ಪುಟ:ಅರಮನೆ.pdf/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೭೦ ಅರಮನೆ ತಲಾ ವಂದೊಂದು ಅಲವುಕಿಕ ಅಗ್ಗವ ಕಟ್ಟುತಲಯ್ಕೆ ಸಿವನೇ.... ಆರು ಬಾವಿಯಿಂದ ಆರು ಕೊಡ ನೀವುದಕವನ್ನು, ಮೂರು ಬಾವಿಯಿಂದ ಮೂರು ಕೊಡ ವಗರುದಕವನ್ನು ತಂದು ಅವಯ್ಯನ ತಡಕಲಂತ ಸರೀರಕ್ಕೆ ಮಜ್ಜಣ ಮಾಡಿಸಿತು, ವಂಭತ್ತು ಗಜ ದೋತರವನ್ನು ಅವಯ್ಯನ ಬಡಕಲ ಸರೀರಕ್ಕೆ ವುಡುಸಿತು.. ಹದಿನಾರು ಮೊಳ ಜೆರಿ ರುಮಾಲನ್ನು ಅವಯ್ಯನ ತಲೆಗೆ ಸುತ್ತಿತು.. ಪಾದಕ್ಕೆ ಛಡಾವು ತೊಡಿಸಿದ್ದೇನು? ಹುವ್ವ ಮಾಲೆಗಳನ ಕೊಳ್ಳಗೆ ಹಾಕಿದ್ದೇನು? ಭಂಡಾರ ಲೇಪನವ ಮಾಡಿದ್ದೇನು? ಸಾವುರ ಮಂದಿ ವಂದು ಸೊರವಾಗಿ ಹಾಡಿ ಪಾಡಿದ್ದೇನು? ಆಮ್ಯಾಲ ಸಿವನ್ನಾಮಪಾರೋತಿ.. ಅಂತ ಕೂಗಿದ್ದೇನು? ಸತಾಪರಾಧವ ಮನ್ನಿಸಾ. ದಯ ಮಾಡಿಸಿ ಕುದುರೆಡವನ್ನ ಪಾವನ ಮಾಡವ್ವಾ. ನೀನು ಪಾದದುಂಗುಟದಿಂದ ಹೇಳದ್ದನ್ನ ತಲೇಲಿ ಹೊತ್ತು ಮಾಡತೇವಂತೆ ಕೇಳಿಕೊಂಡಿದ್ದೇನು? ಆಸ್ತಿ ಕೊಡತೇವಂತ ಹೇಳಿದ್ದೇನು? ಪಾಸ್ತಿಕೊಡತೇವಂತೆ ಕೇಳಿಕೊಂಡಿದ್ದೇನು. ಹಂಗssನ ಮುಂದುವರಿದು ಬಗಸಿದೀ ಅಂದರ ನೆತ್ತರ ಧಾರೇನ ಹರಸತೀವಿ ಯಂದು ವಾಗ್ದಾನ ನೀಡಿದ್ದೇನು? ಪಟ್ಟಣದ ಕಡೇಕ ಮಕ ಮಾಡು ತಾಯೇ ಯಂದು ದಯಾಸ ಬಿದ್ದು ಕೇಳಿ ಕೊಂಡಿದ್ದೇನು? ಜುಲುಮಿ ಮ್ಯಾಲ ಜುಲುಮಿ ಮಾಡಿಸಿಕೊಂಡ ಮೋಬಯ್ಯ ತನ್ನೋಟಕ ತಾನss ಅದೂ ನರ ಮಾನವರಿಗೆ ಅರವಾಗದ ಭಾಷಂರೊಳಗೆ ಮಾತಾಡಿಕೊಳ್ಳಲಾರಂಭಿಸಿದ.. ಅದನ್ನು ನೋಡಿದ ಭಕುತಾದಿಮಂದಿ ಸಾಂಬವಿ ಕೂಡ ಮಾತಾಡಿಕೊಳ್ಳುತ್ತಿರುವನೆಂದೇ ಕಲ್ಪನ ಮಾಡಿಕೊಳ್ಳದೆಯಿರಲಿಲ್ಲ. ಸೋಲುಸೊತ್ತು ಆದ ಮ್ಯಾಲ ಅವಯ್ಯ ಜಯ್ ಜಗದಂಬೆ ಯಂದನಕಂತ ಯದ್ದು ನಿಂತೊಡನೆ ಯಾವತ್ತೂ ಮಂದಿ ಮಾಡಿದ ಹರುಷೋದ್ದಾರ ಮುಗುಲು ಮುಟ್ಟಿತು ಸಿವನೇ.. ವಬ್ಬೊಬ್ಬರ ಯದೆಯೊಳಗೆ ಹರುಷದ ಹೊಳೆಗೆ ನೆರೆಬಂತು. ತಮ್ಮನ್ನು ತಾವು ತಡಕೊಳ್ಳದಾದರು. ತಾಯಿ ತಕ್ಕಾ ತಕ್ಕಾ ಅಂತ ವುಗುರುಗಳಿಂದ ತಮ್ಮ ತಮ್ಮ ಮನೆಗಳ ಮಾಲ ಗೀರಿಕೊಂಡು ರಗುತ ರಂಪಾಟ ಮಾಡಿಕೊಂಡರು. ಮಳ್ಳರಂತೆ ಮರಗಿಡಗಳನ್ನೇರಿ ಕೊಂಬೆ ರೆಂಬೆಗಳಿಗೆ ಜೋತು ಬಿದ್ದರು. ಯಮುಕೇಮಲೆಯನು ಸರಸರಾಂತ ಯೇರಿ “ಕೇಳಿರೆಮೋss ಕೇಳಿರಿ.. ಯಾರೇಳು ಲೋಕಗಳಿಗೆ ಮಾತೆಂಯಾಗಿರುವಂಥ ಸಾಂಬವಿಯು ನಮ್ಮ ಕುದುರೆಡವಿಗೆ ದಯಮಾಡಿ ಸಲಯ್ತಾಳೆ” ಯಂದು ಮಂಟೂ ದಿಕ್ಕಿಗೆ