ಪುಟ:ಅರಮನೆ.pdf/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೧೨

ಅರಮನೆ


ಹಂತದಲ್ಲಿರಬೇಕು, ಮಗಳಾದ ತನ್ನನ್ನೇ ವಯರಾಗ್ಯದ ಕಡೆ ನಡೆಸುತ್ತಿರುವ
ತನ್ನ ತಾಯಿ ಮಾಯಾವಿನಿ ಯಂಬುದಂತೂ ಖರೆ....
ಹಿಂಗs ೦ಯೋಚಿಸುತ್ತಲೇ ಬೆತ್ತಲಾಗಿದ್ದಳು ಚಿನ್ಮಸಾನಿ.
ವಾರದಿನಮಾನದಿಂದ ಗೋಪ್ಯವಾಗಿ ಅಡಗಿಸಿಕೊಂಡಿದ್ದ ಪುಟ್ಟ ಕನ್ನಡಿಯನ್ನು
ತನ್ನ ಲಲಿತ ಸರೀರದ ಮ್ಯಾಲೆಲ್ಲ ಸುಲಲಿತವಾಗಿ ಹರಿದಾಡಿಸಿದಳು ಚೆನ್ನಾಸಾನಿ..
ನೀನಾದರೂ ಸುಖಪಟ್ಟೆಯಲ್ಲ ಯಂದು ಕನ್ನಡಿಯನ್ನು ಚುಂಬಿಸಿದಳು.
ಚಿನ್ನಾಸಾನಿ.. ತಾನು ಲಗೂನ ಸಾಣ ಮಾಡಬೇಕೆಂದರೆ ನೀರು
ಸಹಕರಿಸುತಲಿರಲಿಲ್ಲ. ಅದರ ವಂದೊಂದು ಬಿಂದು ತನ್ನ ಸರೀರದಿಂದ ಕೆಳಗೆ
ಜಾರಲು ಅಗತ್ಯಕ್ಕಿಂತ ತುಸು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದುದೇ ಅದಕ
ಕಾರಣ. ತಮ್ಮ ಮನೆಯಿಂದಾಚೆ ಹೊರಯಿರಬೌದಾದ ಪುರುಷರ ಆಸೆಬುರುಕ
ಕಣ್ಣುಗಳು ಪವ್ವನೆ ಪಾರಿ ಬಂದು ತನ್ನ ಸರೀರದ ಮ್ಯಾಲೆಲ್ಲ ಹರಿದಾಡುತ
ಕಚಗುಳ್ಳಿಯಿಕ್ಕುತ್ತಿರುವಂಥ ಅನುಭವ ಬೇರೆ, ಕಲ್ಪನೆಯೇ ಸೊಗಸು, ಕಲ್ಪನೆಯೇ
ಮಾದಕ, ಕಲ್ಪನೆಯೇ ರೋಮಾಂಚನ... ಬಚ್ಚಲೆಂಬುದು ಬಯಲು, ಬಯಲು
ಯಂಬುದೇ ಬಚ್ಚಲು.. ಬಯಲು ಬಚ್ಚಲ ನಡುವಿನ ಸಾಂಗತ್ಯವೇ ಅದ್ಭುತ!
ಸಾಣ ಮಾಡಿದ್ದಾಯಿತು. ಬಹುವರ್ಣಮಯ ವುಡುಪುಗಳಿಂದ ತನ್ನ
ಸರೀರದ ಆಯಕಟ್ಟಾದ ಅಮೂಲ್ಯ ಅಂಗಗಳನ್ನು ಬಂಧಿಸಿದ್ದಾಯಿತು. ವುಳಿದಂತೆ..
ಯಿದರ ಮಾಲ ಅದು, ಅದರ ಮ್ಯಾಲ ಯಿದು....
ಪುಟ್ಟಾ, ಕಂದಾ.. ಅಮ್ಮಣ್ಣೀ.. ತೀರ್ಥರೂಪರ ಸ್ಥಾನದಲ್ಲಿರುವ ಹಿರಿಯರನ್ನು
ಕಾಯಿಸುವುದು ಸರಿಯಲ್ಲ ತಾಯೇ....”
ಚಿನ್ನಾಸಾನಿ ಅಗತ್ಯಕ್ಕಿಂತ ಹೆಚ್ಚು ವಯರಾಗ್ಯ, ಅಲವುಕಿಕ ವುಡುಗೆ,
ತೊಡುಗೆ, ಪ್ರಸಾದನಗಳಿಂದ ತನ್ನ ಸರೀರವನ್ನು ಅಲಂಕರಿಸಿಕೊಂಡಳು.
ಮರೆಮಾಚಿಕೊಂಡಳು. ಯಿದಕ್ಕೆ ಪೂರಕವಾಗಿ ದೇವರಕೋಣೆಯಲ್ಲಿ ಚಿನ್ನದ
ಗಂಟೆಯನ್ನಲುಗಾಡಿಸುತ ನಾದ ಹರಿಸಿದಳು.. ತುಪ್ಪದೀವಿಗೆಯ ಬೆಳಕಲ್ಲಿ ಥಳಥಳ
ಹೊಳೆದಳು.. ತೂಗು ನೀಲಾಂಜನದ ಬೆಳಕಲ್ಲಿ ನಳನಳಿಸಿದಳು, ಹಲವು ತಯ್ಲಗಳ
ಹಲವು ದೀವಿಗೆಗಳ ಬೆಳಕಲ್ಲಿ ಹಲವು ತೆರನ ಕಾಮನ ಬಿಲ್ಲುಗಳಾಗಿ ದೇವರ
ಕೋಣೆಯ ತುಂಬೆಲ್ಲ ಮೂಡಿದ ಆ ಚಂದ್ರವದನೆಯು ಲೋಬಾನಧೂಪದೊಳಗ
ನಡೀತಾ ನಡಿತಾ... ಹೊಸ್ತಿಲು ದಾಟಿ ಯೀಚೆ ಅಡಿಯಿರಿಸಿದೊಡನೆ ತನ್ನ
ವುನ್ಮೀಲಿತ ನೇತ್ರಗಳಿಂದ ಸಮ್ಮೋಹನಾಸ್ತ್ರವ ಬಿಳ್ಟೊಡನೆ.. ಕಣ್ಣುಗಳಿಗಾವ