ಪುಟ:ಅರಮನೆ.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

xxi
ನೋಡಲು ಅನುವು ಮಾಡಿಕೊಡುತ್ತದೆ.
ಎರಡನೆಯದಾಗಿ, ವ್ಯಂಗ್ಯ-ವಿಡಂಬನೆಗಳಿಂದ ಮುಕ್ತವಾದ ಸಮಾನ
ಧೋರಣೆಯಿಂದ ಗಂಭೀರ ಹಾಗೂ ಕ್ಷುಲ್ಲಕ ಸಂಗತಿಗಳನ್ನು ವರ್ಣಿಸುವಾಗ,
'ಗಂಭೀರ-ಕ್ಷುಲ್ಲಕ' ಅಥವಾ 'ಮುಖ್ಯ-ಅಮುಖ್ಯ' ಎಂಬಂತಹ ದ್ವಿಮಾನ
ಶ್ರೇಣೀಕರಣವೇ ಅಳಿಸಿ ಹೋಗಿ, ಸಕಲ ಚರಾಚರ ವಸ್ತುಗಳನ್ನು, ಜೀವಿಗಳನ್ನು,
ಘಟನೆಗಳನ್ನು ಸಮಾನವಾಗಿ ನೋಡಲು ಸಾಧ್ಯವಾಗುತ್ತದೆ; ಮತ್ತು ಭಾಷೆ
ಸಹಜವಾಗಿ ರೂಪಕಾತ್ಮಕ ವಾಗುತ್ತದೆ. ನಿದರ್ಶನಾರ್ಥವಾಗಿ ಈ ಕೆಲವು
ವರ್ಣನೆಗಳನ್ನು ನೋಡಬಹುದು:
ಅ. “ಆಕಾಸದ ಕರಿಗಂಬಳಿ ಮ್ಯಾಲ ಕಾಳು ಕಡಿ ವಣಹಾಕಿದಂಗಿದ್ದ ಚುಕ್ಕಿ
ನಕ್ಷತ್ರಗಳು ಯಿದ್ದುವು. ಅವುಗಳನ್ನು ಮಾಯಾದ ಪಕ್ಷಿಗಳು ಬಂದು ಗುಳುಂ
ಗುಳುಂ ಅಂತ ನುಂಗಿಯಾವು ಯಂದು ಚಂದ್ರಾಮ ತನ್ನ ಕಯ್ಯೊಳಗ ಬಡಿಗೆ
ಹಿಡಕೊಂಡು ಕಾಯಕಂತ ಯಿದ್ದನು.”
ಆ. "(ಚಿನ್ನಾಸಾನಿ)ಚಂದ್ರಾಮನ ಬೆಳದಿಂಗಳನ್ನು ಸರ್‍ರಂತ ಮಯ್ಯಿ ತುಂಬ
ಹೀರಿಕೊಳ್ಳುತ್ತಿದ್ದಳಷ್ಟೇ; ಬಗೆಬಗೆಯ ಪುಷ್ಪರಾಜಿಯಿಂದ ವಲಸೆ ಬರುತಲಿದ್ದ ಪರಿಮಳ
ಸವುಂದರ್ಯಕ್ಕೆ ತಾನು ತನ್ನ ಸರೀರದ ತುಮ್ಬೆಲ್ಲ ಆಸ್ರಯ ನೀಡುತ್ತಿದ್ದಳಷ್ಟೇ;
ನೋಡೋರ ಕಣ್ಣುಗಳೊಳಗ ಗೊಂಬಿಯಾಗಿದ್ದಳಷ್ಟೇ; ಕಾಮನಬಿಲ್ಲುಗಳಿಗೆ ತನ್ನ
ಕಣ್ಣುಗಳಲ್ಲಿ ಆಶ್ರಯ ನೀಡಿದ್ದಳಷ್ಟೇ; ತಾನೇ ಒಂದು ನಡೆದಾಡುವ ಹೂದೋಟ
ವೆಂಬಂತೆ ದುಂಬಿ ಪತಂಗಗಳಿಗೆ ಭ್ರಮೆಯನ್ನುಂಟು ಮಾಡುತಲಿದ್ದಳಷ್ಟೇ; ...”
ಇ. “ಆ ಚಣ ಚೆಲ್ಲಿದ ಮುಗುಳು ನಗೆಯು ವಸ್ತಿಯ ಕಪ್ಪಾನು ಕಪ್ಪನೆಯ
ತುಟಿಸಂದುಗಳಿಂದ ಜಿನುಗಿ ಜಿನುಗು ಹಳ್ಳವಾಗಿ ಕುದುರೆಡವು ಪಟ್ಟಣದ ಹಾದಿ
ಹಾದಿಗುಂಟ, ಬೀದಿ ಬೀದಿಗುಂಟ, ಸುಧಾರಸಪ್ರಾಯವಾಗಿ ಹರಿದಾಡಿತೆಂಬಲ್ಲಿಗೆ;
ಅದು ಆಸ್ತಿಕಮೂಆಗಿತ್ತೆಂಬಲ್ಲಿಗೆ; ತಾಯಂದಿರ ಮೊಲೆಗಳು ಹಾಲಿನಿಂದ
ಜೀಕಾಡಿದವೆಂಬಲ್ಲಿಗೆ, ಸಂತರಸ ಕೂಸುಕಂದಮ್ಮಗಳು ಅವುಗಳ ಗುಂಡಿಗಳನ್ನು
ಜಮಡುತ್ತಾ ಅನುಗಾಲದ ಹಸಿವನ್ನು ತೀರಿಸಿಕೊಂಡವೆಂಬಲ್ಲಿಗೆ; ಕೇಕೆ
ಹಾಕಲಾರಂಭಿಸಿದ ಕಂದಮ್ಮಗಳನ್ನು ಮುದ್ದಾಡಿ ಮುಗಿಲಿಗೆತ್ತಿ ಹಿಡಿದರೆಂಬಲ್ಲಿಗೆ
...ಸಿವ ಸಂಕರ ಮಾದೇವಾಆಆಆಆ”
ಇಂತಹ ನಿದರ್ಶನಗಳು ಕೃತಿಯುದ್ದಕ್ಕೂ ಹಾಸುಹೊಕ್ಕಾಗಿವೆ.
ಕೊನೆಯದಾಗಿ, ಅಷ್ಟೇನೂ ಮುಖ್ಯವಲ್ಲದ ಒಂದು ಅಂಶವನ್ನು ಪ್ರಸ್ತಾಪಿಸಿ,
ಈ ದೀರ್ಘ 'ಪ್ರವೇಶ'ವನ್ನು ಮುಗಿಸಬಹುದು. ಇಲ್ಲಿಯವರೆಗೂ ನಾನು