಲ್ಲಿಗೆ... ಯಾವ ನರಹುಳವು ಬರಲಕ ಹೆದರುತಲ್ಲೋ.. ಅಲ್ಲಿಗೇ ತಾವು ಬಂದಿರುವುದು, ಜೀವವನ್ನು ಬಾಯಿಗೆ ತಂದುಕೊಂಡರು. ತಮ್ಮ ಬಾಣಕ್ಕಾಹುತಿಗೊಂಡ ಕವುಜಗ ಅಲ್ಲುಂಟಾ? ಯಿಲ್ಲುಂಟಾ? ಅಯ್ಯೋ ಕಯ್ದೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲಾ.. ಅದು ಸಿಕ್ಕರೆಷ್ಟು? ಬಿಟ್ಟರೆಷ್ಟು? ಯಿಲ್ಲಿಂದ ತಾವು ಬದುಕಿ ಹೋಗಲಕಂದರ ತಮ ತಮ್ಮ ಹೆಂಡಂದಿರ ತಾಳಿ ಪುಣ್ಯದ ಆಸರೆ ಬೇಕಾಗುವುದು. ಯಿನ್ನೇನು ತಾವು ಅಲ್ಲಿಂದ ಹೋಗಬೇಕೆಂದು ಯೇಟೋ ಯತ್ನ ಪ್ರಯತ್ನವ ಪಡುತಾರ ಸಿವನೇ.. ತಮ್ಮ ಯಿರುದ್ದ ಯೇನೋ ಯಂದು ಅನುಮಾನ ಪಡುತ್ತಾರೆ. ತಮ್ಮನ್ನು ಕಾಪಾಡು ಬಾಹುಕಮ್ಮಾ.. ಬಿಲ್ಲುಬಾಣ ವಲ್ಲೆಂದೇವು.. ಬೇಟೆಗೊಡವೆ ಎಲ್ಲೆಂದೇವು.. ತಮ್ಮ ಹೆಂಡರು ಮಕ್ಕಳು ಅನಾಥವಾಗದಂಗೆ ಮಾಡವ್ವಾ ಯಂದನಕಂತ ಅವರು ಕಯ್ಯ ಮುಕ್ಕಂತವರೆ.. ಅದೇ ಯಾಳೇವಿಗೆ ಸರಿಯಾಗಿ ಯಾದೋ ವಂದು ನರಹುಳುವು ಯಯ್ಯೋ.. ಮೊE ರಂದು ಮುಲುಕಾಡಿದಂಗಾತು.. ಯೀ ಮುಲುಕು ರಸಾಸಿದ್ದಂದೋ? ಸಾರಂಗಧರಂದೋ? ಅಥವಾ ಯುದ್ದಮಾರಿಂದೋ? ಸಿವ.. ಸಿವಾ.. ಸಿವಭಕುತ ನಲ್ಲದವನು ಪ್ರವೇಶ ಮಾಡಲಾಗದು ಯಂಬ ಅಕ್ಷರಗಳಿದ್ದ ಸಿಲಾಪಲಕದಡಿ ನುಸುಗಿ ಹೋಗಿ ನೋಡುತ್ತಾರೆ.. ವಂದು ಮನುಶ್ಯಾಕ್ರುತಿಯು ಯೇಳೋದು ಮಲಗೋದು ಮಾಡುತ ಯಿರುವುದು. ಯದನ್ನೆಲ್ಲೋ ನೋಡಿದಂಗಯ್ತಲ್ಲಾ.. ಯಿದು ಯಾರದೋ ಯಿದ್ದಂಗಯ್ತಲ್ಲಾ.. ದರ ಸನೀಕ ಹೋಗುವುದೋ? ಹೋಗದಂಗ ಯಿರುವುದೋ? ಯಂದು ಅನುಮಾನಿಸೂತ ಸನೀಕಂದರ ಸನೀಕ ಹೋಗಿ ಬಗಬಗ್ಗಿ ನೋಡುತ್ತಾರೆ.. ಅರೆ! ತಮ್ಮ ಗುಡಿ ಹಿ೦ದಲ ಮೂಳೆ ಮೋಬಯ್ಯನು... ಸಿವನ್ನಾಮ ಪಾರೋತಿ ಪತಿ ಹರ ಮಾದೇವೂss ಜಯಮಂಗಳಂ ನಿತ್ಯ ಸುಭಮಂಗಳಂsss