ಪುಟ:ಅರಮನೆ.pdf/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೧೮೧ ಜಮೀನಿನಂಥ ಸ್ಥಿರಾಸ್ತಿ ತನ್ನ ವಡೆತನದಲ್ಲಿದ್ದಿದ್ದಲ್ಲಿ.. ಭಮ್ರಮಾಂಬೆ ತೂಕಡಿಕೆಯಲ್ಲಿ ಯಚ್ಚರಗೊಳ್ಳು ತಲಿದ್ದಳು. ಚರಾಸ್ತಿ ಸ್ಥಿರಾಸ್ತಿ ಯಲ್ಲ ಚಂಚಲ ಸೊಭಾವದ್ದು ತಾಯೇ.. ಅದು ದೀವಿಗೆಯ ಕುಡಿಯಿದ್ದಂಗೆ ಯಂದು ಯಂಕಾವಧೂತರು ಪ್ರವಚನ ಸಂದರದಲ್ಲಿ ಹೇಳಿದ್ದನ್ನು ಪದೇ ಪದೇ ಗ್ರಾಪಕ್ಕೆ ತಂದುಕೊಂಡಳು. ಯಿವೆಲ್ಲ ಚಾಣಾಕ್ಷರು ಆಡುವ ಮಾತು ಯಂದುಕೊಂಡಳು. ನೀತಿ, ಬುದ್ದಿವಾದದ ಮಾತುಗಳು ಕೇವಲಾತಿ ಪ್ರಜೆಗಳಿಗೆ ಅನುವಯಿಸುತ್ತವೆ ಹೊರತು ತಮ್ಮಂಥ ಸೇಷ« ರಾಜಸಂಜಾತರಿಗಲ್ಲ.. ಕಣ್ಣಾಯಿಸುತ್ತಾಳೆ ಸುತ್ತಮುತ್ತ.. ಅಗೋ ಅಲ್ಲೊಂದು ಭಾರೀ ಗಾತುರದ ಕೊಳಗ.. ಯಿಗೋ ಯಿಲ್ಲೊಂದು ದೊಡ್ಡ ದೊಡ್ಡ ಸಂದೂಕ. ಗೋಡೆಗಳ ಮಾಲ ಪೂರುವಿಕರ ತಂಝ ವರಪಟಗಳು.. ಯಿಲ್ಲಾಣ ಜೇಡೆಣೆದಿರುವ ಕತ್ತಿ ಗುರಾಣಿ ಕಿಂಕಾಪುಗಳು. ಮುಂದೊಂದಿವಸ ಕಾಟಯ್ಯನ ಹಸ್ತ ಚಳಕದಿಂದಾಗಿ ಹೊಸಹ ನೆಸಲೇಯ ಸುಪದ್ದಿಗೆ ಹೋದರೂ ಹೋದಾವು.. ಸದ್ಯಕ್ಕೆ ಸಾಂಬವಿಯ ದಯೆಯಿಂದ ಅವನು ರೋಮ ವಂಚಿತಗೊಂಡು ಮೂಲೆಗುಂಪಾಗಿರುವನು. ಯಿಲ್ಲೆಂದಲ್ಲಿ ಅವಯ್ಯನು ಯೀ ಹೊತ್ತಿಗೆ ಯಲ್ಲೆಲ್ಲಿ ಚದುರಂಗವಾಡುತಲಿದ್ದನೋ?.... ಅವನ ಮಮ್ಮಿ ಮ್ಯಾಲ ಕೂದಲು ಚಿಗಿಸೋ ನಿಮಿತ್ತ. ಹಲವು ತಗ್ಗಗಳ ಕುಡಿಕೆಗಳನ್ನು ಹಿಡಕೊಂಡು ವಳ ಹೋಗಿ ಬರುತ್ತಿರುವ ಅಯ್ತಾರು ಮಂದಿ ಆಯುರುವಯ್ದ ಪಂಡಿತರು. ತನ್ನ ಮತ್ತು ಗುಂಡಯ್ಯಸಾಸ್ತಿರಿ ನಡುವೆ ನಡೆಯುತ್ತಿರುವ ಮಾತುಕತೆಯ ಮ್ಯಾಲ ನಿಗಾ ಯಿಟ್ಟಿರಬೇಕವರು.. ನಿಗಾ ಯಿಡುವುದು, ಅನುಮಾನಿಸುವುದು ರಾಜಕಾರಣದ ಧರುಮವು.. ಪೂರುವಿಕ ರಾಜರು ತಮ್ಮ ಅರಮನೆಯೊಳಗೆಲ್ಲೋ ಅಪಾರ ನಿಧಿಯನ್ನು ಹೂತಿಟ್ಟಿರುವುದು ಖರೆ.. ಅದೂ ಆಪತ್ತಿಗಾಗಲೀ ಯಂಬ ಕಾರಣಕ್ಕೆ... ಅದರ ದೆಲ್ಲಿದ್ದೀತು? ಸಾಸ್ತಿರಿಯ ಮುಂದೆ ತಾಳೆಗರಿ ಕಟ್ಟುಗಳನ್ನು, ತಾಮ್ರದ ಪಟಗಳನ್ನು, ನಿಗೂಢ ನಕ್ಷೆಯನ್ನು ಮುಂದೆ ಹರಡಿದ್ದಳು.. ರಾತ್ರಿಕಾವಳದೊಳಗ ಕೇಳಿಬರುತಲಿದ್ದ ಕಯ್ಯ ಬಳೆಗಳ, ಕಾಲುಗೆಜ್ಜೆಯ ಸದ್ದು ಪಿಸು ಮಾತುಗಳು... ವೆಲ್ಲವನ್ನೂ ಯಿವರಿಸಿದ್ದಳು. ನಾನು ಬರುತೀನಿ.. ನಾನು ಬರುತೀನಿ ಅಂಬುವಾಕೆ ಸಾಕ್ಷಾತ್ ಲಚುಮೀದೇವಿಯೇ ಯಿದ್ದಿರಬೇಕು ಯಂಬ ಕಾರಣಕ್ಕ... ಸಂಕೇತಾಕ್ಕಸರಗಳನ್ನು ಮೋದುತಲಿದ್ದ, ಗುಣಾಕಾರ, ಭಾಗಾಕಾರ ಮಾಡುತಲಿದ್ದ ಸಾಸ್ತಿರಿ ಸಾಮಾನ್ಯ ಯಕ್ತಿಯಲ್ಲ.. ಅಮಲಿಮಲ ಯಿದ್ಯೆಗಳಲ್ಲಿ ನಿಷ್ಣಾತನು. ಯಿವಯ್ಯನು ತನ್ನ ವಾಮಾಚಾರ ಯಿದ್ಯೆಯಿಂದ