ಪುಟ:ಅರಮನೆ.pdf/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೧೮

ಅರಮನೆ

ಯೇನುಣ್ಣಿಸುತ್ತ ಬೆಳೆಸಿದಳೋ? ಯೇನು ಹೇಳುತ ಬೆಳೆಸಿದಳೋ? ವಟ್ಟಿನಲ್ಲಿ
ಅದು ಮಾನವ ಸಹಜ ಯಿನ್ಯಾಸದಂತೆ ಬೆಳೆಯದೆ ತಾನೇ ವಂದು
ನಮೂನಿಯಾಗಿ ಬೆಳಿ ಬೆಳಿತಾss ದೊಡ್ಡದಾಗಿ ಹರೇವಿಗೆ ಬಂತು. ಹಂಪಯ್ಯನ
ಸರೀರದೊಳಗ ಯಾವ ಮೋಡಿ ಅಡಗಿತ್ತೋ.. ರಾಸುಗಳು ಅವಯ್ಯನ ಮ್ಯಾಲ
ಬಿದ್ದು ಸಾಯತೊಡಗಿದವು. ಅವುಗಳೊಂದಿಗೆ ತಾನೂ, ತನ್ನೊಂದಿಗೆ ಅವುಗಳೂ
ಸಂಭಾಷಿಸುತ್ತವೆಯೆಂಬ ಪ್ರತೀತಿವುಂಟು. ಅವರಿವರು ಮುಂಗಡ, ಕಯ್ಯಿಗಡ
ದಾನ ರೂಪದಲ್ಲಿ ದನಕರುಗಳನ್ನು ನೀಡಿದ ಕಾರಣದಿಂದ ತಾನು ಪಸು
ಸಾಮ್ರಾಜ್ಯಕ್ಕೆ ವಡೆಯನಾದನು. ತಾನು ಹೋದ ಕಡೇಲೆಲ್ಲ ಗಾದರಿಪಾಲಯ್ಯ,
ಕಂಪಳದಯ್ಯ, ಯತ್ತಯ್ಯ, ಜುಂಜಯ್ಯರೇ ಮೊದಲಾದ ಸರಣರ ಕಥೆಗಳ
ಪಾರಾಯಣ ಮಾಡುತ್ತ ಹಂಪಮ್ತಾಯಿಯ ಪಾದಂಗಳನು ಪ್ರತಿಷಾ«ಪನೆ ಮಾಡುತ್ತ
ಹಿ೦ದಲ ಕಾಲದ ವಂದಿವಸ ಗವುರಸ೦ದರ ಸೇರಿಕೊಂಡನು.
ಹಂಪಮ್ತಾಯಿಯೊಂದಿಗೆ ಮಾಡಿಕೊಂಡ ವಡಂಬಡಿಕೆಯಂತೆ ಮಾರೆಮ್ಮ ಆತನ
ಕಣಸೊಳಗ ಮೂಡಿ ಪತ್ತೀಸು ಕಾಯಾಟ ಆಡಿದಳು. ತನ್ನಾರು ಕಾಯಿಗಳನ್ನು
ಹಣ್ಣು ಮಾಡಿ ಗೆದ್ದ ಕಾರಣದಿಂದ ಸಂಪ್ರೀತಗೊಂಡ ತಾಯಿಯು 'ಮಗss
ಯಿಲ್ಲಿಗೆ ನಯ್ರುತ್ಯ ದಿಕ್ಕಿನಲ್ಲಿ ವಂದು ದಮ್ಮು ಕಾಲ್ನಡೆತದ ದೂರದಲ್ಲಿ ಮುರುಡಿ
ಯಂಬ ಗ್ರಾಮವುಂಟು. ಅಲ್ಲಿ ಯಾಸರಾಯ ಯಂಬಾತನು ಪ್ರತಿಷ್ಟಾಪಣ ಮಾಡಿ
ಆಂಜನೇಯದೇವರನ್ನು ನನ್ನ ಯಿರುದ್ಧ ಯತ್ತಿ ಕಟ್ಟಿದ್ದಾನೆ. ಆತಂದೇ ಅಲ್ಲಿ
ಬಲು ಜೋರು ನಡಿತಾ ಅಯ್ಕೆ.. ನನ ಕಡೇಕ ತಲೆ ಮಾಡಿ ಮಲಗೋರ
ಸಂಖೆ ದಿನದಿಂದ ದಿನಕ ಯಿಳಿತಾ ಅಯ್ತೆ.. ನನ್ನ ಹೆಸರಲ್ಲಿ ದೀಪಾರತಿ,
ಧೂಪಾರತಿ ಮಾಡೋರ ಸಂಖ್ಯೆ ದಿನದಿಂದ ದಿನಕ ಯಿಳಿತಾ ಅಯ್ತೆ.. ಅದಕ
ನನ್ನ ಸಿಸುಮಗನಾದ ನೀನು ಅಲ್ಲಿಗೆ ಹೋಗಬೇಕಪ್ಪಾ.. ನನಗ ನಡಾವಳಿ
ಮಾಡಬೇಕಪ್ಪಾ.. ವಂದು ಮಿಣಿ ತಯ್ಲದ್ದೀಪ ಹಚ್ಚಬೇಕಪ್ಪಾ. ವಂದು ಚಿಮುಟಿಗಿ
ಲೋಬಾನ ವುರಿಸಬೇಕಪ್ಪಾ.. ಯಂದು ದಯನಾಸದಿಂದ ಕೇಳಿಕೊಂಡಳು.
ಆಗಲಿ ತಾಯೇ ಯಂದು ಜವಾಬು ನೀಡಿ ಹಂಪಜ್ಜನು ಸದರಿ ಗ್ರಾಮವನ್ನು
ಪಸುಸಂಪತ್ತಿನಿಂದ ತುಂಬಿ ಯೇಸು ಕಾಲವಾತೋ, ಯೇನು ಕಥಿಯೋ..
ಯಿವನಾರಪ್ಪಾ.. ರಾವಣ ವಮುಸ ಸಂಜಾತ.. ಬಂದು ಯೀಸು
ಕಾಲವಾತು.. ತನ್ನ ಸನ್ನಿಧಿಗೆ ವಂದು ಸಲವಾದರೂ ಬರಲಿಲ್ಲವಲ್ಲಾ.. ಕಯ್ನ
ಯತ್ರಿ ಮುಗಿಲಿಲ್ಲವಲ್ಲಾ ಯಂದು ಬ್ಯಾಸರಗೊಂಡ ಮಾರುತಿಯು ವತನದಾರರ