ಪುಟ:ಅರಮನೆ.pdf/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೨೨

ಅರಮನೆ


ಅದಕ ಕುಂತಲದೇಸದ ಸಂಬಂಧ ಅಯ್ತಾ..? ಗಂಡ ಕಾಳಗದಲ್ಲಿ ಯೀರ
ಸೊರ್ಗಯೇರಿದ ಯಂಬ ಕಾರಣಕ್ಕೆ ಚಿತೆ ಹೊಕ್ಕು ಸಾಯುಜ್ಯ ಪದವಿ
ಪಡಕೊಂಡ ಬೊಟ್ಲತಿಮ್ಮಕ್ಕನ ತವರೂರೇನಾದರು ಕುಂತಳ ದೇಸವಾಗಿದ್ದಿರಬೌದು?
ಗವುರಸ೦ದರ ಯೀರಪ್ಪನಾಯಕನ ಸಯ್ನಿಕವರ್ಗದಲ್ಲಿದ್ದ ಮುದ್ದಯ್ಯನ
ಹೆಂಡತಿಯಾದ ತೊಟ್ಲ ತಾಯವ್ವನ ತವರೂರ ನಿಜನಾಮ
ಕುಂತಳದೇಸವಾಗಿದ್ದಿರಬೌದಾ? ಯಿರಲಿ ತಡಕಾ.. ಆ ಯೀರ ಹೆಣುಮಕ್ಕಳ
ಹೆಸರಲ್ಲಿ ಯರಡು ಮಾಸ್ತಿಕಲ್ಲುಗಳನ್ನು ನೆಡಸವರಲ್ಲಾ... ಅವುಗಳೆದೆ ಪಂಚಾಕ್ಷರಗಳ
ಸಮುಚ್ಚಯ ಯಿದ್ದಿರಬೌದಾ.. ಸಿಲಾಕ್ಕಸರಗಳನ್ನು ಮೋದಬಲ್ಲ.. ಮೋದಿ ಬಿಡುಸಿ
ಹೇಳಬಲ್ಲ ಗಣುಮಗ ಸದರಿ ಗ್ರಾಮದೊಳಗ ಯಲ್ಲವನಂತೆ?
ಕ್ಯಾತನ ಮಲೆಯ ನೆತ್ತಿಮ್ಯಾಲ ಕಾಲೂರಿ ತನ್ನ ಕಣ್ಣ ಬೆಳಕಲ್ಲಿ
ಹುಡುಹುಡುಕಾಡುತವನೆ ಹಂಪಜ್ಜ.. ಹೆಜ್ಜೆ ಹೆಜ್ಜೆಗೆ ಸರುಪಗಳು ತೊಡರುತವೆ..
ಅಗೋ ಅಲ್ಲಿ ಹೊನ್ನಿಗನ ಜೋಡಿ ಕಂದೀಲುಗಳಂಥ ಕಣ್ಣುಗಳು
ಮಿರುವಿರಗುತ್ತವೆ.. ಅಲ್ಲೆಲ್ಲೋ ನರಿ ಮಾಳಿಡುತಾ ಅಯ್ತೆ.. ಯಿಲ್ಲೆಲ್ಲೋ ದೆವ್ವಗಳು
ಸರಪರ ಅಡ್ಡಾಡಿದಂಗಾತಯ್ತೆ... ಅವಕ್ಕೆಲ್ಲ ಗಾದರಿಪಾಲಯ್ಯನ ಪಾದಗಳೇ
ಅಂಜುತಾಯಿಲ್ಲ ಅಂದಮ್ಯಾಲ ತಾನ್ಯಾಕ ಅದುರಿಕಬೇಕು? ಯಿಲ್ಲಿ
ಯಿನ್ನೊಂಚಾವತ್ತಿಗಲ್ಲಿ.. ಮೂಡುತ ಮುಳುಗುತ ಅಂಬ್ರುತಬಳ್ಳಿ ಕಣುಮುಚ್ಚಾಲೆ
ಆಟ ಆಡಿತು.. ಕಾಡುಗೋಳಿ ಕೂಗಿದಾದ ಮ್ಯಾಲಕ... ಮೂಡಲಕ ಮೂಡಿದ
ಬೆಳ್ಳಿ ಹಿಡಿ ಬೆಳಕ ಭೂಮಿಗೆ ಚೆಲ್ಲಾಡಿದ ಮ್ಯಾಲಕ, ಬಳ್ಳಿ ಗೋಚರ ಮಾಡಿತು.
ಹರಕ ಹರಕು ಯಂದು ಕಯ್ತುಂಬ ದೊರಕಿತು. ಹಂಪಜ್ಜ ಅಂಬ್ರುತವ್ವಾ..
ಅಂಬ್ರುತವ್ವಾ.. ಯಂದು ರಮಿಸುತ ವಂದು ಚೋಟುದ್ದದ ಬಳ್ಳಿಯಿಂದ ವಂದು
ಹೊರೆ ಸಪ್ಪನ್ನು ಕಿತ್ತು ತಲೆಮ್ಯಾಲಿಟ್ಟುಕೊಂಡು ಅವುರೀಕಲೆ ಹೆಜ್ಜೆಯಿಡುತಾs...
ಯಿಡುತ ಮಲೆಯ ಕಾಲ ಸಂದಿಗೆ ಸೇರಿಕೊಂಡ. ಅಲ್ಲಿ ಕಾವುಕೋತಯಿದ್ದ
ಅನುಕೂಲಸ್ಥರು ಅವಯ್ಯನನ್ನು ಜೋಪಾನವಾಗಿ ಕರಕೊಂಡು ಮೂರೊಳೀಕ್ಕೆ
ಹೋಗುದಕೂ.. ಕುರುಮ್ಯಾ, ಬರುಮ್ಯಾ ಯಂಬೀರ್ವರು ಕುಂತಲ
ದೇಶಯಲ್ಲಯಿತೆಂಬುದರ ಸುಳುವು ತಾವು ನೀಡಬಲ್ಲೆವು ಯಂದು ಬಸಪ್ಪ
ಸುಗ್ಗುಲಪ್ಪಂದಿರೆದುರು ಹೇಳುದಕ್ಕೂ ಸರಿಹೋಯಿತು. ಅದನು ಕೇಳುತಲೆ
ಅನುಕೂಲಸ್ಥರೀರ್ವರು ಅಡಲ್ಲಾಗಿಬಿಟ್ಟರು. ಕಾಲ ಕೆಟ್ಟಂಗಯಿತಲ್ಲಾ.. ತನ್ನೂಳಿಗದ
ಕರುಮಾಚಾರಿಗಳೇ ಸಿಲಾಸಾಸನ ಮೋದಿದರೆಂದರೆ ನಾಯಕನಾದವನು