ಪುಟ:ಅರಮನೆ.pdf/೨೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೨೬

ಅರಮನೆ


ಗಂಡನಾದ ಡಿಸೆಕ್ಕಗೆ ಕೊಡುತ “ನೀವು ಸಂತ ಪದವಿಯನ್ನಲಂಕರಿಸುವ ದಿನ
ನಾನು ಲೀಡಸದಲ್ಲಿರುತ್ತೇನೆ” ಯಂದು ಹೇಳಿದಳು. ಸುಮ್ಮನೆ ಯಿಸಕೊಂಡು
ದಯವೇಚ್ಛೆ ಯಂದನು. ಸಾಮಾಜಿಕ ದುಕ್ಕ ನಿವಾರಣೆ ಮಾಡುವ ನಿಮಿತ್ತ
ನಾಸ್ತಿಕರನ್ನು ಆಸ್ತಿಕರನ್ನಾಗಿಸುವ ನಿಮಿತ್ತ, ರೋಗ ರುಜಿಣಗಳನ್ನು ನಿರ್ಮೂಲನ
ಮಾಡುವ ನಿಮಿತ್ತ ಪ್ರೀತಿ ಅಂತಃಕರಣಗಳ ಜೀರ್ಣೋದ್ಧಾರ ಮಾಡುವ ನಿಮಿತ್ತ
ಸ್ವೇತಾಂಬರಧಾರಿಯಾಗಿ ತಾನು ಬೀದಿಗಳಿಗೆ ಹೋಗಲು ಜನರು
"ಮುನುಸೋಬಯ್ಯಾ..ಮುನುಸೋಬಯ್ಯಾ” ಯಂದು ಬರಮಾಡಿಕೊಂಡರು.
ಕಾಯ್ಲಾದ ದೇಣಿಗೆ ನೀಡಿದರು. ಬೊಬ್ಬಿಲಿ ನಾಗಿರೆಡ್ಡಿಗೆ ಯೀ ಯಿಷಯ ತಿಳಿದು
ರೊಕ್ಕಯಿದ್ದ ಸಂಚಿಯನ್ನು ತನ್ನ ಸಹಚರನ ಮೂಲಕ ಗುಟ್ಟಾಗಿ ಕಳುವಿದನೆಂದ
ಮ್ಯಾಲ..
"ಅತ್ತ ಮುದ್ದನಗಿರಿ ಗ್ರಾಮದ ತೇರುಬೀದಿಯ ಬಲಮಗ್ಗುಲಿದ್ದ ಮನೆಯಲ್ಲಿ
ರಿಂದಮ್ಮ ತನ್ನ ಗಂಡನ ಕೊರಳಪಟ್ಟಿಯನ್ನು ಹಿಡಿದು ಯಿಂಥ ದ್ರೋಹ
ಬಗೆವಷ್ಟರಮಟ್ಟಿಗೆ ನೀಚರಾಗಿದ್ದೀರಲ್ಲ.. ಯೇದಶಾಸ್ತ್ರ ನ್ಯಾಯಶಾಸ್ತ್ರಪಾರಂಗತರೆಂಬ
ವಂದೇ ವಂದು ಕಾರಣಕ್ಕಲ್ಲವೇನು ನಾನು ನಿಮ್ಮನ್ನು ಮದುವೆಯಾದದ್ದು...
ಯೀಗ ನೋಡಿದರ ನೀವು... ಛೀ.. ಛೀ...” ಯಂದು ದುಕ್ಕುಮಾಡಿದಳು.
ಮನಸ್ಸಿನೊಳಗಿನ ದ್ರೋಹ ಚಿಂತನೆ ತನ್ನ ಗಂಡನ ಮುಖದ ಮ್ಯಾಲ ಯರಡು
ಮೂರು ದಿನಗಳ ಲಾಗಾಯ್ತು ಲಾಸ್ಯ ಮಾಡುತಲಿದ್ದುದನ್ನು ತಾನು
ಗಮನಿಸಿರದೆಯಿರಲಿಲ್ಲ.. ಶನಿ ಬುಧ ಸ್ಥಾನ ಸೇರಿಕೊಂಡಿದ್ದಾನೆ ಕಣೇ,
ತಿಂಗಳೊಳಗೆ ನೀನು ಜಾಗೀರುದಾರನೋರ್ವನ ಹೆಂಡತಿಯಾಗಿರುತ್ತೀ ಯಂದು
ಗಂಡ ಯರಡನೇ ಸಲ ನುಡಿದಾಗಲೇ ತನಗೆ ಅನುಮಾನ ಬಾರದೆಯಿರಲಿಲ್ಲ.
ಶನಿಯನ್ನು ಸಂಪ್ರೀತಗೊಳಿಸುವ ಸಲುವಾಗಿ ತಾನು ಅಲ್ಲಿಗೆ ಹೋಗಬೇಕಿದೆ,
ಯಿಲ್ಲಿಗೆ ಹೋಗಬೇಕಿದೆ.. ವುಪಾಸನೆ ಮಾಡಬೇಕಿದೆ ಯಂದು ನೆಪ ಹೇಳಿ
ಗಂಟೆಗಳ ತರಬಡಿ ಹೋಗುತಲಿದ್ದನು. ಶನಿ ಅಂದರೆ ಯಾರು? ವುಪಾಸನೆ
ಅಂದರೇನು? ಯಂಬುದನ್ನು ವಯ್ದಿಕನ ಪತ್ನಿಯಾದವಳಿಗೆ ಗೊತ್ತಿರಲಿಕ್ಕಿಲ್ಲವಾ.
ಹಿರಿಮಗ ಯಿಷ್ಣುವಿನ ಮೂಲಕ ಗಂಡನ ಚಲನವಲನಗಳ ಮ್ಯಾಲ
ನಿಗಾಯಿರಿಸಿದಳು. ಪರಂಗಿ ಮನುಷ್ಯರೊಂದಿಗೆ ತನ್ನ ಗಂಡ ಗುಟ್ಟಾದ ವಡನಾಟ
ಯಿಟ್ಟುಕೊಂಡಿರುವನು ಯಂಬ ಸಂಗತಿ ರುಜುವಾಯಿತು. ಆದರೂ ತಾನು
ತಾಳ್ಮೆ ಕಳೆದುಕೊಳ್ಳಲಿಲ್ಲ. ಬೇಯಿನಾಳು ಗೋರಿಂಟಲ ಸ್ರೇಷಿ«ಯವರ ಮನೇಲಿ