ಪುಟ:ಅರಮನೆ.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

xxii

ವಿವರಿಸಿರುವ, ಚರ್ಚಿಸಿರುವ ಕಥನ ತಂತ್ರಗಳು, ಶೈಲಿ, ಧಾಟಿ-ಧೋರಣೆ
ಇವೆಲ್ಲವೂ 'ಮ್ಯಾಜಿಕ್ ರಿಯಲಿಸಂ' ಎಂದು ಪ್ರಸಿದ್ಧವಾಗಿರುವ ಕಥನಕ್ರಮಕ್ಕೆ
ಅನ್ವಯಿಸುತ್ತವೆ; ಆದರೆ, ಉದ್ದೇಶಪೂರ್ವಕವಾಗಿ ನಾನು ಆ ಪರಿಕಲ್ಪನೆಯನ್ನು
ಹೆಸರಿಸಿಲ್ಲ. ಕಾರಣ 'ಮ್ಯಾಜಿಕ್ ರಿಯಲಿಸಂ' ಎಂದ ಕೂಡಲೇ ರೋಲಾ ಬಾರ್ತ್,
ಮಾಕ್ವೆಜ್ ಮುಂತಾದವರ ಕೃತಿಗಳು ನಮ್ಮ ಕಣ್ಣೆದುರಿಗೆ ಬರುತ್ತವೆಯೇ ಹೊರತು
ಮಲೆ ಮಾದೇಶ್ವರ, ಮಂಟೇಸ್ವಾಮಿ, ಕಾವ್ಯಗಳಲ್ಲ. ಇಷ್ಟು ಸ್ಥಳೀಯವಾಗಿರುವ,
ದೇಶೀಯವಾಗಿರುವ ಕಥನ ವಿನ್ಯಾಸಕ್ಕೆ 'ಮ್ಯಾಜಿಕ್ ರಿಯಲಿಸಂ' ಎಂಬ ಹೆಸರಿಟ್ಟು
ಅದಕ್ಕೊಂದು ಕೃತ್ರಿಮ ಛವಿ ತರಲು ನನಗೇನೇನೂ ಇಷ್ಟವಿಲ್ಲವೆಂಬಲ್ಲಿಗೆ, 'ಕುಂವೀ
ಅವರ ಸೃಜನಶೀಲತೆ ಇತೋಪ್ಯತಿಶಯವಾಗಿ ಮುಂದುವರೆಯಲಿ' ಎಂದು
ಆಶಿಸುತ್ತೇನೆಂಬಲ್ಲಿಗೆ
ಶಿವ ಶಂಕರ ಮಾದೇವಾಆಆಆಆ...

-ಡಾ.ಸಿ.ಎನ್.ರಾಮಚಂದ್ರನ್