ಪುಟ:ಅರಮನೆ.pdf/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬೪ ಅರಮನೆ ಮೊರೆ ಹೊಕ್ಕಿದ್ದನು. ಗೋಲ್ವಾಯಿಸು, ಮುಕುಡಪ್ಪ ಅಲಿಯಾಸ್ ಪ್ರಾನ್ಸಿಸ್, ಹುಸೇನಪ್ಪ ಅಲಿಯಾಸ್ ಅಂಥೋಣಿಯೇ ಮೊದಲಾದ ಫಾದರಿಗಳು ಆಕೆಯ ಯದುರು ಬಯಬಲ್ಲು ತೆರೆದು ಪಠಣ ಮಾಡುತಲಿದ್ದರು.. ಅದೇ ಬಂಗಲೆಯ ಯೆನ್ನೊಂದು ಕಡೇಕ ಯಿದ್ವಾನ್ ರಾಘುವಯ್ಯಂಗಾರರು ಮಂದ್ರಗತಿಯಲ್ಲಿ ಗಿಟಾರ ನುಡಿಸುತಲಿದ್ದರು. ಮತ್ತೊಂದು ಕಡೇಕ? ಅದೇ ಪಟ್ಟಣದ ಮೂಲೆ ಮೂಲೆಯಲ್ಲಿ ವಲಸಿಗರನ್ನು ವಕ್ಕಲೆಬ್ಬಿಸುವ ಕಾವ್ಯದಲ್ಲಿ ನಿರತರಾಗಿದ್ದ ಸಿಪಾಯಿಗಳು ಲಾಠಿ ಪ್ರಹಾರ ನಡೆಸುತಲಿದ್ದರು... ಯೇಟು ಬಿದ್ದು ಯಿಷ್ಟ ಲಿಂಗಗಾತುರದ ಬುಗುಟೆಯೊಂದು ಹಣೆ ಮ್ಯಾಲ ಕಾಣಿಸಿಕೊಂಡಿದ್ದ ಪರಿಣಾಮ ವಾಗಿ ಬುಗುಡಿ ನೀಲಕಂಠಪ್ಪನು ತನ್ನ ಪ್ರಿಯತಮೆ ತಿಲ್ಲಾನ ತಾಯಕ್ಕಳ ನಿವಾಸದ ಕಡೆ ಸುಳಿಯದೆ ನಾಕಾರು ದಿವಸಗಳು ಭೂತಕಾಲಕ್ಕೆ ಸರಿದಿದ್ದವು. ಆತನ ನೀರಿಕ್ಷೆಯ ಮಡುವಿನೊಳಗಿದ್ದ ತಾಯಕ್ಕ ತನ್ನ ಮಗಳನ್ನು ಕಣ್ಣಳತೆಯೊಳಗಿಡಲು ಅಹರಿತಿ ಶ್ರಮಿಸುತ ಯಿಷ್ಟೊಂದು ಸವುಂದರವನ್ನು ತನ್ನ ಮಗಳಿಗೊಬ್ಬಳಿಗ್ಯಾಕ ಧಾರೆಯರೆದೆ ಸಿವನೇ ಯಂದು ನಾನಾ ಯಿನ್ಯಾಸದಲ್ಲಿ ಸಂಕಟ ಅನುಭವಿಸುತಲಿದ್ದಳು. ನತ್ಯ, ಸಂಗೀತ, ಪೂಜೆ ಪುನಸ್ಕಾರ, ಯೇದಾಂತ ಪಠಣ, ಕಸೂತಿ ವಗಿವಗಿಗಳಿಂದಾಗಿ ಚಿನ್ನಾಸಾನಿಗೆ ತನ್ನ ಸವುಂದರದ ಬಗ್ಗೆ ತಾನು ಯೋಚನೆ ಮಾಡಲು ಪುರುಸೊತ್ತು ಸಿಗುತಲಿರಲಿಲ್ಲ. ತಾಯಕ್ಕಳು ಯಂಥ ಮನಶ್ಯಾಸ್ತ್ರಗ್ನೆಯಿದ್ದಳೆಂದರ.. ತನ್ನ ನಿವಾಸದೊಳಗ ಕೆಲಸ ಬೊಗಸೆಯ ಸಲುವಾಗಿ ರುದ್ಧರೂ, ಕುರೂಪಿಗಳೂ ಆದವರನ್ನು ಮಾತ್ರಅಮೂಲಾಗ್ರವಾಗಿ ನೇಮಿಸಿಕೊಂಡಿದ್ದಳು, ಮನೆಯ ಆಯಕಟ್ಟಾದ ಜಾಗಗಳಲ್ಲಿ ಕಡಿಮೆ ದರೈಯ ಕನ್ನಡಿಗಳನ್ನು ಉಟ್ಟಿದ್ದಳು, ಅದೂ ಗುಟ್ಟಾತಿ ಗುಟ್ಟಾಗಿ.. ತನ್ನನ್ನು ತಾನು ನೋಡಿಕೊಳ್ಳುವ ಜುಲುಮೆಯಿಂದಾಗಿ ಚಿನ್ನಾಸಾನಿ ಕನ್ನಡಿಗಳಲ್ಲಿಣುಕಿಕೊಂಡು ಅಯ್ಯೋ ರಂದಾಡುತ ಸ್ವಯಾಮೋಹವನ್ನು ಕಳಕೊಂತಯಿದ್ದಳು.. ತನ್ನ ಮಗಳು ನೀರೊಳಗೆ ಪ್ರತಿಬಿಂಬ ನೋಡಿಕೊಂಡರೆ ಯಂದಾಲೋಚನೆ ಮಾಡಿ ತಾಯಕ್ಕ ಮನೆಮುಂದಿನ ಕೊಳದಲ್ಲಿ ತರಾವರಿ ಮೀನುಗಳನ್ನೂ, ಹಿಂದಲ ಕೊಳದಲ್ಲಿ ವುಭಯ ಚರ ಪಕ್ಷಿಗಳನ್ನೂ ಬಿಟ್ಟು ಯಚ್ಚರ ವಹಿಸಿದ್ದಳು. ಯಿಂಥ ವಾತ್ಸಲ್ಯಮಯಿ ಸಂಚುಗಳಿಂದಾಗಿ ಚಿನ್ನಾಸಾನಿಯು... ಯತ್ತ ಕುದುರೆಡವು ಗ್ರಾಮದೊಳಗ ಮಂದಿ ಕಲ್ಲಾವುಲ್ಲಿಯಾಗಿಬಿಟ್ಟಿತ್ತು