ಪುಟ:ಅರಮನೆ.pdf/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೭೫ ತರುತ್ತಿರುವರು? ಅವನನ್ನು ಜೀವ ಸಹಿತ ಹಿಡಿದು ಕೊಟ್ಟವರಿಗೆ ಯರಡು ಸಾವಿರ ರೂಪಾಯಿ, ಕೊಂದವರಿಗೆ ಸಾವುರದಯೂರು ರೂಪಾಯಿ, ಸುಳುವು ನೀಡಿದವರಿಗೆ ಸಾವುರ ರೂಪಾಯಿ ಯಿನಾಮು ನೀಡುವುದಾಗಿ ಪ್ರಚಾರ ಮಾಡುತ್ತಿರುವರು. ಮಾಡೋ ಕೆಲಸ ಬದುಕು ಮಸ್ತು ಯಿದ್ದರೂ ಸಿಪಾಯಿಗಳು ಕೋವಿ ಹಿಡಕೊಂಡು ಕಾಡುಮೇಡುಗಳಲ್ಲಿ ಯಾಕ ಅಂಡಲೆಯುತಲಿರುವರು. ಯೇಸಗೀಸ ಹಾಕಿಕೊಂಡ್ಯಾಕ ನಿಗಾಯಿರಿಸಿರುವರು. ಯಿದು ನ್ಯಾಯವಾ ಯಂದು ಕಲೆಟ್ಟರಾದ ತಾನು ನಮ್ಮೆ ಕೇಳಿದ್ದಕ್ಕೆ ಮಾರೋನು ಎಂದು ಪತ್ರವನ್ನು ತನ್ನ ಮುಂದೆ ಹಿಡಿದನು. ಅದರಲ್ಲಿ ತನ್ನನ್ನು ನಾಯಿಯಂದು ಕರೆದಿರುವುದಾಗಿ, ಕುಂಪಣಿ ಸರಕಾರವನ್ನು ಹೀನಾಯವಾಗಿ ಜರೆದಿರುವುದಾಗಿ ಅನುವಾದ ಮಾಡಿದನು. ಕಾನೂನು ಕಟ್ಟಳೆಗಳನ್ನು ತನ್ನ ಕಾಲಕಸ ಮಾಡಿಕೊಂಡಿರುವ ರೆಡ್ಡಿಯು ಮುಂದೊಂದಿವಸ ತಮ್ಮ ಸರಕಾರದ ಯಿರುದ್ಧ ದಂಗೆ ರಬ್ಬಿಸಬಹುದೆಂದೂ ಹೇಳಿದನು. ಅದಕ್ಕಾಗ ಮನೋಗೆ ಜವಾಬು ಕೊಡಲಾಗಿರಲಿಲ್ಲ. ಅದೆಲ್ಲವನ್ನು, ಯಿದೆಲ್ಲವನ್ನು ಯೋಚನೆ ಮಾಡೀ ಮಾಡೀ ಆತನು ಹನ್ನೊಂದನೆ ಸಲಕ್ಕೆ ನಿಟ್ಟುಸಿರು ಬಿಡುತ್ತಿರುವಾಗ್ಗೆ, ಆತನು ಬಿಟ್ಟ ನಿಟ್ಟುಸಿರುಗಳು ವಂದಕ್ಕೊಂದು ತಳಕು ಹಾಕಿಕೊಂಡು ಸುಂಟುರು ಗಾಳಿಯೋಪಾದಿಯಲ್ಲಿ ಸಂಚರಿಸುತ.. ಸಂಚರಿಸುತss ಅಲ್ಲಿಗೆ ಹರದಾರಿ ದೂರದ ಗುಬ್ಬಿಗುಡ್ಡದ ರಣಗವಿಯೊಳಗೆ ತನ್ನ ಸಹಚರರೊಂದಿಗೆ ತನ ಬರನದಲ್ಲಿ ತೊಡಗಿದ್ದ ಬೊಬ್ಬಿಲಿ ನಾಗಿರೆಡ್ಡಿಯದುರು ಪ್ರತ್ಯಕ್ಷವಾದಾಗ್ಗೆ.. ಯಿತ್ತ ಹರಪನಹಳ್ಳಿ ಪ್ರಾಂತದ ಅರಸೀಕೆರೆಗೆ ಕಳ್ಳ ಅರಸೀಕೆರೆ ಯಂಬ, ಸುಳುವಾಯಿಗೆ ಸುಳ್ಳು ಸುಳುವಾಯಿ ಯಂಬ, ತಡಬಗೆರೆಗೆ ತಾರಾತಿಗಡಿಯೋರ ತಡಬಗರೆ ಯಂಬ ಬಿರುದುಗಳು ಯಾದ್ರುಚ್ಛಿಕವಾಗಿ ಪ್ರಾಪ್ತಗೊಂಡಿದ್ದವು. ಅಲ್ಲೆಲ್ಲಾ ಸುಳ್ಳುತನ, ಕಳ್ಳತನ, ತಾರಾತಿಗಡಿತನ, ದಗಲುಬಾಜಿತನಗಳೆಲ್ಲ ಸಾಮಾಜಿಕ ಮವುಲ್ಯಗಳಾಗಿಬಿಟ್ಟಿದ್ದವು. ಮೋಸದ ಯಿಯಿದ ಆಯಾಮಗಳ ಕುರಿತ ವಬ್ಬೊಬ್ಬರು ವಂದೊಂದು ದವಾಗಿ ಚತ್ಸೆ ಮಾಡುತಲಿದ್ದರು. ಗಂಡನಾದವ ಹೆಂಡತಿಗೆ, ಹೆಂಡತಿಯಾದವಳು ಗಂಡಂಗೆ, ಮಕ್ಕಳಾದೊವು ತಮ್ಮ ತಂದೆ ತಾಯಿಗಳಿಗೆ, ತಂದೆ ತಾಯಿಗಳಾಗಿದ್ದವರು ತಮ್ಮ ಮಕ್ಕಳಿಗೆ, ಶಿಷ್ಯರಾದವರು ಗುರುಗಳಿಗೆ, ಗುರುಗಳಾಗಿದ್ದವರು ತಮ್ಮ ಶಿಷ್ಯರುಗಳಿಗೆ ಮೋಸ ಮಾಡಲಾರಂಭಿಸಿದ್ದರು. ಸುಳ್ಳಿನ ಸೂನ್ಯ ಸಿಮ್ಮಾಸನದ ಮ್ಯಾಲ ಹರಿಶ್ಚಂದ್ರನನ್ನೂ,