ಪುಟ:ಅರಮನೆ.pdf/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೮೪ ಅರಮನೆ ಅದು ದೂರಕ ಜರಗತಯೋ ಹೆಂಗೆ? ಅನಕಂತ.. ಅನಕಂತ ನಡುವಿನ ಮ್ಯಾಲೊಂದು ಕಯ್ಯ, ಚೂರಿಯಂಥ ಕಣ್ಣಹುಬ್ಬಿನ ಮ್ಯಾಲೊಂದು ಕಮ್ಮ ಯಿರಿಸಿ ನೋಡುತ್ತಾಳೆ.. ಅರೇ! ತಾನು... - ಆ ಸಿಡೇಗಲ್ಲು ಹಾದಿವಳಗೆ ಕರಗಲ್ಲು ಯಿತ್ತಲ್ಲಾ.. ಅದರ ಮಗ್ಗುಲು ತಾಯಿಯ ಬಿಸಿವು ಸುರಿಗೆ ಬಾಡುತಲಿದ್ದ ಅನುವಾದ ಬೇಯಿನಮರ ಯಿತ್ತಲ್ಲಾ.... ಅದರ ಅಡೀಕೆ ಕ್ರುತಯುಗ ಕಾಲದಲ್ಲಿ ಯಿಸುವಾ ಮಿತ್ರಮುನಿಯು ತನ್ನ ಬೆವರಿನಿಂದ ನಾದಿ ಕಟ್ಟಿರುವ ಗದ್ದುಗೆ ಯಿತ್ತಲ್ಲ. ಅಲ್ಲಿಗೇ ತಾನು ಬಂದು ಮುಟ್ಟಿರುವುದು. ಅಲ್ಲೇ ತಾಯಿಯ ವಸ್ತಿಗೆ ತಕ್ಕ ಯೇರುಪಾಡು ಮಾಡಿರುವಲ್ಲ... ಬೆಳ್ಳಂಬೆಳಗು ವುರಿದು ಬೆಳಕು ಕೊಡೋಕೆ ನೂರಾವಂದು ದೀವಟಿಗೆಗಳ ಯೇರುಪಾಡು ಮಾಡಿರುವರಲ್ಲ... ಸುಕ್ಕಾಡಿ, ದೊಮಾರಿ, ನೊಣ, ಕ್ರಿಮಿ, ಕೀಟ ಮೋಡಿಸಲಕಂಠ ಧೂಪ ಯಬ್ಬಿಸಿರುವರಲ್ಲ.. ತಾಯಿ ಯಚ್ಚರಾಗಲಕೊಂದು ಪದ ಹಾಡಲಕ, ತಾಯಿ ಮಲಗಲ ಕೊಂದು ಪದ ಹಾಡಲಕ ಯಂದು ಹತ್ತಾರು ಮಂದಿ ಕಂಠಸ್ತರನ್ನು ಗೊತ್ತುಮಾಡಿರುವರಲ್ಲ... ತಾಯಿಯ ಬ್ಯಾಸರಿಕೆ ಕಳೆಯಲಕಂತ, ಕಥೆ ಹೇಳಲಕಂತ ಅಯ್ತಾರು ಮಂದಿ ಅಡುಗೂಲಜ್ಜಿ ಯರನು ಕುಂಡರಿಸಿರುವರಲ್ಲ.. ತಾಯಿಗೆ ಸೆಕೆ ಆಗದಿರಲಂತ ಚವರಿ ಚಾಮರ ಬೀಸಲಕಂತ ನಾಲಕಯ್ದು ಹುಡುಗರನು ಯಡಬಲಕ ನಿಲ್ಲಿಸಿರುವರಲ್ಲ. ತಾಯಿಯ ಸುಕೋಮಲ ಸರೀರಕ್ಕೆ ಬಿಸಿಲು ತಾಕದಿರಲಂತ ಛತ್ರಿಹಿಡಿಯೋರನು ಯೇರುಪಾಡು ಮಾಡಿರುವರಲ್ಲ.. ನಗೆ ಚಾಟಿಕೆ ಮಾತಾಡಿ ತಾಯಿಯನ್ನು ನಗಿಸಲಕಂತ ಯಿದೂಷಕರನು ಯೇರುಪಾಡು ಮಾಡಿರುವರಲ್ಲ.. ತಾಯಿಯ ಹಸಿವು ತೀರಿಸಲಕಂತ. ಬಾಯಾರಿಕೆ ತೀರಿಸಲಕಂತ. ನಾನಾ ನಮೂನೆ ಯೇರುಪಾಡು ಮಾಡಿರುವರಲ್ಲ.. ಅಲ್ಲಿಗೇ ತಾನು ಬಂದಿರುವುದು.. ತಾಯಿಯ ಮಯಿಮಾವಳಿಗಳ ಕುರುತು ಪದ ಕಟ್ಟಿ ಹಾಡಲಕ ಹತ್ತಿರೋರು ಅಗೋ ಅಲ್ಲಿ ಪೀರಾ ಸಾಸ್ತಿರಿಯು.. ಯಗೋ ಯಲ್ಲಿ ಕಾಸೀಮ ಸಾಸ್ತಿರಿಯು.. ಮಂಟೂ ದಿಕ್ಕುಗಳಿಂದ ಹಿಂಡು ಹಿಂಡು ಮಂದಿ ಭಕುತರಾಗುತ ಬಂದು ಅಲ್ಲಲ್ಲೆ ವುದ್ದಂಡ ಪ್ರಣಾಮ ಸಲ್ಲಿಕೆ ಮಾಡುತಲಿದ್ದವರೆಷ್ಟೋ? ಆನಂದಾತಿರೇಕದಿಂದ ತಮ್ಮ ತಮ್ಮ ಯದೆಗಳನ ಬಡಕೋತಲಿದ್ದವರೆಷ್ಟೋ? ಅವ್ವನ ಮಾತು ಕೇಳಿಸಿ ಕೊಂಡೆವೆಂದೆನ್ನುತಲಿದ್ದ ಕಿವುಡ ಮಂದಿಯಷ್ಟೋ? ಅವ್ವನ ರೂಪ ಹೊಳೀತು ಯಂದೆನ್ನುತಲಿದ್ದ ಕುರುಡ ಮಂದಿಯಷ್ಟೋ? ತಾಯಿಯೇ ತಮ್ಮಲ್ಲಿಗೆ ತಾನು