ಪುಟ:ಅರಮನೆ.pdf/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅರಮನೆ

೧೯೧

ಕೋಡಮೂರು, ಚಂಡಲಗುರುಕಿಯೇ ಮೊದಲಾದ ಅಯ್ದು ಹೋಬಳಿಗಳಿಗೆ
ಹೋಗಿ “ಹೆದರಬ್ಯಾಡಿರವ್ವಾ.. ನಿಮಗಂಡಂದಿರನು ಕ್ಷೇಮದಿಂದ ಬಿಡುಗಡೆ
ಮಾಡಿಸೋದು ಸರಕಾರದ ಕರ್ತವ್ಯ ಅಯ್ತೆ” ಯಂದವರವರ ಹೆಂಡಂದಿರಿಗೆ
ಧಯರ್ಯ ಹೇಳಿದನು. ತಾನು ಹೋದ ಕಡೇಲೆಲ್ಲ ಅಪರ ಅಧಿಕಾರಿಗಳೊಂದಿಗೆ
ಸಮಾಲೋಚನೆ ಮಾಡದಿರಲಿಲ್ಲ ತಾನು, ಅವರಿಗೆಲ್ಲ ಛೀಮಾರಿ ಹಾಕದಿರಲಿಲ್ಲ
ತಾನು, ಅವರವರ ಮೂಗುಗಳ ತುದಿಯಿಂದ ಮುಂಗೋಪವನ್ನು ವುತಾರ
ಮಾಡದೆಯಿರಲಿಲ್ಲ ತಾನು, “ ನೋಡಿದಿರೇನರಯ್ಯಾ.. ಕೋಡಮೂರು,
ಚಂಡಲಗುರುಕಿ, ಮೂಸಾಪ್ರ, ಯಮ್ಮಿಗನೂರು ಗುಂತಕಲ್ಲು ತಲಾ ನೂರು
ನೂರು ಮಯ್ಲು ಅಂತರದಲ್ಲದಾವ.. ಯೇಕಕಾಲಕ್ಕೆ ಅಪಹರಣ ಮಾಡುವುದರ
ಮೂಲಕ ನಾಗಿರೆಡ್ಡಿಯು ತನ್ನ ತಾಕತ್ತು ಯಷ್ಟೆಂಬುದನ್ನು ತೋರಿಸಿಕೊಟ್ಟಿರುವನು.
ತಾನೀ ಪ್ರದೇಸಕ್ಕೆಲ್ಲ ಅನಭಿಷಕ್ತ ಸಾಮ್ರಾಟನೆಂಬುದನ್ನು ಸಾಬೀತುಮಾಡಿ
ಕೊಟ್ಟಿರುವನು. ಯಿದಕವಯ್ಯನು ಸಯ್ನಿಕರನ್ನು ಯಿಟುಕೊಂಡಿಲ್ಲ.. ಕಯ್ಯೊಳಗ
ಕೋವಿ ಹಿಡಕೊಂಡಿಲ್ಲ. ಪ್ರೀತಿ, ದಯೆ, ಅನುಕಂಪ, ಛಲ, ತ್ಯಾಗ, ಪರಾಕ್ರಮ
ತುಂಬ ಆರು ಆಯುಧಗಳ ಸಾಯದಿಂದ ಕುಂಪಣಿ ಸರಕಾರಕ್ಕೆ
ಸವಾಲಾಗಿದ್ದಾನೆ. ಆ ಬಡವರ ಬಂಧುವನ್ನು ನೋಡಿ ಮಾತಾಡುವ ಆಸೆ
ನನಗೂ ಅಯ್ತಿ.. ಅದಕ ನಾನು ಎಂದು ತಕ್ಕ ಯೇರುಪಾಡು ಮಾಡಲಿರುವೆನು.
ನೀವ್ಯಾರೂ ನನ್ನ ಗಮನಕ್ಕೆ ತಾರದೆ ತಪ್ಪು ಹೆಜ್ಜೆಯನ್ನು ಮತ್ತೊಂದು ಸಲ
ಯಿಡಬ್ಯಾಡಿರಿ” ಯಂದು ಮುಂತಾಗಿ ಅಧಿಕಾರಿಗಳನ್ನು ವುದ್ದೇಸಿಸಿ ಬುದ್ದಿವಾದ
ಹೇಳಿದ ತಾನು..
ಅವಯ್ಯನ ಪ್ರಯತ್ನದ ಫಲವಾಗಿ ಸೆರೆಯಾಳುಗಳು ಯರಡೂ
ಪಾಳೆಯಗಳಿಂದ ಬಿಡುಗಡೆ ಯಾಗದೆಯಿರಲಿಲ್ಲ.. ನಡೆದ ವಂದು ಯಿಚಿತ್ರಘಟನೆ
ಅಂದರೆ ಗುಂತಕಲ್ಲಿನ ಮುನುಸೋಬಯ್ಯ ಡಿಸಕ್ಕೆ ಮಾಶಯನು
ಬೊಬ್ಬಿಲಿನಾಗಿರೆಡ್ಡಿಯ ಬಗ್ಗೆ ವಂದು ಅನುಭವ ಕಥನವನ್ನು ಬರೆದನು. ಅದು
ಲಂಡನ್ನಿನ ಫ್ರಾಂಟಿಯರು ಯಂಬ ಪತ್ರಿಕೆಯೊಳಗ ಪ್ರಕಟವಾಯಿತು. ಬೊಬ್ಬಲಿ
ನಾಗಿರೆಡ್ಡಿಯು ಜಾನಪದ, ಸಾಂಸ್ಕೃತಿಕ ಪ್ರತಿನಾಯಕನೆಂದೂ, ಆಳುವ ಯವಸ್ಥೆಯ
ಪ್ರತಿನಾಯಕನೆಂದೂ ಅದರಲ್ಲಿ ಯಿಶೇಷವಾಗಿ ಪ್ರಸ್ತಾಪಿಸಿದ್ದನು. ಬ್ರಿಟನ್ ರಾಣಿಯ
ಗಮನಕ್ಕೂ ಹೋಯಿತೆಂದರೆ ಅದರ ಜನಪ್ರಿಯತೆ ಯಷ್ಟಿದ್ದೀತು? ಅತ್ಯುಚ್ಚಮಟ್ಟದ
ಬ್ರಿಟನ್ ಅಧಿಕಾರಿಗಳು ರಾಣಿಯ ಸೂಚನೆ ಮೇರೆಗೆ ಡಿಸಕ್ಕನ ಲೇಖನ ಕುರಿತು