ಪುಟ:ಅರಮನೆ.pdf/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅರಮನೆ

೨೦೭


ಜನಪ್ರಿಯತೆಯನ್ನು ಯಾಕೆ ಕುಗ್ಗಿಸಲಾಗಲಿಲ್ಲವೆಂಬ ಯಿವರಣೆ ಸುದೀರ್ಘವಾಗಿತ್ತು.
ಅದನ್ನು ಕೂಲಂಕುಷ ಪರಿಸೀಲನೆ ಮಾಡಿದ ಕಲೆಕಟ್ಟರನು ಹಿಂಗs ಆತುರದ
ನಿರ್ಣಯಕ್ಕೆ ಬರಬ್ಯಾಡಿರಿ.. ನಿಮ್ಮ ಸೇವೆಯ ಅಗತ್ಯ ಕುಂಪಣಿ ಸರಕಾರಕ್ಕಯ್ತೆ
ಯಂದು ಗಲಗಲಾಂತ ಅಂಗಲಾಚಿದರೂ ಪ್ರಯೋಜನವಾಗಲಿಲ್ಲ. ಕುಂಪಣಿ
ಸರಕಾರದ ಮಾಳಿಗದಲ್ಲಿದ್ದು ನೂರು ವರುಷ ಬದುಕುವುದಕ್ಕಿಂತ ನಾಗಿರೆಡ್ಡಿಯ
ಅಭಿಮಾನಿಯಾಗಿ ವಂದೇ ವಂದಿವಸ ಬದುಕುವುದು ಲೇಸು ಯಂದು ನುಡಿದ
ಮುನುಸೋಬಯ್ಯನು ಆಗಿಂದಾಗಲೆ ಮಿಷನರಿಯೊಂದನ್ನು ಸ್ಥಾಪನೆ ಮಾಡುವ
ನಿಮಿತ್ತ ಗುಂತಕಲ್ಲ ಕಡೇಕ ಪ್ರಯಾಣ ಬೆಳೆಸಿದನೆಂಬಲ್ಲಿಗೆ ಸಿವ ಸಂಕರ
ಮಾದೇವಃss..
ಯಿತ್ತ ಯಿವರು ವಬ್ಬರಿಗೊಬ್ಬರು ಮಾತಾಡುತಲಿದ್ದುದು ನಾಗಿರೆಡ್ಡಿಯನ್ನು
ಬಂಧಿಸುವ ಸಲುವಾಗಿ, ಬಂಧಿಸಿ ರೆಡ್ಡಿಯ ವಿಚಾರಣೆ ಮೂಲಕ ಹೊಸ
ನ್ಯಾಯಾಲಯದ ಕಟ್ಟಡವನ್ನು ವುದ್ಘಾಟನೆ ಮಾಡುವ ಸಲುವಾಗಿ, ಯಿದಕ್ಕೆಂದೇ
ನರಸಿಮ್ಮರಾಯನೆಂಬಾತನನ್ನು ಗೊತ್ತುಮಾಡಿದ್ದರು. ಅಸಂಖ್ಯಾತ
ಮಕ್ಕಳೊಂದಿಗನೂ, ರವುರವ ಬಡತನದ ಬೇಗೆಯಲ್ಲಿ ಬೇಯುತಲಿದ್ದಾತನೂ,
ವುಪ್ಪುಂಡ ಮನೆಗೆ ಯರಡು ಬಗೆಯುವಲ್ಲಿ ನಿಷ್ಣಾತನೂ ಆಗಿದ್ದ ಸದರಿ ರಾಯನ
ಮನವಲಿಸುವ ಸಲುವಾಗಿ ಹೆಯಬ ತರುಣ ಅಧಿಕಾರಿಯನ್ನು ಗೋಪ್ಯವಾಗಿ
ಕಳುಹಿ ಯರಡು ಮೂರು ದಿವಸಗಳುರುಳಿದ್ದವು. ಮುಂದೊಂದಿವಸ ವುನ್ನತ
ಅಧಿಕಾರಿಯಾಗುವ ಕಣಸು ಸಹಿತ ಹೆನ್ರಿತಾನಿದ್ದ ನಡುವು ಗ್ರಾಮದ ಸೆರಗಲ್ಲಿದ್ದ
ಮಾಯಿನ ತೋಪಿಗೆ ರಾಯನನ್ನು ಬರಮಾಡಿಕೊಂಡನು. ಯಿದ್ದ ಯಿಷಯ
ತಿಳಿಪಡಿಸಿದನು. ರೆಡ್ಡಿ ತನಗುಪಕಾರ ಮಾಡಿರುವುದನ್ನು ಮೊದಮೊದಲಿಗೆ
ನೆನೆಯೂತ ರಾಯನು ಯೀ ಕ್ರುತ್ಯ ಮಾಡಿ ನರಕಕ್ಕೆ ಹೋಗಲಾರೆನೆಂದು
ಹೇಳಿದನು. ಭವಿಷತ್‌ಕಾಲದ ನರಕಕ್ಕಿಂತ ವರ್ತಮಾನಕಾಲದ ನರಕದಿಂದ
ಪಾರಾಗುವ ಸಲುವಾಗಿಯಾದರೂ ಯೀ ಕ್ರುತ್ಯ ಮಾಡಬೇಕೆಂದೂ, ಮೂರು
ತಲೆಮಾರು ಕುಂತು ತಿಂದರೂ ಸವೆಯದಷ್ಟು ಸಂಪತ್ತನ್ನು ಚರಾಸ್ತಿ
ಸ್ಥಿರಾಸ್ತಿರೂಪದಲ್ಲಿ ಸರಕಾರವು ಮುಫತ್ತಾಗಿ ನೀಡುವುದೆಂದೂ ಹೆನ್ರಿ ಹೇಳಿದ್ದಕ್ಕೆ
ಅವಯ್ಯನು ವಪ್ಪಿದನು. ಕಲೆಟ್ಟರ ಸಾಹೇಬನೆದುರು ಹೇಳಿಕೆ ನೀಡಬೇಕೆಂದು
ಹೇಳಿ ಹೆನ್ರಿಯು ರಾಯನನ್ನು ಗೋಪ್ಯಾತಿಗೋಪ್ಯವಾಗಿ ಕರೆ ತಂದು
ಸಾದರಪಡಿಸಿದನು.