ಪುಟ:ಅರಮನೆ.pdf/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೯೮

ಅರಮನೆ


ಗೀಬಳಿಗಳಿಂದೊಂದೇ ಅಲ್ಲ ಸಿವನೇ.. ಸಮಸ್ತ ಕುಂತಳ ಪ್ರಾತಂದೊಳಗೆ ಅನಾದಿ
ಕಾಲದಿಂಲೂ ಅಮರಿದ್ದ, ಯಿಮುರಿದ್ದ ಮೂರು ಕೇರಿಗಳೆಲ್ಲ ತಮ್ಮ ತಮ್ಮ ಕರಣ
ಯಿಂದ್ರಿಯಂಗಳ ಸಮೇತ ಕುದುರೆಡವು ಕಡೇಕ ಮುಖ ಮಾಡಿದ್ದವು. ಸವುಡು
ಸಿಕ್ಕವರು ತಮ್ಮ ತಮ್ಮ ಸರೀರಗಳ ಸಮೇತ ಬೂದಿಮುಚ್ಚಿದ ಕೆಂಡದೋಪಾದಿಯ
ಸದರಿ ಪಟ್ಟಣಕ್ಕೆ ಹೊಂಟು ಬಂದಿದ್ದರು.. ಪುರುಸೊತ್ತು ಸಿಕ್ಕದವರು ತಮ
ತಮ್ಮ ಪಂಚೇಂದ್ರಿಯಂಗಳನು ಪುಣ್ಯದುದುಕದೊಳಗ ಮಿಂದೇಳುವ ನಿಮಿತ್ತ
ಸದರಿ ಪಟ್ಟಣಕ್ಕ ಕಳುವಿದ್ದರು.. ಬರೋರು ಬರುತಲೇ ಯಿದ್ದರು.. ಹೋಗೋರು
ಹೋಗುತಲೇ ಯಿದ್ದರು.. ಹಾಜರಿ, ಗಯ್ರುಹಾಜರಿಗಳ ನಡುವಿನ ಅಂತರ
ಜಾವಜಾವಕ್ಕೆ ಹೆಚ್ಚು ಕಡಿಮೆ ಆಗುತಲಿತ್ತು..
ಬಿಲ್ವ ಜುಮ್ಮಿ ಬನ್ನಿ, ವುತ್ತರಾಣಿ, ಗರುಕೆ, ಹೊಂಗೆಯೇ ಮೊದಲಾದ
ಛಪ್ಪನ್ನಾರು ಜಾತಿಯ ತರುಲತೆ ಗಿಡಗಳ ತೊಪ್ಪಲ ದೆಸೆಯಿಂದಲೂ, ಪಿತಾಂಬರಿ
ಜರತಾರಿ ಅರುವೆಗಳಿಂದಲೂ, ಕಪ್ಪು ಬಿಳುಪು ಕಂಬಳಿಗಳಿಂದಲೂ
ಸಜ್ಜುಗೊಳಿಸಿದ್ದ ಹಂಸತೂಲಿಕ ತಲ್ಪದ ಮ್ಯಾಲ ಗುಡಿ ಹಿ೦ದಲ ಮೂಳೆ
ಮೋಬಯ್ಯ ಯಂಬ ಹೆಸರುಳ್ಳ ಸರೀರವು ಗಳಿಗ್ಗಳಿಗೊಂದು ಸಾರಿ ಕಾಲು
ಚಾಚಿ ವುದ್ದವಾಗುತಲಿತ್ತು. ಕಯ್ಯ ಮಡಚಿ ತಲೆ ಅಡಿಕೆ, ಯದೆ ಮ್ಯಾಲ
ಯಿಟ್ಟು ಕೊಳ್ಳುತಲಿತ್ತು.. ಬೆರಳುಗಳ ಮಿಸುಕಾಡಿ ಯೇನೇನೋ ಸಂಗನೆ
ಮಾಡುತಲಿತ್ತು. ಸುತ್ತಮುತ್ತ ಪಿಳಿಪಿಳಿ ಕಣ್ಣುಬಿಟ್ಟು ಯೇನೇನ್ನೋ ನೋಡುತಲಿತ್ತು.
ಕಿವಿ ಅಗ್ಗಲ ಮಾಡಿ ಯೇನನ್ನೋ ಕೇಳಿಸಿಕೊಳ್ಳುತಲಿತ್ತು. ಬಾಯಿ ತೆರೆದು
ದ್ದೊನಿ ಪರಂಪರೆಯನ್ನು ಹೊಂಡಿಸುತಲಿತ್ತು... ಕೂಕಂಡಂಗೆ ಮಾಡುತಲಿತ್ತು.
ಯದ್ದಂಗೆ ಮಾಡುತಲಿತ್ತು.. ನಡೆದಾಡಿದಂಗೆ ಮಾಡುತಲಿತ್ತು. ಆ ಸರೀರವು..
ಅವ್ವನ್ನ ಹೊಳೆಗ ಹೊಂದಿಸುವ ಯಿದಿ ಯಿಧಾನಗಳ ಕುರಿತು ತರ್ಜನ ಭರ್ಜನ
ಮಾಡುತ ಪಟ್ಟಣ ಸೋಮಿಗಳೊಂದಿಗೆ ಕೂಕಂಡಿದ್ದವರು ಯಾರಪಾ ಅಂದರ
ಗೊಂಜಾಲರಡವೆಜ್ಜ ತನ್ನ ಸರೀರದ ಮ್ಯಾಲ ಯೇಸು ಕೂದಲುಗಳಿರುವಮೋ
ಆಸು ವರುಷಗಳ ಹಿಂದೆ ಹುಟ್ಟಿದವನೆನ್ನಲಾದ ಮೂರುವಿಕ ಜಡತಾತ..
ಸಾವಿರಾರು ಕುರಿ ಕೋಳಿ ವಂದಿಗನೂ, ಪಸುರೋಗ ರುಜಿಣ ತಗ್ನನೂ,
ಪ್ರತಿದಿನವನ್ನು ಜವರಾಯನಾಗಮನಕ್ಕೆ ಮೀಸಲಿಟ್ಟು ಕಾಯುತ್ತಿರುವಂಥವನೂ
ಆದ ಕೆಂಗುರೆಜ್ಞ ಯಿವರೊಂದೇ ಅಲ್ಲದೆ ಫಲಾನ ತಕರಾರಯ್ಯನೂ, ಫಲಾನ
ಅನುಮಾನಯ್ಯನೂ.. ಅವರೆಲ್ಲರ ನುಡವೆ.. ಯಿವರೆಲ್ಲರ ನಡುವೆ ಚರ್ಚೆ ನಡಿತಾ