ಪುಟ:ಅರಮನೆ.pdf/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೯೨

ಅರಮನೆ


ಸುದೀರ್ಘವಾಗಿ ಚರ್ಚೆ ನಡೆಸಿದರು. ಬೊಬ್ಬಿಲಿನಾಗಿರೆಡ್ಡಿಯರಂಥ ಪ್ರತಿನಾಯಕರನ್ನು
ವುದಾಸೀನ ಮಾಡದೆ ಆಗಿಂದಾಗ್ಗೆ ನಿಗ್ರಹಿಸುತ್ತಿರ ಬೇಕೆಂದೂ, ಯಾಕ
ಯಿಂಥವರು ವುದ್ಭವವಾಗುತಾರಂಬುದರ ಕುರಿತು ಥಾಮಸ್ ಮನ್ರೊ ಅಲ್ಲದೆ
ಬ್ಯಾರೆ ಯಾರು ಯೋಚಿಸಲಕ ಸಾಧ್ಯ ಯಂದು ಮುಂತಾಗಿ ಬರೆದು
ಬಂಕಿಂಗ್ಯಾಮು ಅರಮನೆಯಿಂದ ಸಮುದ್ಧರದ ದ್ವಾರಾ ಮದರಾಸು ನಗರಕ್ಕೆ
ರವಾನೆ ಮಾಡಿದರು. ಅಲ್ಲಿದ್ದ ಗವರ್ನರು ಸಾಹೇಬನಾದ ಯಲ್ಲೆಸ್ಲಿಯು ಅದನ್ನು
ಕೂಲಂಕುಷ ಮೋದಿ ಷರಾ ಬರೆದು ಸುರುಳಿ ಸುತ್ತಿ ಕಡಪಾಕ್ಕೆ ರವಾನಿಸಿದನು.
ಅಲ್ಲಿಂದ ಬಳ್ಳಾರಿಗೆ ಬಂದದು ಹುಡುಕಾಡುತದss.
ಯಲ್ಲೆಲ್ಲಿ ಬೊಬ್ಬಿಲಿ ನಾಗಿರೆಡ್ಡಿಯ ಪ್ರಾಬಲ್ಯಯಿತ್ತೋ, ಯಲ್ಲೆಲ್ಲಿ ಬರಗಾಲವು
ರುದ್ರತಾಂಡವನ್ರು ತ್ಯವನ್ನಾಡುತಲಿತ್ತೋ ಅಲ್ಲಲ್ಲಿ ಮನ್ರೊ ಸಾಹೇಬನು
ತಂಗಾಳಿಯೋಪಾದಿಯಲ್ಲಿ ಸುತ್ತಾಡುತಲಿದ್ದ.. 'ಸುಭಿಕ್ಷ' ಯಂದು ಹೊಸ
ಯೋಜನೆಯನ್ನು ಆರಂಭಗೊಳಿಸಿದ್ದನು. ಅದರ ವುಸ್ತುವಾರಿಯನ್ನು
ಮುನುಸೋಬಯ್ಯನಾದ ಡಿಸೆಕ್ಕಗೆ (ಡಿಕನ್ಸ್) ವಹಿಸಿದ್ದನು. ಕಲೆಟ್ಟರು ಸಾಹೇಬನು
ಯೀ ಪ್ರಕಾರವಾಗಿ ಜನರ ವಲುಮೆಯನ್ನು ಸಂಪಾದನೆ ಮಾಡುತಲೂ,
ನಾಗಿರೆಡ್ಡಿಯ ಸುಳಿವನ್ನು ನೀಡಬಲ್ಲಂಥ ಸಂಚುಕೋರರನ್ನು ಹುಡುಕುತ್ತಲೂ
ಯಿರುವಾಗ್ಗೆ...
ಅತ್ತ ಹರಪನಳ್ಳಿ ಸೀಮೆಯೊಳಗ ಯಲ್ಲಾ ಅಯೋಮಯವಾಗಿತ್ತು..
ಆಯಾ ಗ್ರಾಮಗಳ ಮಂದಿ ಸೋಯಂ ಸ್ಪೂರ್ತಿಯಿಂದ ತಮ ತಮ್ಮ
ರಾಜರುಗಳನ್ನು ತೊರೆದು ಮಲಸೀಮೆ ಕಡೇಕ ಗುಳೇ ಹೊಂಟಿದ್ದರೆ, ಯಿನ್ನೂ
ಕೆಲವು ರಾಜರು ತಾವು ಸಜ್ಜನರೆಂದು ಸಾಬೀತು ಮಾಡಲಕೆಂದು ಬಗೆಬಗೆಯ
ಯೇಸ ಭೂಸಣಗಳನ್ನು ಧರಿಸಲಾರಂಭಿಸಿದ್ದರು. ತಾವು ವಳ್ಳಿಯವರದೀವಿ..
ತಮ ತಂಟೆಗೆ ಬರ ಬ್ಯಾಡಿರ ಪ್ಪಾ ಯಂದು ಪ್ರಜೆಗಳ ದುರು
ಅಂಗಲಾಚಲಾರಂಭಿಸಿದ್ದರು. ಯಿನ್ನೂ ಕೆಲವು ರಾಜರುಗಳು ಭೂಗತರಾಗಿ
ತಮ್ಮ ಪ್ರಜೆಗಳ ಯಿರುದ್ದ ಹೋರಾಟ ನಡೆಸಿದ್ದರೆ, ಯಿನ್ನೂ ಕೆಲವು ರಾಜರುಗಳು
ತಮ ತಮ್ಮ ರಾಣಿವಾಸದವರನ್ನು ಮುಂದೆ ಬಿಟ್ಟು ತಾವು ಆ ಹೆಣ್ಣು ಪಿಳ್ಳೆಗಳ
ಹಿಂದೆ ಅಡಗಿದ್ದು ಜೀವನ ನಡೆಸಲಾರಂಭಿಸಿದ್ದರು. ಹಂಡಗಳೆತ್ತುಗಳಾಗಿದ್ದ
ರಾಜರುಗಳಿಗಾಗಲೀ, ಹರಪನಹಳ್ಳಿ ಸೀಮೆವಳಗೆ ಬರಯಿರಲಿಲ್ಲ... ಸಿವ ಸಂಕರ
ಮಾದೇವಾss