ಪುಟ:ಅರಮನೆ.pdf/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೦೮

ಅರಮನೆ


ತನ್ನೆದುರು ಅಂತಜಲೀಬದ್ಧನಾಗಿ ನಿಂತಿರುವ ದ್ರೋಹಾಗ್ರೇಸರನನ್ನು
ನಖಶಿಖಾಂತ ನೋಡುತ ಮನ್ರೋನು ತಾನೋದಿರುವ ಸೇಕ್ಸಫೀಯರನ
ನಾಟಕಗಳ ದ್ರೋಹಚಿಂತಕ ಪಾತ್ರಗಳನ್ನು ವಂದೊಂದಾಗಿ ನೆನಪಿಸಿಕೊಂಡನು.
ತನ್ನ ಬಡತನವನ್ನು ಪೂರ್ಣ ತೊಲಗಿಸಲಾರದ ಕಾರಣಕ್ಕೆ ಬೊಬ್ಬಲಿ
ನಾಗಿರೆಡ್ಡಿಯನ್ನು ಹಿಡಿದೊಪ್ಪಿಸಲು ತಾನು ನಿಶ್ಚಯಿಸಿರುವುದಾಗಿ ರಾಯನು
ನಿಸ್ಸಂಕೋಚವಾಗಿ ಹೇಳಿಕೆಯಲ್ಲಿ ತಿಳಿಪಡಿಸಿದನು. ಫಲಾನ ಯಿಂಥ ಕಡೆ ಯಿಂಥ
ದಿವಸ ಯಿದ್ವಾನ್ ಸಚ್ಚಿದಾನಂದ ಶಾಸ್ತ್ರಿಯಿರಚಿತ ಸ್ತೀ ಭೀಮಲಿಂಗೇಶ್ವರ ಪುರಾಣ
ಪ್ರವಚನ ಕಾರ್ಯ ನಡೆಯಲಿರುವುದಾಗಿಯೂ, ಅಲ್ಲಿಗೆ ತಾನು ರೆಡ್ಡಿಯನ್ನು
ಕರೆದುಕೊಂಡು ಬರುವುದಾಗಿಯೂ.. ಆಗ ಸಿಪಾಯಿಗಳು ಗಪ್ಪಂತ
ಹಿಡಿಯಬೇಕೆಂದೂ ಹೇಳಿದನು. ಅವಯ್ಯನ ಅತ್ಯದ್ಭುತ ದ್ರೋಹ ಚಿಂತನಾ
ಕವುಸಲ್ಯಕ್ಕೆ ಮಾರು ಹೋದ ಮನ್ರೋನು ಕೆಲವು ರೂಪಾಯಿಗಳಿದ್ದ ಸಂಚಿಯನ್ನು
ವಗೆದನು. ಅದನ್ನು ಭಯ ಭಕುತಿಯಿಂದ ಯತ್ತಿಕೊಂಡ ರಾಯನು
ಹಿಮ್ಮುಖವಾಗಿ ನಡೆಯುತ ಸದರಿ ನಗರದ ಪ್ಯಾಟಿಗೆ ಹೋಗಿ ಯೇನೇನು
ಖರೀದಿ ಮಾಡಿದನೆಂದರೆ....
ಅತ್ತ ಹರಪನಹಳ್ಳಿ ಪ್ರಾಂತದ ಹತ್ತಾರು ಮೂರುಗಳೊಳಗೆ ಯೇನೇನು
ನಡೆಯುತ್ತಿತ್ತೆಂದರೆ ಅದೇ ನಡೆಯುತಲಿತ್ತು. ಅಲ್ಲಿನ ಯಿದ್ಯಾಮಾನಗಳ ಬಗ್ಗೆ
ಅರಸಿಕೇರಿಯ ನಿಬಿಡಾರಣ್ಯದೊಳಗಿದ್ದ ಯಲ್ಲಾ ಪ್ರಕೊರಚರಟ್ಟಿಯು
ಆಕಾಸರಾಮಣ್ಣನ ನೇತ್ರುತ್ವದಲ್ಲಿ ಚರ್ಚೆ ನಡೆಸುತಲಿತ್ತು.ರಾಜಕಾರಣ ಮಟ್ಟದಲ್ಲಿ
ಚೋರ ಕಲೆಯು ಜನಪ್ರಿಯಗೊಂಡಿರುವುದರ ಬಗ್ಗೆ ರುತ್ತಿನಿರತ ಕಳ್ಳರು
ಮತ್ತೇಭಯಿಕ್ರೀಡಿತ ಛಂದಸ್ಸಿನಲ್ಲಿ ಮಾತಾಡಿಕೊಳ್ಳುತಲಿದ್ದರು. ಆಳುವ ರಾಜರುಗಳೇ
ಚೋರ ಕಸುಬಿಗಿಳಿದಿರುವುದರಿಂದ ತಮ್ಮ ಕುಲದೇವತೆ ಪೋಲಾಚಮ್ಮ
ಕ್ರುದ್ಧಯಾಗುವ ಕಾಲ ದೂರ ಯಿಲ್ಲ ಯಂಬ ನಿರ್ಯಣಕ ಬಂದರು.
ಕಳುಮೂವಂದು ಸಾಮಾಜಿಕ ಮವುಲ್ಯವಾಗಿ ಮಾರ್ಪಟ್ಟಿರುವುದೂ, ಮತ್ತದು
ಗುರುಕುಲ ಪಠ್ಯಕ್ರಮಗಳೊಳಗ ಭೋದನಾಂಸವಾಗಿರುವುದೂ ಕಲಿಕಾಲದ
ವಯಿಪರೀತ್ಯಗಳಲ್ಲಿ ವಂದು ಯಂಬ ನಿರಯಕ ಬಂದರು. ತಾವೇ ಅರಾಜಕತೆ
ಕಾಣಿಸಿಕೊಂಡಿರುವ ದೂರುಗಳ ವುಸ್ತುವಾರಿಯನ್ನು ಕಯ್ಯಿಗೆತ್ತಿಕೊಂಡರೆ ಹೇಗೆ?
ಯಿದಕ ಪೋಲಾಚಮ್ಮ ವಪ್ಪಿಗೆ ನೀಡುವಳೆ? ಹಿಂಗ ವಗಯ್ರೆ..ವಗಯ್ರೆಕುರಿತು
ಮಾತುಕತೆ ನಡೆಸುತ್ತಿರುವಾಗ್ಗೆ..ಯಿದು ತಪ್ಪು. ತಪ್ಪು ಯಂಬರ ಬರುವ ರೀತಿಯಲ್ಲಿ