ಪುಟ:ಅರಮನೆ.pdf/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೭೨ ಅರಮನೆ ತಂಬೂರಿ ತೂಕದ ಮೋಬಯ್ಯನು ವಂದೊಂದೆ ಹೆಜ್ಜೆ ಯಿಡುತ ಸಮೀಪಿಸಿ ಪಲ್ಲಾಕಿಯನ್ನು ಪ್ರವೇಶ ಮಾಡಿ ಸರೀರ ಚೆಲ್ಲಾಡಿದ.... ಪಯಿತ್ರವೂ, ಗುರುತರವೂಆದ ಪಲ್ಲಾಕಿಯನ್ನು ಹೊರುವ ಮಂಗಳ ಕಾರೈವಿಗೆ ನಿಗದಿ ಮಾಡಲ್ಪಟ್ಟಿದ್ದ ಸಮಪ್ರಮಾಣದ ಪಯಲುವಾನರಾದ ಸಿವರಾಯ, ಯತ್ತಿನ ತಿಮ್ಮ ತುಪ್ಪದ ಯರಬಾಲ, ಕನ್ನಪ್ಪರೇ ಮೊದಲಾದ ಹನ್ನೆಲ್ಲು ಮಂದಿಯು ಸ್ವಭಾವತಹ ಕಚ್ಚೆಬಾಯಿ ಭದ್ರವುಳ್ಳಂಥವರು ಮಿಂದು ಮಡಿಯುಡಿಯಿಂದ ಬಂದರು.. ಆದಿಸಗುತಿ ಮಾಯಕಾರೆ ಸಾಂಬasss ನಿನ್ನ ಕಂಡವರಿಲ್ಲ ಸರುಪಾನ ಆರಮಲ್ಲೇsss ದೀಪಾದ ಮಲ್ಲಿಯಾಗಿ ವುರಿಯೂತಃss ಯಂದು ಸೊರಯತ್ತಿ ಹಾಡ ತೊಡಗಿದಳು.. ವುತ್ರಾಣಿ ಕಡ್ಡಿ ಗಾತುರದ ಪಕ್ಕೀರವ್ವ ಅದಕ್ಕೆ ದನಿ ಜೋಡಿಸದೆಯಿರಲಿಲ್ಲ... ಹೋ ಹೋ ಕುದುರೆಡವ ಸಾಮಾಗಿ ನಿನಗಾರು ಸರಿಯವ್ವಾ.. ಸರಿ ಅಂದವರ ಹಲ್ಲು ನಷ್ಟ ಆಗಲಪ್ಪಾ. ಭೋಪರಾಕ್ ಯಂದು ವಕ್ಕೊರಲಿನಿಂದ ಕೂಗಿತು ಜನಾರಣ್ಯವು.. ಮೇರು ಪರುವತದೊಳಗ ಮತ್ತೊಂದು ಪರುವತವು ಸೇರಿಕೊಂಡಂಗೆ ಆ ಸರೀರವು ನಲುವಾಯಿತಂತೆ. ಜಗಜಟ್ಟಿ ಪಯಿಲುವಾನರ ಕಯ್ಲಿ ಆ ಪಲ್ಲಾಕಿಯನ್ನು ಯತ್ತಲಾಗಲಿಲ್ಲವಂತೆ. ಅಂಥವರ ಕಯ್ದೆ ಆಗಲಿಲ್ಲವಂತೆ. ಯಂಥವರ ಕಯ್ಕೆ ಆಗಲಿಲ್ಲವಂತೆ.. ಪಟ್ಟಣ ಸೋಮಿಗಳು ಚಿಂತಾಕ್ರಾಂತರಾಗಿ ಅವುರಾಗು ಅವುರಾಗು ಯಂದು ಪಲ್ಲಾಕಿಯನ್ನು ಅಂಗಲಾಚಿದರಂತೆ.. ಆದರೂ ಅದರ ರುದಯ ಕರಗಲಿಲ್ಲವಂತೆ.. ಕರಗಿ ಅವುರಾಗಲಿಲ್ಲವಂತೆ.. ಪಲ್ಲಾಕಿ ನೆಲ ಬಿಟ್ಟು ಮ್ಯಾಲಕ ಯದ್ದಲ್ಲಿ ಅದೇ ಪಾರಿತೋಸಕವು.. ಯೀ ಪಲ್ಲಾಕಿ ಬೇರೆ ಅಲ್ಲ.. ಹಿಮವತ್ಪರುವುತ ಬೇರೆ ಅಲ್ಲ... ಯಂದನಕಂತ ಜನಸಾಗರವು ನಿಟ್ಟುಸುರುಬಿಡುತಿರುವಾಗ್ಗೆ. ಯರಡು ಹುಡುರು ತಾವೆತ್ತುತೀವಂತ ಮುಂದಕ ಬಂದರಂತೆ.. ಯಿದೇನಿದು? ಯಂಥೆಂಥೋರ ಕಯಾಗಿಲ್ಲ.. ಇವು ಯೆತ್ತುವುದೆಂದರೇನು? ಯಂದು ಪಟ್ಟಣ ಸೋಮಿಗಳು ಮೂಗಿನ ಮ್ಯಾಲ ಬೊಟ್ಟಿಟ್ಟುಕೊಂಡರಂತೆ.. ಯೆತ್ತಲಕ ಹೋಗಿ ಬಕಟೆಬಾರಲು ಬಿದ್ದಿರಪ್ಪಾ ಬ್ಯಾಡ ಮಕ್ಕಳ ಬ್ಯಾಡ ಯಂದು ದಯವಸ್ತರು ಹೇಳಿದರಂತೆ. ಯಾರ ಮಕ್ಕಳಿವು ಯಂದು ಹಿರೀಕರು ಕೇಳಿದಕ ಹೊಲೇರ ಕತ್ತಲನು ಯಪ್ಪಾ ಇವು ನನ ಮಕ್ಕಳು