ಪುಟ:ಅರಮನೆ.pdf/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೧೪

ಅರಮನೆ


ಕುಂಪಣಿ ಸರಕಾರದ ಭಂಡಾರವನ್ನು ಸ್ರೀಮಂತಗೊಳಿಸಿದರೆ ಹೇಗೆ ಯಂದು
ಅವಯ್ಯನು ವಳಗೊಳಗೆ ರುಥಾ ಆಲೋಚನೆಯಂ ಮಾಡುತ ಅಲ್ಲಿಂದ.....
ಅತ್ತ ಮಾರೆಮ್ಮನ ಜಾಗ್ರುತ ಸ್ಥಳವಾದ ಗವುರಸಂದ್ರದ ಕೂಗಳತೆ
ದೂರದಲ್ಲಿದ್ದ ಮುರುಡಿಯೊಳಗ... ಶ್ರೀಮದ್ ಯಾಸರಾಯ
ಮುನಿವರೇಂದ್ರರಿಂದ ಪ್ರತಿಷಾ«ಪಿಸಲ್ಪಟ್ಟಿರುವ, ಯದುರುಮುಖೀ
ಆಂಜನೇಯಸ್ವಾಮಿ ನೆಲೆಗೊಂಡಿರುವ ಮುರುಡಿಯೊಳಗ, ದೂರವಡಿ
ರಾಜಾಹನುಮಪ್ಪನಾಯಕ ನೆಂಬುವಾತ ಸಣ್ಣಾತಿ ಸಣ್ಣ ಮಾರ್ಪಲದೊಂದಿಗೆ ಆಳ್ವಿಕೆ
ನಡೆಸಿದ್ದಂಥಾ ಮುರುಡಿಯೊಳಗ, ಯುಗಯುಗಾಂತರಗಳ ಹಿಂದೆ ಭಗೀರಥ
ಮುನಿಯ ಹಿಂದ ಹಿಂದ ಹೊರಟಂಥ ಗಂಗಾದೇವಿಯ ಸಾವುರ ಮಯ್ಲುದ್ದದ
ಕೂದಲೊಂದು ಕಂಪಳ ಮಲೆಯ ಕಣಿವೆಯಿಂದಿಳಿದು ಚುಟುಕಲಕನಂದೆಯಂಬ
ವುಪನಾಮವನ್ನು ತಳೆದು ಸಂವತ್ಸರದ ಹನ್ನೆರಡೂ ಮಾಸಗಳ ಕಾಲ ಆರಕ್ಕೇರದೆ
ಮೂರಕ್ಕಿಳಿಯದೆ ಜುಳುಜುಳು ಹರಿಯುತಲಿರುವ ಹಳ್ಳದ ತಟಾಕದಲ್ಲಿರುವ
ಮುರುಡಿಯೊಳಗ, ಪಸುಪಾಲಕ ರುತ್ತಿಯನ್ನೇ ಆಧಾರ ಯಿಟ್ಟುಕೊಂಡಿದ್ದಂಥ
ಮುರುಡಿಯೊಳಗ....
ಕಾಲುಬಾಯಿ ರೋಗ ಅಮರಿ ವಂದು ಹೆಜ್ಜೆ ಮುಂದಕ್ಕೆ ಕಿತ್ತಿಡಲಾಗದೆ,
ಎಂದು ಹೆಜ್ಜೆ ಹಿಂದಕ್ಕೆ ಕಿತ್ತಿಡಲಾಗದೆ, ಬಾಯಿಯಿಂದ ಲ್ವಾಳೆ ಲ್ದಾಳೆ ಜೊಲ್ಲು
ಸುರಿಸುತ್ತ ವಂದು ಹಿಡಿ ಸೊಪ್ಪೆ ನಮಲಲಾಗದೆ ಯಿಲಯಿಲಾಂತ ವದ್ದಾಡುತಲಿದ್ದ
ಯತ್ತು ಯಮ್ಮೆ ದನಕರುಗಳ ದಯನಾತಿ ದಯ್ನ ಸ್ಥಿತಿಯನ್ನು ನೋಡಲಾಗದೆ
“ಅಯ್ಯೋ... ಗವುರಸಂದರ ಮಾರೆಮ್ಮ ತಾಯೀ.. ಬಾಯಿಲ್ಲದ ಪ್ರಾಣಿಗಳಿಗೆ
ಮೂರಾತಿ ಘೋರ ರಾಗ ಬರುಸಿ ತ್ರಾಸು ಕೊಡುತಲಿದ್ದೀಯಲ್ಲಾ... ಯಿದು
ತರವಾ.. ನಮ್ಮಂಥ ನರಹುಳುಗಳಿಗೆ ಯಿಂಥ ರ್ವಾಗ ಬರುಸಬೇಕಿತ್ತು. ಯಲ್ಡು
ತುತ್ತು ನಮಲುವ ಕಡೇಕ ವಂದು ತುತ್ತು ನಮಲಿ ಜೀವನ ಹಿಡಕಂತಿದ್ದೆವಲ್ಲಾ...
ಹೋಗಿ ಹೋಗಿ ಮೂಗ ರಾಸುಗಳಿಗೆ ಕೊಟ್ಟಿರುವಿಯಲ್ಲಾ.. ಯಿವು ನಿನಗ
ಮಾಡಿರುವ ದ್ರೋಹವಾದರು ಯೇನು? ಎಂದು ಗಿಡಾ ಅಂಟಂಬಂಗಿಲ್ಲ..
ಮದು ಮದ್ದು ಅಂಟಂಬಂಗಿಲ್ಲ..ಯಿದೆಂಥ ಗತೀನ ತಂದೀ ತಾಯೀ” ಯಂದು
ಸಣಕಂದಮ್ಮನಂಗೆ ದುಕುದುಕ್ಕಿಸಿ ಅಳುತ, ಬಿಕುಬಿಕ್ಕಿ ವುರುಳಾಡುತ, ದಬ್‌ದಬ್ಬಂತ
ಯದೆ ಯದೇನ ನಿಂತ ನಿಲುವೀಕಿಲೆ ಬಡಕಮ್ಮಿದ್ದ ಪೂರವಿಕ ಕಾಲದ ಹಿರೀಕರ
ಪಯ್ಕಿ ಹಿರೀಕ ಮನುಷ್ಯನಾದ ನಡುಲಮನಿ ಹಂಪಜ್ಜನ ದುಕ್ಕ ನಿವಾರಣೆ