ಪುಟ:ಅರಮನೆ.pdf/೨೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅರಮನೆ

೨೨೧


ರಾಸುಗಳಿಗೆ ವಳ್ಳೇದಾಗೋದಾದರ ಪ್ರಾಣ ಬಿಡು ಅನ್ನು ಬಿಡುತೀನಿ.. ಮೂರು
ಬಿಟ್ಟ ಹೋಗು ಅನ್ನು ಬಿಟ್ಟು ಹೋಂಡುತೀನಿ. ಆದರ ಯಿದೊಂದು ಮಾತನು
ಮಾತ್ರನೀನು ಹೇಳೋದು ಬ್ಯಾಡ.. ನಾನು ಕೇಳಿ ಮಯ್ಲಿಗಿ ಆಗೋದು ಬ್ಯಾಡ”
ಯಂದು ಕಡ್ಡಿ ಮುರಿದಂತೆ ಹೇಳಿದ್ದುಂಟು. ಆ ಕೂಡಲೆ ತಾನು ಹೋಗಿ
ಚುಟುಕಲಕನಂದನೆಯಲ್ಲಿ ಮುಳುಗು ಹಾಕಿ ಮಯ್ಲಿಗೆ ಕಳೆದುಕೊಂಡದ್ದುಂಟು.
ಯಂಥ ದಂತವದ ಮುನುಸಿದ್ದೀತು. ತಾಯಿ ಮಾರೆಮ್ಮ
ಗವುರಸಂದರದೊಳಗವಳಾ? ಯಿಲ್ಲವಾ..? ತನ್ನ ರೊತ, ನಿಷೆ« ನಿಯಮಗಳಿಗೆ
ಕವಡೆ ಕಿಮ್ಮತ್ತು ಕೊಡುತಾ ಯಿಲ್ಲವಲ್ಲಾ.. ತಾಯಿss ನೀನಲ್ಲಿದೀಯಾ...?
ಯಿಲ್ಲದೀಯಾ? ಯಲ್ಲದೀಯೇ ನಮ್ಮವ್ವ.? ಯಂದತಗಂತ ಮಲಕ್ಕೊಂಡಿದ್ದ
ಮುದೇತನ ಕಣಸೊಳಗ ಮುಪ್ಪಾನು ಮುದುಕಿಯೊಬ್ಬಾಕಿ ಕಾಣಿಸಿಕೊಂಡು “ನಿನ
ಯಸನ ನನಗರ್ಥ ಆತಯ್ತೆ ಕಂದಾ.. ಮಾರೆಮ್ಮ ತಾಯಿ ಸಾಂಬವೀನ ಕಾಣಲಕಂತ
ಕುಂತಳಸೀಮೆ ಕಡೇಕ ನಡೆದವಳೆ ನಡದು ಹುಡುಕುತ್ತಾ ಅಲೀತವಳೆ..” ಯಂದು
ನುಡುದು ಮಾಯವಾದಂಗಾತು. ಬಡದು ಯಬ್ಬಿಸಿದಂಗಾತು. ಕುಂತಲ
ಸೀಮೆಯೆಂಬುದು ಯಲ್ಲುಂಟು? ಯಾವ ಕಡೇಕುಂಟು? ನಿನಗ ಗೊತ್ತಾ?
ತನಗೆ ಗೊತ್ತಾ... ಯಂದವರಿವರನ್ನು ಕೇಳುತ ಮುದೇನು ಅಲೆಯುತ್ತಿರುವಾಗ್ಗೆ
ಆಚ್ಚೇಕಡೇಕ ನಗಂದಿ ಬಸಪ್ಪ ತಗುಲಿದನು, ಯಿಚ್ಚೇ ಕಡೇಕ ನಗಾರಿ ಸುಗ್ಗುಲಪ್ಪನು
ತಗುಲಿದನು. ಕುಂತಳ ದೇಸವು ಯಿಂಥಲ್ಲೇ ಅಯಿತೆಂದು ಹೇಳುವುದು ಕಡುಕಷ್ಟ
ತಾತಯ್ಯ... ವಟ್ಟಿನಾಗ ಆ ಹೆಸರಿನ ದೇಸ ವಂದು ಪಡುವಲ ದಿಕ್ಕಿನಲ್ಲೆಲ್ಲೋ
ಯೀಟಗಲ, ಆಟುದ್ದಕ ಬಿದುಕೊಂಡಿರುವುದಂತೆ. ತಡೀ.. ಹೇಳುತ, ಕೇಳುತ
ಪತ್ತೆಕಾರ್ಯೇವ ಮಾಡಾಣss..... ಯಂದವರೀರ್ವರು ತಮತಮ ಹೆಗಲುಗಳನ್ನು
ಅವಯ್ಯನ ಹೆಗಲಿಗೆ ಬೆಸೆದ ಸೋಲುಪ ಹೊತ್ತಲ್ಲಿ..
ಅಗಾ.. ಅಲ್ಲಿ ಮಲಿಯಪ್ಪ.. ಯಿಗಾ ಯಿಲ್ಲಿ ತಡಸಲಪ್ಪ.. ಕುರಿ
ಮೇಯಿಸಿಕೋತ ಭೂಮಂಡಲವ ಸುತ್ತಾಡಿರೋರು ಕೇಳಿದ್ದಕ್ಕೆ ಅವರು
ಅವುದೆಜಮಾನ.. ನಡಕೋತ, ನಡಕೋತ ಹೋಗಿ ಹೋಗಿ ಭೂಮಂಡಲದ
ಬದುವು ಮುಟ್ಟಿದವರದೀವಿ.. ಸಮುದ್ಧರ ಯಂಬ ಹೆಸರಿನ ಅಗಾಧ ವುಪ್ಪು
ನೀರೊಳಗ ಮಜ್ಜಣ ಮಾಡಿದವರದೀವಿ.. ಆದರ ಕುಂತಳ ದೇಸ ಯಂಬ
ಹೆಸರಿನ ಯಾವ ಮೂರೂ ನಮ್ಮ ಕಾಲಿಗೆ ಅಟೆದದ್ದನ್ನು ಕಾಣೆವು.. ಯಿರಲಿ
ತಡಕ.. ಸಟ್ಟಿಕ್ಕರೆ ಮತ್ತೆ ತಾಳಕ್ಕರೆ ನಡುವೆ ದೂರುವದಲ್ಲಿ ಕಾಳಗ ನಡೀತಲ್ಲ...