ಪುಟ:ಅರಮನೆ.pdf/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೧೬೯ ಕಾಗೆಮ್ಮ, ಗುಬ್ಬಮ್ಮ ಸಾಪಳಿಸುತವರೆ ಸಿವನೇ... ಈ ವಾರೆಗಣ್ಣಿಲಿ ನೋಡುತಲೂ, ಕಿವಿಯಾರೆ ಕೇಳಿಸಿಕೊಳ್ಳುತಲೂ ನಿದುರೆ ಮಾಡುತಲವನೆ ಮೋಬಯ್ಯ.... ಗಲಗಲಾಂತ ಮರುಗುತಲಿದ್ದ ಮಂದಿಯೊಳಗಿಂದ ವಡಮೂಡಿದ ಬಲಿದಾನದೋರ ಮನನದಿಂದ ಬಂದಿದ್ದಂಥವನಾದ ಕರುಪ್ಪಳಿಯು “ತಾಯೇss ನೀನು ಹೊಳೆಗೊಂಟು ನನ್ನ ತಾಲವಾದ ಕುದುರೆಡವಳಗ ನೆಲಗೊಂಡ ಮರುಗಳಿಗೇಲಿ ನಾನು ನಿನ್ನ ಪಾದಕ್ಕರುಪಿತ ನಾಗುವೆನು” ಯಂದುಗ್ರಅರಕೇಯ ಮಾಡಿಕೊಂಡು ಬಿಡಲು, ಮೋಬಯ್ಯ ಆನಂದ ವಂದಿಗನಾಗದೆಯಿರಲಿಲ್ಲ... ತಾನು ಕಂಡ ಕಣಸು ನಿಜವಾಗತಯ್ಕೆ, ತನ್ನ ಕರುಮಂಟ ಸರೀರಕ್ಕೆ ಸಾವುರಾರು ಮಂದಿ ಕಮ್ಮ ಮುಗೀತಾರೆ. ಕಾಲಿಗೆ ಬೀಳುತಾರೆ.. ಹಾ..ಹಾ..ಸಾಂಬವಿಯೇ.. ಯಂದನಕಂತ ಮಲಗವನೆ ಮೋಬಯ್ಯ. ಯದ್ದು ಕುಂಡುರಬೇಕೆಂಬ ಯಿಚ್ಚ ತನಗೇನೋ ಯಿತ್ತು.. ಆದರ ಯೇಳಲಕ ಆಗುತಾಯಿಲ್ಲ.. ಯಾರಾರು ಯೇನೇನು ಮಾಡುತಾರ ಯಂಬ ಕುತೂಹಲ ಬೇರೆ.. ಹಂಗ ಮಲಗವನೆ ಮೋಬಯ್ಯ... ರೋಸಿಕೊಂಡ ಮಂದಿ ನಡುವಿದ್ದ ಬಡಕಲೋರ ಕರೆಲ್ಲವ ವಂದು ಹೆಜ್ಜೆ ಮುಂದೆ ಬಂದು ತನ್ನ ಸರೀರವನ್ನು ಪ್ಯಾಡಿದೊಡನೆ ಅವಯ್ಯನು ಸಾವುರ ವರುಷಂಗಳ ನಿದ್ದೆ ಮಾಡಿದವನಂಗೆ ಮೆಲುಮೆಲ್ಲಗೆ ಯದ್ದು ಕೂಕಂಡ.. ವಡನೆ ಸಿವನಾಯ ಪಾರೋತಿ ಪತಿ ಹರಹರ ಮಾದೇವ ಸಿಮದ್ರಮಣ ಗೋಯಿಂದಾ ಗೋಯಿಂದ ಯಾಕುಲ್ಲೆ ಜೋಗ ವುದೋ ವುಧೋss ಯದ್ದು ಕೂಕಂಡವಯ್ಯನು ವುಜ್ಜಿ ಥಳಥಳ ಮಾಡಿ ಕಣಬಿಟ್ಟು ಸುತ್ತಮುತ್ತ ನೋಡುತಾನೆ.. ಜಗೇವು ಅಗ್ಗವಾಗುತಾ ಯಿಲ್ಲ ಯಂಬಂತೆ.. ಮಂದಿ ಅಲ್ಲ ವಾಗುತಾಯಿಲ್ಲ ಯಂಬಂತೆ. ತನ್ನ ಮಾರೀಯ ಸೂಟ ಸೊಟ್ಟ ಮಾಡಿಕಂತವನೆ.. ಹಿಂದಕ ಸರಕಂಡಂಗೆ, ಮುಂದಕ ಜರುಗಿದಂಗೆ ಮಾಡುತವನೆ.. ಯಡಕ್ಕೊರಳಿ ನೋಡಿದಂಗೆ ಮಾಡುತವನೆ.. ಬಲಕ್ಕೊರಳಿದಂಗೆ ಮಾಡುತವನೆ... ಆದರ ಸುತ್ತಾ ಕಡೇಲಿದ್ದ ಸಾಂಬವಿಂಯ ಅಯ್ದ ಹಚಕೊಂಡಿದ್ದ ಮಂದಿ ಅವಯ್ಯನ ದಿವ್ಯ ನೋಟುಗಳಿಗೆ, ಸರದಾಟ, ಮುಲುಕಾಟ, ಜರುಗಾಟಗಳಿಗೆ