ಪುಟ:ಅರಮನೆ.pdf/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೨೪

ಅರಮನೆ


ಬಿಕ್ಕಳಿಸಿ ಅಳತೊಡಗದಿದ್ದಲ್ಲಿ... ಸದರಿ ಗ್ರಾಮದ ಮ್ಯಾಲ ಕುದುರೆಡವು ಯಂಬ
ಪಂಚಾಕ್ಷರ ಮಂತ್ರವು ಯಾವ ರೀತಿ ಧಾಳಿ ಮಾಡುತಲಿತ್ತೋ ಸಿವನೇ....
ಅತ್ತ ಕಡೆ ಹಂಪಜ್ಜ "ತಾಯೀ.. ತಾಯೀ” ಯಂದು ರೋದನ
ಮಾತಡುತಲಿದ್ದುದು ಮುಗುಲಿಗೆ ಮುಟ್ಟಿತ್ತು. ತನಗೊಂದು ಮಾತನ್ನಾರ ಹೇಳಿ
ಹೋಗಿದ್ದರ ಬ್ಯಾಡ ಅಂಬುತಲಿರಲಿಲ್ಲ.. ತಾಯಿಯಾದಾಕಿಗೆ ತನ್ನಂಥ ಯೇಸು
ಮಕ್ಕಳೋ? ತನ್ನ ನಡಾವಳಿ ಮ್ಯಾಲ ಆಕೆಯೂ, ಆಕೆಯ ನಡಾವಳಿ ಮ್ಯಾಲ
ತಾನೂ ನಿಗಾಯಿಟ್ಟಿದ್ದನ್ನು ಯಾವತ್ತೂ ಬಿಟ್ಟಿದುದಿಲ್ಲ. ಆಕೆ ಹೇಳದೆ, ಕೇಳದೆ
ಹೊಂಟು ಹೋಗಿರುವಳೆಂದರೆ ತನ್ನಿಂದೇನಾದರೂ ಅಪಚಾರವಾಗಿರಭೌದೇ?
ಪ್ರಾಣದೋಪಾದಿಯಲ್ಲಿ ಯಿದ್ದ ಆಕೆಯೇ ಯಿಲ್ಲೆಂದ ಮ್ಯಾಲ ಯೀ ಘಟವು
ಯಾವ ಪುರುಸಾರ್ಥಕ್ಕೆ ಯಿರಬೇಕು ಯಂಬ ನಿರ್ಣಯಕ್ಕೆ ಅವಯ್ಯ ಬರಲಕ
ಯಿನ್ನೆಷ್ಟು ಅಂತರ ಯಿತ್ತೆಂದರೆ. ಅವಯ್ಯ ಮಾಡುತಲಿದ್ದ ದುಕ್ಕ ಗ್ರಾಮದ
ಬೀದಿ ಬೀದಿಗಳ ಗುಂಟ ಹಂಪಿ ಹೊಳಿಯಾಗಿ ಯಾವ ಪ್ರಕಾರವಾಗಿ
ಹರಿಯಲಾರಂಭಿಸಿತೆಂದರೆ.....
ಅದು ಮನೋಯೇಗದಲ್ಲಿ ಹರಕೋತss ಹರಕೋತss
ವಂದು ಕಾಲದಲ್ಲಿ ಗಂದರ್ವ ಕನ್ಯಯರು ಭೂಲೋಕಕ್ಕೆ ಬಂದು ಜಲಕ್ರೀಡೆ
ಆಡುತಲಿದ್ದಂಥ ಯೀ ಕಲಿಕಾಲಕ್ಕೆ ನರಮಾನ್ನವರ ಪಾಪ ಪರಿಗಿದ ಕಾರಣಕ
ಬತ್ತಿ ಬುರುದೆ ತುಂಬಿಕೊಂಡಿರುವ ಹೊನ್ನಮ್ಮನ ಹಳ್ಳವನ್ನು ಯೇನಕೇನ ದಾಟಿ
ವುಸ್ಸಪ್ಪ ಅಂತ ಸಾಗುವಾನಿ ಮರದಡಿ ವುದ್ದಕ ಕಾಲುಚಾಚಿ ಕೂಕಂಡಿದ್ದ
ಯೀಟಯ್ಯ, ಬ್ಯಾಟಯ್ಯ, ಬಲದಯ್ಯ, ಬಿಲದಯ್ಯ, ಸಾಮಯ್ಯ, ದಾನಯ್ಯ,
ಭೇದಯ್ಯ ಯಂಬ ಸಪ್ತರುಷಿಗಳಿಗೆ ಮುಖಂಡಯ್ಯನಾದ ಬೋಸಯ್ಯನ
ರುದಯಕ್ಕ ತಗುಲಿತು. ಅವಯ್ಯನು ಆ ಕೂಡಲೆ ಬೆಚ್ಚಿಬಿದ್ದವನಾದನು.
ಶ್ರೀಘಾತವಾಗುತಲಯ್ತೆ - ಭಿರ್ರನೆ ಹೊಂಡಿರಿ” ಯಂದು ತನ್ನವರನ್ನು
ಹುರಿದುಂಬಿಸಿ ಸಾರೋಟನ್ನು ಸಜ್ಜುಗೊಳಿಸಿದನು. ತನ್ನ ಕಣ್ಣೂಳಗ ಮುರುಡಿಯ
ಹಾದಿ ಮುಡುವುದು, ಮುಳುಗುವುದ ಮಾತಡಲು ಸಾರೋಟನ್ನು ತಕ್ಕ
ಕಾವಲಿನೊಳಗ ಲಟಗೂ ಪುಟಗೂ ಸಾಗಿದನು. ಯಾದೋ ವಂದು ಅಗೋಚರ
ಸಗುತಿ ತಮ್ಮನ್ನು ಕಯ್ಯಿ ಹಿಡದು ನಡೆಸಲಾರಂಭಿಸಿದ್ದ ಕಾರಣಕ್ಯ, ಹುಲಿಯಮ್ಮ
ವಂದು ಅಗೋಚರ ಸಗುತಿ ತಮ್ಮನ್ನು ಕಯ್ನಿ ಹಿಡಿದು ನಡೆಸಲಾರಂಭಿಸಿದ್ದ
ಕಾರಣಕ್ಕ ಹುಲಿಯಮ್ಮ ಯದುರಿಗೆ ಬಂದು ಅಡರಗ್ ಯಂದು ಘರ್ಜನ