ಪುಟ:ಅರಮನೆ.pdf/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೧೭೭ ಸದರಿ ಪಟ್ಟಣದ ಮಿನ್ನೊಂದು ಮೂಲೆಯಲ್ಲಿದ್ದ ತಿಲ್ಲಾನ ತಾಯಕ್ಕ ಅಂತೂ ತನ್ನ ಮಗಳು ಚಿನ್ನಾಸಾನಿಯನ್ನು ಸೂರತಿ ಯಾಮೋಹದಿಂದ ಯಿಮುಕ್ತಿಗೊಳಿಸುವಲ್ಲಿ ತಕ್ಕಮಟ್ಟಿನ ಯಶಸ್ಸು ಸಾಧಿಸಿದ್ದಳೆಂದೇ ಹೇಳಬೌದು. ತನ್ನ ಕುಂಡಿಯ ಮ್ಯಾಲ ಬದನೇಕಾಯಿ ಗಡುತರದ ಯರಡು ಕುರುಗಳೆದ್ದಿದ್ದ ಕಾರಣಕ್ಕೆ ಬೋರಲು ಮಲಗಿಕೊಂಡೇ ಬುಗಡಿ ನೀಲಕಂಠಪ್ಪನು ಆಕೆಯ ಬುದ್ದಿಮತ್ತೆಯನ್ನು ಮನಸೇಕ್ಷೆ ಕೊಂಡಾಡಿದನು. ಪಾರಪಂಚಿಕ ಯಾಮೋಹದಿಂದ ಪುಟ್ಟಣ ಪೂರಿ ದೂರ ವುಳಿದಲ್ಲಿ, ಮಗಳು ಮುಂದೆ ಮದುವೆಯಾಗದಿದ್ದಲ್ಲೇನು ಗತಿ? ಮದುವೆಯಾಗಿ ಗಂಡನನ್ನು ಸೇರದಿದ್ದಲ್ಲೇನು ಗತಿ? ಗಂಡನ ಸೇರಿ ಮಕ್ಕಳ ತಾಯಿಯಾಗದಿದ್ದಲ್ಲೇನು ಗತಿ? ಅಪುತಸ್ಯಗತಿರಾಸ್ತಿ.. ಯಂದು ಮುಂತಾಗಿ ವಾದ ಮಂಡನೆ ಮಾಡಿದ ಅವಯ್ಯಗ ತಾಯಕ್ಕ ಹೇಳುತ್ತಾಳೆ, ತಮ್ಮ ಮನೆಯಲ್ಲಿ ಯೀಗಾಗಲೆ ಯಿರುವ ಕಳಪೆ ಗುಣಮಟ್ಟದ ಕನ್ನಡಿಗಳನ್ನು ಬದಲಾಯಿಸಿ ವುತ್ತಮ ದಡ್ಡೆಯ ಕನ್ನಡಿಗಳನ್ನು ಅಮರಿಸುವುದೆಂದು.... ಯಿತ್ತ ಕುದುರೆಡವು ಪಟ್ಟಣದ ಸಿಡೇಗಲ್ಲ ಅಗಸೆ ಬಾಕಲಾಚೇ ಕಡೇಕ ಯಿದ್ದ ಕರುಗಲ್ಲ ಜವಳಗ ಮೋಬಯ್ಯನು ಪಲ್ಲಾಕಿಯಿಂದ ಜಿಗಿದಿಳಿದು ಕೂತುಬಿಟ್ಟಿದ್ದನು. ಜಪ್ಪಯ್ಯಾ ಅಂದರೂ ಕರಗಲೀಚ್ಚೆ ಕಡೇಕ ವಂದು ಹೆಜ್ಜೆನ ತೆಗೆದಿಡಲಿಲ್ಲ. ಯವ್ವಾ... ತಾಯೇ ಯಂದು ಮಂದಿ ಮನಾರ ಬೇಡಿಕಂತು.. ಆದರೆ ಅವಯ್ಯನ ರುದಯ ಕರಗಲಿಲ್ಲ.. ಆವಯ್ಯನ ರಾಯಭಾರಿ ಹಾಂಗಿದ್ದ ಗಂಟಲಯ್ಯನು “ಸುಮಸುಮ್ಕ ತಾಯಿ ತನ್ನ ಪಾದವನ್ನು ಮೊರೊಕ್ಕೆ ಯಿಡೂಂದರ ಹೆಂಗ ಯಿಟ್ಟಾಳು. ಆಕೆ ಯೇನು ನಮ್ಮ ನಿಮ್ಮಂಗ ಮಾಮೂಲು ಮನುಸ್ಕೊಳೇನು? ಭವತಿಕ ರೂಪ ಅಯಿತಂದ ಮಾತ್ರಕ್ಕೆ ಅದೇನು ನಸ್ವರ ಜಾತಿಯ ಮಾಮೂಲ ಸರೀರವಃ ಯಿಂದ್ಯಾ ಪರವುತದ ಸಾಲೇ ಅದೆಂದು ತಿಳಕೋರಿ.. ಅದರೊಳಗೆ ವಸ್ತಿ ಮಾಡಿರುವಾಕಿ ಯಿಂದ್ಯಾವಾಹಿನಿ ಯಂದೇ ತಿಳಕೋರಿ.. ಆಕಿ ಕೋಟಿ ಕಿವಿಗಳಿಂದ ನೋಡಾವಳSS ಆಕೆ ಕೋಟಿ ಕಣ್ಣುಗಳಿಂದ ಕೇಳಾವಳss ಆ ಮಾತಾಯಿ ಕರುಗಲ್ಲ ಮಟಾ ಬಿಜಯಂಗಯ್ದಿರೋದೆ ಪುಣ್ಯ ಅಂತ ತಿಳಕೋರಿ.. ಆಕೆ ನಮ್ಮ ನಿಮ್ಮ ಕಣ್ಣಳತೆ, ಕೂಗಳತೆಯೊಳಗ ವಸ್ತಿ ಮಾಡಿರೋದೇ ಪಟ್ಟಣದ ಸುಕ್ರುತ ಅಂಥ ತಿಳಕೋರಿ.. ತಾಯೊದು ಸುಚುಮ ಪ್ರಕ್ರುತಿಯಿರತದ.. ಯೇನಾರ ಅಂದಾಡಿ ಮಾತಿನ ಮಯ್ಲಿಗಿ ಮಾಡಿದಿರಂದರ ಸುಟ್ಟು ಭಸುಮಾತೀರಿ...” ಯಂದನಕಂತ ಅವರನ್ನೆಲ್ಲ ಭಯದ ಮಿಣಿಯಿಂದ