ಪುಟ:ಅರಮನೆ.pdf/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ >೮೫ ಕ ಝಿಡಿದು ಕರೆ ಕೊ೦ಡು ಬ೦ದಳು ಮುಂದು ಹೇಳುತಲಿದ್ದ ಹೆಳಮಂದಿಯಷ್ಟೋ? ವಟ್ಟಲ್ಲಿ ಹಿಂಗ ಹೇಳಲಕಂತ ಅಂಗಯಿಕಲರು ಪಯಿಪೋಟಿಗೆ ಬಿದ್ದಿದ್ದರಂದರ ಬರೋಬ್ಬರಿ ಆತದ.. ವಡಲೊಳಗಿನ ನೀರು ಅಳ್ಳಾಡದಾಂಗೆ ಕೂಕಂಡಿದ್ದ ಮೂಳೆ ಮೋಬಯ್ಯ ವಳಗೊಳಗ, ಭಲಾ..ಭಲಾ.. ಯಂದುದ್ದರಿಸುತಲವನ, ಕಾಚಿನವಾಸಣೆ ಮೂಗಿಗೆ ತಗುಲಲು ತಿರುಗಿ ನೋಡುತಾನ.. ಅಗೋ ಆಟು ದೂರದ ಪಾಸಲೆಯಲ್ಲಿ ಮಮ್ಮಲನ ಮರುಗೂತ ನಿಂತಿರುವ ಮುದಂದರ ಮುಡೇದು.. ಅದು ತನ್ನ ಕಡೇಕ ಬರಲಕ ಬಲು ಮಿಜಿ ಮಿಜಿ ಮಾಡುತಲಿರುವುದು ಯಂದು ತನಗರವಾಗದೆಯಿರಲಿಲ್ಲ.... ಮಯ್ಯೋಳಗೆ ಬುಸುಗುಡುತ್ತಿರುವ ವುಪ್ಪನ್ನು ಹಂಗs ತಮಣಿ ಮಾಡಿಕೊಂಡ. ಆಕೆ ಪಿಕದಾನಿಯೊಳಗೆ ವುಗುಳುವಾಗ ತನ್ನ ಮುಂಗಯ್ಯಗ್ಯಾಕ ಅದರ ತುಂತುರು ತನ್ನ ಮಾರಿಗೂ ಸಿಡಿಯುತಲಿದ್ದುದುಂಟು. ಆಕೆ ಯದುರು ಮಾರೀನ ಸಿಂಡರಿಸಿಕೊಳ್ಳುವಂತಿರಲಿಲ್ಲ, ವರಸಿಕೊಳ್ಳುವಂತಿರಲಿಲ್ಲ. ಹಂಗs ನಮ್ಮೆ ಮಾಡಿದಾಗ ಫಠಾರಂತ ಕಪಾಳಕ್ಕೆ ಭಾರಿಸಿದ್ದಳು. ಬಾಸಾಳ ವಾರ ದಿನ ಮಾನ ತನ್ನ ಕೆನ್ನೆ ಮ್ಯಾಲ ಹಂಗವುಳಕೊಂಡಿತ್ತು. ರಾಜ ಪರಿವಾರ ದೊರ ಯಂಜಲವನ್ನು ಮಾಪರಸಾದ ಯಂದು ವಾದ ಮಾಡುತಲಿದ್ದ ತನ್ನ ತಂದೆಗೆ ತೋರಿಸಲಿಕ್ಕಾಗದೆ ತಾನು ವದ್ದಾಡುತಲಿದ್ದುದಂಟು. “ಮುಂದೆಂದಾರ ನನ್ ಮಗ ತೆಪ್ ಮಾಡಿದನಂದರ ವದ್ದು ಬುದ್ದಿ ಹೇಳಿರಾ ದೊರೆಸಾನಿ.. ಆದರೆ ಅರಮನಿಯಿಂದ ಮಾತ್ರತಳ್ಳ ಬ್ಯಾಡೂರಿ” ಯಂದು ತಂದೆಯಾದವ ಹೇಳಿದಂದಿನಿಂದ ತಾನು ವುಗುಳು, ಯಂಜಲೊಂದ ಯಾಕೆ ಯಲ್ಲಾ ಹಿಂಸೆ ತಾಪತ್ರಯಗಳನು ಸಯಿಸಿಕೊಂಡು ಮೇಗಿರುವುದುಂಟು, ನೀಸಿರುವುದುಂಟು, ತನ್ನ ಕಣಸೊಳಗ ಸಾಂಬವಿ ಕಾಣಿಸಿಕೊಂಡಂದಿನಿಂದ.. ಯಂದು ಮುಂತಾಗಿ ತನಗೆ ತಾನss ಅವುದೋ ಅಲ್ಲವೋ ಯಂಬಂತೆ ವಾರೆಗಣ್ಣಿಂದ ರಾಜಮಾತೆ ಕಡೇಕ ನೋಡಿದ. ತನ್ನ ಮಾರಿ ಮ್ಯಾಲ ದಯವಿಕ ಕಳೆ ತಂದುಕೊಳ್ಳಲು.... ಅವುದು, ರಾಜಮಾತೆ ಭಮ್ರಮಾಂಬೆ ಸನೀಕ ಬರು ಬರುತ್ತಲೇ ಮುಂಗಾಲ ಕಸುವು ಕಳಕೊಂಡು ಮುಂದಕ ಹೆಜ್ಜೆ ಯಡಲಕಾಗದೆ ವದ್ದಾಡುತಲಿದ್ದಳು. ತನ್ನನ್ನು ಯಾರೊಬ್ಬರೂ ಮಾತಾಡಿಸುತ್ತಿಲ್ಲವಲ್ಲಾ... ತನ್ನ ಕಡೀಕೆ ಯಾರೊಬ್ಬರೂ ನೋಡುತಿಲ್ಲವಲ್ಲಾ...ತಾನು ಮುಂದಕ ಹೋಗಲೋ,