ಪುಟ:ಅರಮನೆ.pdf/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಅರಮನೆ

೨೧೩


ವಯರಾಗ್ಯ ಯಂಬುದನ್ನು ಸಾಬೀತುಪಡಿಸಿದೊಡನೆ.. ಅಯಿವತ್ತರ
ಸರೀರದೊಳಗಿಂದ ಯಿಪ್ಪತ್ತರ ಹರೆಯನ್ನು ಹೆಕ್ಕಿ ತೆಗೆಯುವುದು ತನಗಾವ
ಲೆಕ್ಕ ಯಂಬುದನ್ನು ಸಾಬೀತುಪಡಿಸಿದೊಡನೆ.. “ನಮಸ್ಕಾರ” ಯಂಬ
ನುಡಿಯಿಂದ ಹೆಡಮುರುಗೆ ಕಟ್ಟಿದೊಡನೆ....
ಸಂಭವಿಸಲಿದ್ದ ಮೂರೈಯಿಂದ ಚೇತರಿಸಿಕೊಂಡವನಾದ ರಾಯ,
ನಭೂತೋ ನಭವಿಷ್ಯತಿ ಯಂಬ ಮುಖಬೆಳೆಯುಳ್ಳ ಸವುಂದರ್ಯವನ್ನು ಕಣ್ಣಾರೆ
ನೋಡಿ ದಂಗಾದ ರಾಯ. ಯಲ್ಲಿ ತನ್ನೊಳಗಿನ ಯೇಕ ಪತ್ನಿತ್ವದ ನಿಷೆ«
ದಹನಗೊಂಡಿತೋ? ಮೂರನೇ ತಿಂಗಳಲ್ಲೂ ತವರು ಮನೆಯೊಳಗುಳಿದಿರುವ
ತ್ರಿಕಾಲಗ್ನಾನಿಣಿಯಾದ ತನ್ನ ಪತ್ನಿಗೆ ತಾನು ಅಪರಿಮಿತ ಸವುಂದರ್ಯರಾಸಿಯದುರು
ವುಪಸ್ಥಿತಿನಿರುವ ಸಂಗತಿ ತಿಳಿದರೇನು ಗತಿ ಯಂದರಗಳಿಗೆ ಕಂಗಾಲಾದ ರಾಯ
ಬೇರೆ ದಾರಿಯಿಲ್ಲದೆ..
ಮಾಣಿಕ್ಯ ವೀಣಾ ಮುಪಲಾಸ ಯಂತೀಂss
ಮದಾಲಸಾಂ ಮಂಜುಳ ವಾಗ್ವಿಲಾಸ೦sss
ಮಹೇಂದ್ರನೀಲದ್ಯುತಿ ಕೋಮಲಾಂಗೀಂss
ಮಾತಂಗ ಕನ್ಯಾ ಮನಸಾಸ್ಮರಾಮಿss
ಚತುರ್ಛುಚೇ ಚಂದ್ರಕಳಾವತಂಸೇss
ಕುಚೋನ್ನತೇ ಕುಂಕುಮರಾಗ ಶೋಣೇsss
ಪುಂಡ್ರೇಷು ಪಾಶಾಂಕುಶ ಪುಷ್ಪ ಬಾಣ ಹಸ್ತೇss
ನಮಸ್ತೇ ಜಗದೇಕ ಮಾತss
ಮಾತಾಮರಕತ ಶಾಮಾ ಮಾತಂಗೀ ಮಧುಶಾಲಿನೀsss
ಕುರ್ಯಾತ್ಕಟಾಕ್ಷಂ ಕಲ್ಯಾಣೀs ಕದಂಬ ವನವಾಸಿನೀಂ ಜಯ ಮಾತಂಗ
ತನಯೇssss
ಯಂದು ರಾಗದಿಂದ ಹಾಡಿಯಾದ ಮ್ಯಾಲ “ತಾಯಾಮ್ಮಾ.. ಮಾ
ಲಕ್ಷ್ಮೀದೇವಿಯೇ ನಿನ್ನೀ ಮಗಳ ಸರೀರದೊಳಗ ನೆಲೆಸಿರುವಳು.. ಯೀಕೆಯ
ಸವುಂದರ್ಯ ರುಥಾ ಆಗುವುದು ಬೇಡ.. ನ್ರುತ್ಯ ಕಲಿಸಿ ಖ್ಯಾತ
ನ್ರುತ್ಯೆಕಲಾಯಿದೆಯನ್ನಾಗಿ ಮಾಡು” ಯಂದು ಆಸೀರುವಚನ ಭಂಗಿಯಲ್ಲಿ
ನುಡಿದನು. ಅಪೂರ್ವ ಲಾವಣ್ಯವತಿಯಾದ ಯೀಕೆಯನ್ನು ಯಡ್ಡವರನ ದ್ವಾರ
ವಂದು ಸುಗ್ರೀವಾಗ್ನೆಯನ್ನು ಹೊಂಡಿಸಿ ಮುಟ್ಟುಗೋಲು ಹಾಕಿಕೊಂಡು