ಪುಟ:ಅರಮನೆ.pdf/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅರಮನೆ

೨೦೯


ಗೂಗೆಗಳು ಗೂಗುಕ್ ಯಂದೂ.. ನರಿ, ತೋಳಗಳು ಹೋ ಹೋ ಯಂದು
ಮುಗುಲಿಗೆ ಮುಖಮಾಡಿ ಕೂಗುತಿರುವಾಗ್ಗೆ...
ಅತ್ತ ಕೂಡ್ಲಿಗಿ ಪಟ್ಟಣದೊಳಗ ಮಂದಿಯು ಯಡ್ಡವರ್ಡನೂ,
ಚೆನ್ನಫರಮ್ಮನೂ ಪರಸ್ಪರ ಅನ್ಯೋನ್ಯವಾಗಿರುವರೆಂಬ ವದಂತಿಯನ್ನು
ಖಚಿತಪಡಿಸಿಕೊಳ್ಳಲು ಅನೇಕ ರೀತಿಯಲ್ಲಿ ಪ್ರಯತ್ನ ಪಡುತಲಿದ್ದರು. ಬಂಗಲೆಯ
ಪರಿಚಾರಕರನ್ನು ಅಲ್ಲಲ್ಲಿ ತರುಬಿ ತಮ್ಮನುಮಾನ ಪರಿಹಾರ
ಮಾಡಿಕೊಳ್ಳುತಲಿದ್ದರು. ಕೇವಲ ವಾರದ ಹಿಂದೆಯಷ್ಟೆ ಕವುಟುಂಬಿಕ
ಸಲಹೆದಾರನೆಂದು ನೇಮಕಗೊಂಡಿದ್ದ ಮತ್ತು ಬಡತಿ ಪಡೆದು ವರ್ಗವಾಗಿ
ಬಂದಿದ್ದ ಯಂಕೋಬ ಸಾಸ್ತಿರಿಯು ತನ್ನ ವಾಗ್ವಯ್ಬರಿಯಿಂದ ಯಡ್ಡವರ್ಡು
ಮತ್ತು ಜೆನ್ನಿಫರಮ್ಮ ಪಾರ್ವತಿ ಪರಮೇಸ್ವರರಷ್ಟೆ ಆದರ್ಸ ದಂಪತಿಗಳು ಯಂದು
ಸದರಿ ಪಟ್ಟಣದ ಕವುಟುಂಬಿಕ ಯವಸ್ಥೆಗೆ ಮನವರಿಕೆ ಮಾಡಿಕೊಡುವಲ್ಲಿ
ಯಶಸ್ವಿಯಾಗಿದ್ದನು. ಸರಕಾರವು ಪ್ರತಿಯೊಂದು ಹೋಬಳಿ ಪಟ್ಟಣಗಳಲ್ಲಿ ಸಮೀಕ್ಷೆ
ನಡೆಸಿ ವಸಂತ ಪೂರ್ಣಿಮದ ಬೆಳದಿಂಗಳಲ್ಲಿ ಆದರ್ಸ ದಂಪತಿಗಳು' ಯಂಬ
ಪ್ರಶಸ್ತಿ ನೀಡಲಿರುವುದಾಗಿ ಪ್ರಕಟಣೆ ಹೊರಡಿಸಿ ಸಂಚಲನವನ್ನು ಸ್ರುಸ್ಟಿಸಿದ್ದನು.
ಪೂರಕ ಪ್ರಚಾರ ಸಾಹಿತ್ಯ ಸಾಮಾಗ್ರಿಯನ್ನೂ ಹೇರಳವಾಗಿ ಬಳಕೆ ಮಾಡಿದ್ದನು.
ಯಿದರಿಂದಾಗಿ ಸದರಿ ಪಟ್ಟಣದ ಬಹುತೇಕ ದಾಂಪತ್ಯಗಳು ಬಿರುಕುಗಳಿಂದ
ಮುಕ್ತಗೊಳ್ಳುವ ಪ್ರಯತ್ನ ನಡೆಸಿದವು.. ಗಂಡ ಹೆಂಡಿರು ಆದರ್ಸ ಪರಿಕಲ್ಪನೆ
ಸಲುವಾಗಿ ಬೆಸುಗೆ ಕಾರ್ಯವನ್ನು ಗೋಪ್ಯವಾಗಿ ಆರಂಭಿಸಿದರು. ಮದುವೆ
ವಯಸ್ಸಿಗೆ ಬಂದಿದ್ದ ತರುಣ, ತರುಣಿಯರೇನಿದ್ದರು, ಅವರು ತಮ ತಮ್ಮ
ಅಪ್ಪ ಅವ್ವಂದಿರನು ತರುಬಿ ಯಾವಾಗ ತಮ್ಮ ಮದುವೆ ಯಂದು ಹಕ್ಕೊತ್ತಾಯ
ಹೇರತೊಡಗಿದರು. ಯೀಗಾಗಲೇ ಗುಟ್ಟಾಗಿ ಪ್ರೇಮ ಸಲ್ಲಾಪದಲ್ಲಿ
ತೊಡಗಿದ್ದವರೇನಿದ್ದರು ಅಂಥವರ ಮದುವೆ ಕೆಲವು ಮಿಜಿ ಮಿಜಿಗಳ
ನಡುವೆಯೂ ನಡೆಯಲಾರಂಭಿಸಿದವು. ಆದರೆ ಸದರಿ ಪಟ್ಟಣದ ಯಲ್ಲ
ಯುವಕರಿಗೆ ಯೇ ತೆರನ ಯಿವಾಹ ಯೋಗ ಯಿರಲಿಲ್ಲ.. ಅದಕ್ಕೆ
ಕಾರಣವೂಯಿರಲಿಲ್ಲ.. ಯೇನೆಂದರೆ ವಂಕದಾರಿ ಗೋಯಿಂದಪ್ಪ ಪೋಷಿ«ಯ
ಯೇಕ ಮಾತ್ರಪುತ್ರಸುಬ್ಬಣ್ಣನ ಜಾಯಮಾನದವರಾದ ನೂರಾರು ಮಂದಿ
ತರುಣರು ತಾವು ತಿಲ್ಲಾನ ತಾಯಕ್ಕನ ಮಗಳು ಚಿನ್ನಾಸಾನಿಯನ್ನೇ
ಮದುವೆಯಾಗಬೇಕೆಂದು ತೀರ್ಮನಿಸಿದ್ದರು. ಯೀ ಯಿಷಯದಲ್ಲಿ ಅವರ ಕೆಲ