ಪುಟ:ಅರಮನೆ.pdf/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೮೬

ಅರಮನೆ

ಬ್ಯಾಡಮೋ ಯಂದು ಅನುಮಾನಿಸೂತ. ಮುಂದಕ ಹೋದಲ್ಲಿ ತನ್ನೂಳಿಗದ
ತೊತ್ತಿನ ಕಾಲ ಬುಡಕ ಕುಂಡುರ ಬೇಕು, ಹಿಂದಕ ಹೋದಲ್ಲಿ
ದಯವದೊಂದಿಗಿನ ಸಂಬಂಧ ತೆಗವಾಗತಯ್ಕೆ.ಯೇನು ಮಾಡುವುದು ಯಂದು
ತನ್ನ ಬಗ್ಗೆ ತಾನ ಮಮ್ಮಲ ಮರುಗಿಕೊಳ್ಳುತ...
ಕಣ್ಣುಮುಚ್ಚಿ ದಯವದ ದ್ರುಸ್ಯಾವಳೀನ ಸವಿಯುತಲಿದ್ದ, ಕಿವಿಮುಚ್ಚಿ
ದಂರುವ ಸ೦ಬ೦ಧೀನಾನಾ ನಾಮಾವಳೀನ ಕೇಳುತಲಿದ್ದ..
ಜಾವಜಾವಕ್ಕೊಂದೊಂದಾವರಿ ಪ್ಲಾ...ಹ್ಲಾ ತಾಯೇ, ಹೊ ಹೇ ತಾಯೇ
ಯಂದುದ್ಧಾರ ತೆಗೆಯುತಲಿದ್ದ ಜಡೆತಾತ ಸಡನ್ನಂತ ಅಚ್ಚ ಕಡೇಕ ನೋಡುತ್ತಲೆ
ಯೇಯ್ ಮುದುಕೀ... ಯಂದು ಕೂಗುತ್ತಾನೆ.. ಬೆಚ್ಚಿ ಬಿದ್ದಿಕೆಯು ತಾತೋ..
ನಾನ್ ಕಣಪ್ಪಾ ರಾಜಮಾತೆ ಭಮ್ರಮಾಂಯ್ತಾಯಿ.. ಯಂದು ಜೋರಾಗಿ ಖೂನ
ಗುರುತು ಹೇಳುತ್ತಾಳೆ.. “ಯಂಥಾ ಹುಚ್ಚಣುಮಗಳದೀ ನೀನು.. ಮಾತೆ
ಯಂಬುವ ಸಬುಧಕ್ಕ ದೇವತೆಯೆನಿಸಿಕೊಂಡಿರೋ ಸಾಂಬವಿಗೇ
ಸರಿಹುರಿಯಂಬಂತೆ ಆಡೋದಾ ನೀನು, ಯೀ ಭೂಮಿಮ್ಯಾಲ ಹರದಾಡೋ
ಕ್ರಿಮಿ ಕೀಟಕ್ಕಿಂತ ಕಡೇಕ್ಕಡೇ ಅಂತ ನಿನಗ ನೀನು ಭಾವನೆ ಮಾಡಿಕೊಳ್ಳುವುದಿದ್ದಲ್ಲಿ
ಮುಂದಕ ಬಂದು ವಸ್ತಿಯ ಕಾಲಿಗೆ ಬೀಳು.. ಯೆಲ್ಲಾ ಬಂದ ದಾರಿಗೆ
ಸುಂಕಯಿಲ್ಲಾಂತ ತಿಳಕೊಂಡು ಹೆಂಗ ಬಂದ್ಯೋ... ಹಂಗss ನಡಕೋತ
ಹೋಗಿ ಬಿಡಬೇಕು ನೋಡವ್ವಾ” ಯಂದು ಜೆಡೆತಾತ ಖುಲ್ಲಮ ಖುಲ್ಲ
ನುಡಿದಾಡುತ್ತಾನೆ. ಭಕುತಾದಿ ಮಂದಿ ಸಿವನ್ನಾಮ ಪಾರೋತಿಪತಿ ಹರಹರ
ಮಾದೇವಃ ಯಂದು ಕೂಗುತಯ್ಕೆ.. ಆ ಕೂಗಿನಗುಂಟ ನಡಕೋತ
ನಡಕೋತ ಮುಂದ ಮುಂದಕ ಮುದುಕಿ ಬಂದದ್ದಾತು.. ಸರೀರದ ಪಾದಗಳಿಗೆ ಕಯ್ಯಿಂದ
ಮುಟ್ಟುವ ಮನಸಾಗುತಾಯಿಲ್ಲ.. ಹಣೆ ಮುಟ್ಟುವ ಮನಸು ಬರುತಾಯಿಲ್ಲ...
ಅದನು ನೋಡಿ ಭಕುತಾದಿ ಮಂದಿಯು “ಕುದುರೆಡವ ದೊರೆಸಾನಿ.
ಭಕುತರಾಧೀನಿ.. ನಿನಗಾರು ಸರಿಯಾ , ಸರಿ ಅಂದವರ ಹಲ್ಲು ಮುರಿಯವಾ”
ಯಂದು ಹಾಕಿದ ಜಯಘೋಷವು ಯಲ್ಲಿ ತನ್ನನ್ನು ಹೆಡಮುರಿಗೆ ಕಟ್ಟುವುದೋ
ಯಂದು ರಾಜಮಾತೆ ಹೆದರಿದಳೆಂಬಲ್ಲಿಗೆ ಸಿವಸಂಕರ ಮಾದೇವಃss ತಾನು
ಮುಂದಕ ಹೋದಲ್ಲಿ ವದಗುವ ಆಪತ್ತಾವುದು? ತಾನು ಹಿಂದಕ ಹೋದಲ್ಲಿ
ವದಗುವ ಯಿಪತ್ತಾವುದು? ಯಂದು ಯಸನ ಮಾಡಕಂತ, ಹಿ೦ದಲ ದಿನಗಳಲ್ಲಿ
ತನ್ನಿಂದ ಯಾವಾತನು ಕಾಲಿಂದೊದೆಸಿಕೊಂಬುತ ಮಾಪ್ರಸಾದ