ಪುಟ:ಅರಮನೆ.pdf/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೯೦

ಅರಮನೆ


ತುಂಬಿ ತುಳುಕಾಡಿದೊಡನೆ ಗೊನೆಗೊಂಡಲವು ಸಿವ ಸಿವಾ..
ಯಜ್ಜೆಗೊಬ್ಬೊಬ್ಬರಂತೆ ಸಯ್ನಿಕರು ಕಾಣಿಸಿಕೊಂಡರು ಸಿವ ಸಿವಾ.. ಬೊಬ್ಬಿಲಿ
ನಾಗಿರೆಡ್ಡಿಯ ಕ್ರುತ್ಯಯಿದಾಗಿರುವುದೆಂದು ಭಾವಿಸಿ ಅವನ ಪರ ನಿಲುವಿನ
ನೂರಾರು ಮಂದಿ ಅಮಾಯಕರ ಕಕಾಲಿಗೆ ಕಟ್ಟಿ ಧರಧರನೆ ಯಳಕೊಂಡು
ಹೋದರು ಸಿವ ಸಿವಾ... ಹತ್ತಾರು ಪಾರಿವಾಳಗಳು ಯೀ ಸುದ್ದಿಯನ್ನು ಹೊತ್ತು
ತಂದಾಗ ಬೊಬ್ಬಲಿ ನಾಗಿರೆಡ್ಡಿಯು ಸಂಗಾಲದ ಸೇಸಸಯನ ರೆಡ್ಡಿ ವಡೆತನದಲ್ಲಿದ್ದ
ಅಯಿವತ್ತಾರು ಅಗೇವುಗಳಿಂದ ದವಸ ಧಾನ್ಯವ ತೆಗೆಸಿ ಸಾವುರಾರು ಮಂದಿ
ಬಡವರಿಗೆ ಹಂಚಿ ಜಂಗಾಲಯಂಬ ಮೂರೊಳಗ ಬಡಬಗ್ಗರ
ಮೊರೆಯನ್ನಾಲಿಸುತ ಲಿದ್ದನು. ಬಾಲಯೀರಾರೆಡ್ಡಿಯ ಕಗ್ಗೂಲೆ ಸುದ್ದಿ ಕಿವಿಗೆ
ಬಿದ್ದೊಡನೆ ಮಾ ಅಹಿಂಸಾವಾದಿಯಾದ ತಾನು ದಿಗ್ಬ್ರಾಂತನಾದನು. ತನ್ನ ಪರ
ಯಿದ್ದವರನ್ನು ಅನುಕಂಪದಾಧಾರದ ಮ್ಯಾಲ ಪರಂಗಿಯವರು ಹಿಡಕೊಂಡು
ಹೊಯ್ದಿರುವರು ಯಂಬ ಸುದ್ದಿ ಕೇಳಿ ಹುಬ್ಬುಗಂಟಿಕ್ಕಿದನು. ಯಿಧವೆಯಾಗಿದ್ದ
ಕಮಲಮ್ಮಗೆ ನಿನ್ನಂಥ ಸೋದರಿಯರ ಹಣೆಯ ಮ್ಯಾಲಿಂದ ಕುಂಕುಮದ
ಬೊಟ್ಟು ಯಿಳುವು ವಂಥ ದುರುಮಾರ್ಗ ನಾನಲ್ಲ ತಂಗೀ ಯಂಬ ಸಾಲುಗಳಿದ್ದ
ವಕ್ಕಣಿಕೆಯನ್ನು ಕೊನೆಗೊಂಡಲಕ ರವಾನೆ ಮಾಡಿದನು. ಅಮಾಯಕ ಮಂದೀನ
ಕೂಡಲೇ ಬಿಡುಗಡೆ ಮಾಡಬೇಕೆಂದು ಕುಂಪಣಿ ಸರಕಾರವನ್ನು ಗದ್ದರಿಸಿದನು.
ಆದರೆ ಸರಕಾರದ ಮಂದಿ ತನ್ನ ಗದ್ದರಿಕೆಗಾಗಲೀ, ಮನವಿಗಾಗಲೀ
ಮಣಿಯದಿದ್ದಾಗ....
ಮುಂದೊಂದೇ ಯಿರುಳಿನಲ್ಲಿ ಕೋಡಮೂರಿಂದ ಸ್ಟೂವರ್ಟನನ್ನೂ,
ಚಂಡಲಗರುಕಿಯಿಂದ ಆ್ಯಂಡಿಯನ್ನು ಮೂಸಾಪ್ರದಿಂದ ಹೇಸ್ಟಿಂಗಸನನ್ನೂ
ಯಮ್ಮಿಗನೂರಿನಿಂದ ಬಡಮಾಸನನ್ನೂ, ಗುಂತಕಲ್ಲಿನಿಂದ ಮುನಸೋಬಯ್ಯನಾದ
ಡಿಸಕ್ಕನನ್ನೂ ಯೇಕ ಕಾಲಕ್ಕೆ ಅಪಹರಣ ಮಾಡಲಾಯಿತು. ಯಿವಿಷ್ಟೂ
ಮಂದಿಯ ಹೆಂಡರು ಯಿಂಗಲೀಸಿನಲ್ಲಿ ಅತ್ತದ್ದನ್ನು ಬಳ್ಳಾರಿಯ ಕಛೇರಿ
ಕೇಳಿಸಿಕೊಂಡು ಅವುಡುಗಚ್ಚಿತು. ಅನಂತಪುರದ ಹಾದೀಲಿದ್ದ ಥಾಮಸು ಮನ್ರೋ
ಸಾಹೇಬನು ಆ ಕೂಡಲೆ ಗೊನೆಗೊಂಡಲಕ್ಕಾಗಮನಗೊಂಡನು.. ಕಲೆಟ್ಟರು
ಸಾಹೇಬರಾ ಯಿದು ನಾಗಿರೆಡ್ಡಣ್ಣನ ಕ್ರುತ್ಯವಲ್ಲ... ಅವನ ಬೆಂಬಲಿಗರನ್ನು
ಬಿಡುಗಡೆ ಮಾಡಿದಿರಂದರ ಅವಣ್ಣನು ನಿಮ್ಮವರನ್ನು ಬಿಡುಗಡೆ ಮಾಡುತಾನ..
ಯಂದು ಖುದ್ದ ಕಮಲಮ್ಮನೇ ಹೇಳಿಕೆ ನೀಡಿದ್ದನ್ನು ಪಡಕೊಂಡವಯ್ಯನು