ಪುಟ:ಅರಮನೆ.pdf/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅರಮನೆ

೧೯೫

ಕರಕೊಂಡು ಬಂದ ವರಗಳು ಚಿನ್ನಾಸಾನಿಯನ್ನು ನೋಡುತ್ತಲೆ ಯಿರಾಗಿಗಳಾಗಿ
ಹೋಗಿದ್ದವು. ಹೆಂಗಪ್ಪಾ ತನ್ನ ಮಲಮಗಳ ಮುಖವನ್ನು ಲವುಕಿಕದ ಕಡೆಗೆ
ತಿರುಗಿಸುವುದು ಯಂದಾತನು ಹಲುಬುತ್ತಿದ್ದುದಕ್ಕೆ ಮನ ಕರಗಿದ
ಅರಗಿಣಿಯೊಂದು ಅಂಬಾರದೊಳಗೆ ತೇಲಾಡುತ ವುಪ್ಪರಿಗೆ ಮ್ಯಾಲ ಯೇದಾಂತ
ಗ್ನಾನಸಿಂಧು ಗ್ರಂಥದ ಯೇಳನೆ ಚರಣವನ್ನು ಬಾಯಿಪಾಠ ಮಾಡುತಲಿದ್ದ
ಆ ಮಾಸ್ವೇತೆಯ ಮುಂಗಯ್ಯಿ ಮ್ಯಾಲ ಕೂತು ಆಕೆಯ ಸವುಂದರ್ಯದ
ಗುಣಗಾನದಾಲಾಪನೆ ಮಾಡಿತು. ಆದರಾಕೆಯ ಮುಖದ ಮ್ಯಾಲ ಲವುಕಿಕದ
ವಂದು ಭಾವನೆ ಯಾರ ಮೂಡಲಿಲ್ಲ.. ಯಂಥಾಕಿಯಿದ್ದೀ ತ್ರಿಪುರ ಸುಂದರಿಯೇ...
ನಿನ್ನೊಳಗ ಯಿರೋ ಸರುವ ಸಂಪತ್ತನ್ನು ಅರ್ಥಮಾಡಿಕೊಳ್ಳಲಾರದಷ್ಷು
ಅಮಾಯಕಳಿರುವೆಯಲ್ಲಾ.. ಯಂದು ಛೀಮಾರಿ ಹಾಕಿ ಹಾರಿ ಹೋಯಿತು.
ತದನಂತರ ಗೋಡೆ ಮ್ಯಾಲಿನ ವರುಣ ಚಿತ್ರಗಳು ಜೀವಧಾರಣ ಮಾಡಿ ನೀನು
ಅಸಾಧಾರಣ ಚಲುವೆಯಿರುವಿ.. ನಿನ್ನನ್ನು ನೀನು ನೋಡಿಕೋ.. ಯಂದು
ಸಾರಿ ಸಾರಿ ಹೇಳಿದವಾದರೂ ಪ್ರಯೋಜನವಾಗಲಿಲ್ಲ. ಮನೆಯೊಳಗಿದ್ದ
ಕನ್ನಡಿಗಳು “ಅಯ್ಯೋ ನಮ್ಮೊಳಗ ನಿನ್ನನ್ನು ನೀನು ನೋಡಿಕೋಬ್ಯಾಡ.. ನಿಮ್ಮ
ತಾಯಿಯ ಸಂಚಿನೊಳಗ ನಮ್ಮ ಪಾಲುಂಟು” ಯಂದು ಸಾರಿ ಸಾರಿ
ಹೇಳಿದರೂ ಪ್ರಯೋಜನವಾಗಲಿಲ್ಲ. ಯಾಕಿವೆಲ್ಲ ತನ್ನನ್ನು
ಗೋಳೊಯ್ದುಕೊಳ್ಳುತ್ತಿರುವವು.. ತನ್ನೊಳಗ ಅಂಥಾದ್ದೇನುಂಟು? ಯಂದು
ಚಿಂತೆ ಮಾಡುತ ಆಕೆ ಯೇದಾಂತ ಗ್ರಂಥವನ್ನು ಮಡಚಿಟ್ಟು ಮ್ಲಾನವದನೆಯಾಗಿ
ಕೂಕಂಡಿರುವಾಗ್ಗೆ ಮುದುಕಿಯೊಂದು ಕೇಸರಿ ಮಿಸ್ರಿತ ಹಾಲು ತುಂಬಿದ ಬೆಳ್ಳಿ
ಜಾಮು ಹಿಡಕೊಂಡು ಅಲ್ಲಿಗೆ ಬಂತು. 'ಭೇ...ಯವ್ವಾ.. ನಾನು ಸುಂದರಿ
ಅದೀನೇನು?” ಯಂದು ಮುಗ್ಧತೆಯಿಂದ ಕೇಳಿದಳು. ಆಗ ಮುದುಕಿ ತನ್ನ
ಬಾಯನ್ನು ಆಕೆಯ ಕಿವಿ ಸನೀಕ ತಂದು.. “ನಿನ್ನಂಥ ಸುಂದರಿ ಯೀ
ಜಗತ್ತಿನೊಳಗ ಯಾರೊಬ್ಬರು ಯಿಲ್ಲ ಮೊಮ್ಮಗಳss” ಯಂದು ಪಿಸುಗುಟ್ಟಿತು.
ಆಗಿದ್ದು ಆ ಚಲುವೆಯು “ಹಂಗಾರ ಕನ್ನಡಿಯೊಳಗ್ಯಾಕ ನನ್ನ ಪ್ರತಿಬಿಂಬ
ಹೆಂಗೆಂಗೋ ಮೂಡುತದs” ಯಂದು ಪ್ರಶ್ನೆ ಹಾಕಿದ್ದಕ್ಕೆ ಅದು.. “ಅದೆಲ್ಲ ನಿನ್ನವ್ವನ
ಸಂಚಯ್ತೆ.. ನಿನ ಚಂದ ನಿನಗೆ ಕಾಣಬಾರದಂತ ಮನೀ ವಳ ಹೊರಗ
ವಯಿರಾಗ್ಯದ ವಾತಾವರಣsನ ಬೇಕೆಂದೇ ಸ್ರುಷಿ« ಮಾಡ್ಯಾಳ ನಿನ್ನ ಮಾಯಾವಿ
ತಾಯಿ. ಬೇಕಾರ ನನ್ನ ಕಣ್ಣೂಳಗ ಯಿಣುಕಿ ನೋಡು. ನಿನ ಗೊಂಬಿ ಹೆಂಗs