ಪುಟ:ಅರಮನೆ.pdf/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅರಮನೆ

೨೨೩


ತಲೆಯತ್ತಿ ಬದುಕುವುದುಂಟಾ?.. ಅವಯ್ಯ ಅಕ್ಕಸರ ಬಲ್ಲಂಥವರನ್ನು ಪ್ರೀತ್ಯರ್ಥವಾಗಿ
ಸರಸೊತಿ ತಾಯಿಗೆ ಬಲಿಗೊಡದ ಬಿಟ್ಟಾನss........ ಮೂಡಿದ ಸಂದೇಹಗಳು
ವಂದಾ ಯರಡಾ.. ಅದಕ್ಕುತ್ತರವಾಗಿ ಅವರೀರ್ವರು “ತಂದೆಗೋಳಾ. ನಮಗ
ನಿಮ್ಮ ರುಣಾ ತೀರಿಸೋ ಜರೂರತ್ತಯ್ತೆ.. ವದಿಗಿರೋ ಸಂಕಟವ ಪರಿಹಾರ
ಮಾಡಲೋಸುಗ ಜೀವ ಕೊಡಲಕ ಸಿದ್ದರದೀವಿ.. ನೀವು ಮೋದಂದರ
ಮೋದುತೀವಿ, ಮೋದೋದು ಬ್ಯಾಡs ಅಂದರೂ ಮೋದುತೀವಿ.. ಸಿಲಾ
ಸಾಸನಗಳಿರೋದೇ ನಾಕು ಮಂದಿ ಮೋದಲಕಂತ..” ಯಂದು ಜವಾಬು
ನೀಡಿದ್ದು ಪಾಡನಿಸಿತು..
'ಮೋದು' ಯಂಬ ಕ್ರಿಯಾ ಸಬುಧದ ದ್ವಾರಾ ಗ್ರಾಮದಾದ್ಯಂತ
ಸಂಚಲನವನ್ನು ಸುಷಿ« ಮಾಡಿದ ಆ ಘಟಾನುಘಟಿಗಳ ಪೂರುವಾಪರ ಸದರಿ
ಗ್ರಾಮಸ್ಥರಿಗೆ ಗೊತ್ತಿಲ್ಲ.. ತಾಯಿ ಸಾಂಬವಿಯ ಅಗಾಧ ಪಾದಮುದ್ರೆಯ ದರುಸನ
ಮಾತ್ರದಿಂದ ಕುದುರೆಡವಿನಿಂದ ವಾಯು ವೇಗದಿಂದ ಹೊರಟು ಹತ್ತಾರು
ಮೂರುಗಳನ್ನು ಸುತ್ತಾಡೀ ಸುತ್ತಾಡಿ ಸದರಿ ಗ್ರಾಮದ ಹನುಮಂತಪ್ಪನಾಯಕನ
ಮಾಳಿಗಕ್ಕೆ ನಾಮ ಬದಲಾವಣೆ ಮಾಡಿಕೊಂಡು ಸೇರಿಕೊಂಡಿದ್ದಂಥವರು
ಯಾರಪ್ಪಾ ಅಂದರ ಮುಳುಗುವುರುಕುಂದನು, ದಳವಾಯಿ ಕೆಂಜೆಡೆಯ
ಆಗಿದ್ದರು.. ನಿಜ ಹೇಳಲಕಂದರ ತಮ್ಮೆದೆಯೊಳಗೆಲ್ಲೂ ಅಕ್ಕಸರದ ಕೊಂಬು
ಸಹ ಯಿರಲಿಲ್ಲ.. ಪರಿಭ್ರಮಣದಿಂದಾಗಿ ಲಭಿಸಿದ್ದಂಥ ಲವುಕಿಕ ಗ್ನಾನ ಸಾತಷ್ಷಿತ್ತಲ್ಲ...
ಅದಕ ಅವರು ಸಿಲಾಸಾಸನವನ್ನು ಮೋದಿದಂತೆ ನಟನೆ ಮಾಡಿದರು(ಹೇಳಿಕೇಳಿ
ಮಾಸ್ತಿಕಲ್ಲುಗಳ ಮ್ಯಾಲ ಅಕ್ಕಸರಯಿರದಿದ್ದರೂನೂವೆ).. “ತಂದೇಗೋಳಾ..
ಮೋದಲಾಗಿ... ಕುಂತಲದೇಸ ಯಂಬುದು ವಂದುಮಾರಲ್ಲ... ಎಂದು ಪಟ್ಟಣವಲ್ಲ
ಯಂಬುದು ಯೇದ್ಯವಾತು.. ಯಿಲ್ಲಿಗೆ ಯಿಪ್ಪತ್ತೊಂದು ಹರದಾರಿ ದೂರದಲ್ಲಿ
ಕುಂತಲದೇಸದ ಬದುವುವುಂಟು.. ಕ್ಯಾತಯ್ಯನ ಮಲೆ ದಾಟಿದರ ಗಾದರಿಮಲೆ,
ಅದನ್ನು ದಾಟಿದರ ಕಂಪಳದಯ್ಯನ ಮಲೆ.. ಕಾತರಿಕಿ, ಹೂಡೇಮು
ರವುಡುಕುಂದ ದಾಟುತ ಹೋದರ ಗುಡೇಕೋಟೆ, ಅಲ್ಲಿಂದ ಸಿಡೇಗಲ್ಲು...
ಅದರಿಂದಾಚೆ ಕುದುರೆಡವು ಬರುವುದು, ಆ ಕುದುರೆಡವಳಗ ಮೋಬಯ್ಯನ
ಸರೀರವನ್ನು ಹೆಣುದ್ಯಾವತೆಯೊಂದು ಭೋಗ್ಯ ಹಿಡದಯ್ತೆ ಯಂಬ ಗಾಳಿ
ಸುದ್ದೀನ ಕೇಳಿ ಬಲ್ಲೆವು ಯಂದು ಹೇಳುತs ಹೇಳುತ ತಮ್ಮನ್ನು ಹೆತ್ತವರನ್ನು
ಯಾಕೋ ಯಿದ್ದಕ್ಕಿದ್ದಂತೆ ಗ್ನಾಪಕ ತಂದುಕೊಂಡು ಗದ್ಗದಿತರಾದರಲ್ಲದೆ ಬಿಕುಬಿಕು