ಪುಟ:ಅರಮನೆ.pdf/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೯೪

ಅರಮನೆ

ಕಯ್ಯ ಬೀಸಿ ಕರೆಯುತ್ತಿರುವುದು ಯಂದು ಕುಂತಳ ನಾಡಿನ ಖ್ಯಾತ
ಮನಸ್ಯಾಸ್ತ್ರಗ್ನನೂ, ಸಂಡೂರು, ಗುತ್ತಿ ಸಿಡಿಗಿನಮೊಳೆಯ ಅರಮನೆಗಳಲ್ಲಿ
ಕವುಟುಂಬಿಕ ಸಲಹೆದಾರನೂ ಆಗಿದ್ದ ಮೋ೦ಕಾರಯ್ಯನು ಹೇಳುತ ಯ್ಯಥೆ
ಪಟ್ಟಿದ್ದನು. ಆಕೆಯ ಮನಃಪರಿವರ್ತನೆಯ ಸಲುವಾಗಿ ಯಡ್ಡವರ್ಡರನು ಪತ್ನಿಯ
ಮನಸ್ಸನ್ನು ನೋಯಿಸುವ ರೀತಿಯಲ್ಲಿ ಮಾತಾಡುವುದನ್ನು ಬಿಟ್ಟಿದ್ದನು. ಸೊತಹ
ವಳ್ಳೆಯ ವಾದಕನಾದ ತಾನು ಭಾರಿಗಾತ್ರದ ಪಿಯಾನೋ ವಂದನ್ನು
ತರಿಸಿರಿಸಿದ್ದನು. ಮಾರ್ಕ ಅಕನ್ವೆ ಡ್, ಥಾಮಸ್‌ ಆಟ್ಟೇ, ಇಬ್ನೇ ಬಟೂಟಾ,
ಗೊಂಗೋರಾ ಯಿವರೇ ಮೊದಲಾದವರು ಯಿರಚಿತ ಕ್ರುತಿಗಳನ್ನು ತರಿಸಿ
ಪತ್ನಿಯ ಕಯ್ಯಿಗೆ, ಕಣ್ಣಿಗೆ ಯಟಕುವಂತೆ ಯಿರಿಸಿದ್ದನು. ಲಿಯೊನಾರ್ಡೋನ
ಅಮರ ಕಲಾಕ್ರುತಿ ಮೊನಾಲೀಸಾಳನ್ನೂ ಸಹ.. ಅಗೋ ಅಲ್ಲಿ
ಮಯ್ಕೇಲೆಂಜೆಲೋ.. ಯಿಗೋ ಯಿಲ್ಲಿ!!.... ಹಲವು ಬಣ್ಣಗಳ ಕುಡಿಕೆಗಳೋ,
ಹಲವು ಯಿನ್ಯಾಸಗಳ ಕುಂಚಗಳೋ, ತನ್ನ ಯೋಜನೆಗೆ ಮಕುಟಪ್ರಾಯವಾಗಿ
“ಪ್ರಿಯೆ.. ಕೆಲವೇ ತಿಂಗಳುಗಳಲ್ಲಿ ಲಂಡನ್ನಿನೊಳಗ ನಡೆಯಲ್ಲಿರುವ ಚಿತ್ರಕಲಾ
ಪ್ರದರ್ಸನದಲ್ಲಿ ನೀನು ರಚಿಸಬೌದಾದ ಕಲಾಕ್ರುತಿ ಯಿದ್ದರೆ ಯಷ್ಟು ಚನ್ನ? ಖುದ್ದ
ಯಂಪರರ್ರೇ ಬಹುಮಾನ ಯಿತರಿಸಲಿರುವರೆಂಬುದನ್ನು ಗ್ನಾಪಿಸಲು ನನಗೆ
ಹೆಮ್ಮೆಯನಿಸುತ್ತದೆ.”
ಯಿಂಥ ಕಸರತ್ತುಗಳ ಪುನರಾವರ್ತಯ ತಿಲ್ಲಾನರವರ ಮನೇಲಿ
ನಡೆಯುತಲಿತ್ತು. ತ್ರಿಕಾಲ ಪೂಜೆ ಪುನಸ್ಕಾರ, ಮಂದ್ರಸ್ತರದಲ್ಲಿ ಸಾರಂಗಿ ವಾದನ,
ಯಾವಾಗಲೂ ಅಲವು ಕೀಕದ ಬಗೆಗೇನೇ ಮಾತುಕತೆ, ಯಲ್ಲರ
ಬಾಯಿಯಿಂದಲೂ ಯಲ್ಲ ಭಗವಂತನ ಯಿಚ್ಚೆ ಯಂಬ ವುದ್ಗಾರ.. ಮನೆ
ಮುಂದಲ ಹೂದೋಟ ಮಲ್ಲಿಗೆ ಬಿಟ್ಟಲ್ಲಿ ಯಿನ್ನೊಂದು ಬಣ್ಣದ ಹುವ್ವುಂಟೇನು?
ಯರಡು ಗಂಡು ಜಿಂಕೆಗಳು.. ವಂದು ಹೆಣ್ಣು ನವುಲು.. ನೋಡುವ ಭವಿಗಳಲ್ಲಿ
ಯಿರಕ್ತಿ ಮೂಡಿಸುವಂಥ ಮನೆ, ಯಿದು ತಿಲ್ಲಾನ ತಾಯಕ್ಕಂದಾ ಯಂದು
ನೋಡಿದವರು ಮೂಗಿನ ಮ್ಯಾಲ ಬೆರಳಿಟ್ಟುಕೊಂಡು ಬಿಡುವಂಥ ಮನೆ. ಸದರಿ
ಮನೆಯೊಳಗಿನ ಪಾಕಶಾಲೆಯಲ್ಲಂತೂ ತಾಪಸಿಗಳಿಗೆ ಮಾತ್ರಪ್ರಿಯ
ಯುನಿಸಬೌದಾದಂಥ ವುಪ್ಪು, ಹುಳಿ, ಖಾರ, ರಹಿತ ಖಾದ್ಯಗಳು
ತಯಾರಾಗುತಲಿತ್ತು, ಹದಿಹರೆಯದ ಮಗಳಿಗೆ ಸನ್ಯಾಸಿಣಿ ಪಟ್ಟ ಕಟ್ಟುವ
ತಾಯಕ್ಕನ ಕ್ರಮವನ್ನು ಬುಗಡೆ ಬಲವಾಗಿ ಯಿರೋಧಿ ಸಿದ್ದನು. ತಾನು