ಪುಟ:ಅರಮನೆ.pdf/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅರಮನೆ

೨೧೧


ತೆಗೆದು ಸ್ವಾಗತ ಸತ್ಕಾರಕ್ಕೆ ತಥಾಕಥಿತವಾಗಿ ಸ್ಪಂದಿಸಿದನು. ಯಷ್ಟೋ ಹೊತ್ತು
ಗತಿಸಿದ ನಂತರ ನಿಧಾನಿಕೇಲೆ ಅರುವಿಗೆ ಬಂತು. ತಾಯಕ್ಕ ತಾಯಿಸ್ಥಾನದಲ್ಲಿರುವ
ಸಂಗತಿ. ಯೀ ವಯಸ್ಸಿನಲ್ಲೂ ಯಿ ಪರಿ ಅಂಗಸವುಷವ ಯಿಟ್ಟುಕೊಂಡಿರುವ
ಯೀಕೆ ವಂದು ಕಾಲದಲ್ಲಿ ರಂಭೆಯೋ, ವೂರ್ವಸಿಯೋ, ಮೇನಕೆಯೋ
ಆಗಿದ್ದಿರಬೇಕು.. ಅರೆ! ತನ್ನ ಮನಸ್ಸು ಯಭಿಚಾರದ ಕಡೇಕ ತಪ್ಪು ಹೆಜ್ಜೆ
ಹಾಕುತ್ತಿರುವುದಲ್ಲಾ?... ಪಾಪೋಹಂ , ದ್ರುಸ್ಟಿ ಚದುರಿಸಿದ. ತಲೆ ತಗ್ಗಿಸಿ ಯತ್ತಿದ.
ತನ್ನ ಯೇಕಪತ್ನೀರೊತವನ್ನು ಚಾಚೂತಪ್ಪದೆ ಪಾಲಿಸಬೇಕು. ದ್ರುಢಮನಸ್ಕನಾದ.
ತಂಗೀ ಅನ್ನಲಿಕ್ಕಾಗದೆ, ಅಕ್ಕಾಯನ್ನಲಿಕ್ಕಾಗದೆ ವದ್ದಾಡುತ.. ಆಕೆಯ ಮಗಳನ್ನು
ನೋಡುವ, ನೋಡಿ ಮಾತಾಡುವ ಬಯಕೆ ಯಕ್ತಪಡಿಸಿದ, ಅವಯ್ಯನ
ಸರೀರದೊಳಗೆ ಕಾಮಾದಿ ಭಾವನೆಗಳು ಲವಲೇಸುಯಿಲ್ಲಯಂಬುದನ್ನು ವಂದು
ನೋಟ ಮಾತ್ರದಿಂದ ಖಾತರಿ ಮಾಡಿಕೊಂಡ ತಾಯಕ್ಕ (ತನಗಾ ಹೆಸರು
ಹುಟ್ಟಿದಾರಾಭ್ಯದಿಂದ ಬಂದುದಾಗಿರಲಿಲ್ಲ.. ತನ್ನನ್ನು ನೋಡುವವರ ಮನಸ್ಸಿನಲ್ಲಿ
ಸೋದರಿಯತ್ವದ ಭಾವನೆ ಬರಬೇಕೆಂದೇ ತಾನು ಮಧ್ಯಂತರದಲ್ಲಿ
ಯಿಟ್ಟುಕೊಂಡಿರುವಂಥ ನಾಮವಾಚಕ ಅದಾಗಿರುವುದು. ಆಕೆಯನ್ನು
ವಂದೊಂದು ಸಮುಸ್ಥಾನದವರು ವಂದೊಂದು ರೀತಿಯಲ್ಲಿ
ಸಂಬೋಧಿಸುತಲಿದ್ದರು. ಯಾವುದೊಂದು ಜಿಹ್ವಾ ಶಾಸನದಲ್ಲೂ ಆಕೆಯ
ನಿಜನಾಮಧೇಯದ ಬಗ್ಗೆ ತಿಲ ಮಾತ್ತವುಲ್ಲೇಖಯಿಲ್ಲ) ಪುಟ್ಟಾ, ಕಂದಾs... ಅಮ್ಮಣ್ಣೀ
ಯಂದು ಗಳಿಗ್ಗಳಿಗ್ಗೊಮ್ಮೆ ಮಾಲಕಂವುಸ ಲಯದಲ್ಲಿ ಕೂಗಿದಳು..
ಆಗಂತುಕನೊಂದಿಗೆ ತನ್ನ ತಾಯಿ ನಡೆಸಿದ್ದ ಮಾತುಕತೆಯನ್ನು ಚೆನ್ನಾಸಾನಿ
ತಾನಿದ್ದ ಸಾಣಮಂದಿರದೊಳಗಿಂದಲೇ ಆಲಿಸದಿರಲಿಲ್ಲ.. ಅಪರಿಚಿತ ಗಂಡಸಿನ
ದ್ದೊನಿಯಂಬುದರಲ್ಲಿ ಅನುಮಾನವಿಲ್ಲ... ಸುಸಂಸುಕ್ರತನೋರ್ವ ಆಡುವಂಥ
ಮಾತು. ಪ್ರಾಯಶಃ ಯೀ ಪ್ರಾಂತಕ್ಕಾತ ಹೊಸಬನಿದ್ದಿರಬೌದು. ಆದರ್ಸ ದಾಂಪತ್ಯ
ಯೋಜನೆಯಿಂದ ಮನೆಮಾತಾಗಿರುವ ಸದರಿ ಪಟ್ಟಣದಲ್ಲಿ ಆತನು
ಸಾಮಾನ್ಯನಿರಲಾರನು. ಗಂಧರ್ವಲೋಕದವನಾಗಿರಬೇಕು. ಯಿಲ್ಲವೆಂದರೆ
ದಾಂಪತ್ಯದ ಪರಿಕಲ್ಪನೆ ಕುರಿತು ಅತ್ಯದ್ಭುತವಾಗಿ ಯೋಚಿಸಲಕಾದೀತಾ? ಕಾರ್ಯಗತ
ಗೊಳಿಸಲಕಾದೀತಾ? ಅವರೀರ್ವರ ಮಾತಿನ ಧಾಟಿ ಅವಲೋಕನ ಮಾಡಿದಲ್ಲಿ
ಆತ ತನ್ನ ತಾಯಿಯಲ್ಲಿ ಅನುರಕ್ತನಾಗಿದ್ದಿರಬೌದು, ಯಿಲ್ಲವೆ ತನ್ನ ತಾಯಿ
ಆತನಲ್ಲಿ ಅನುರಕ್ತಿಯಾಗಿದ್ದಿರಬೌದು, ಮೋಹ ಅವರೀರ್ವರ ನಡುವೆ ಪ್ರಾಥಮಿಕ