ಪುಟ:ಅರಮನೆ.pdf/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೩೦

ಅರಮನೆ


ಯಾದಾರ ಸರಕಾರೀ ಯಿರುದ್ಧದ ಸಂಚಿಚನಲ್ಲಿ ಭಾಗಿಯಾದರೆ!
ಲಂಚರುಷುವತ್ತು ಪಡೆದು ವಳ ಸೂಕ್ಷ್ಮಗಳನ್ನು ಮಾರಾಟ ಮಾಡಿದರೆ! ಯಿಂಥ
ಹಲವು ರೀತಿಲ್ಲಿ ಸಂದೇಹಪಡಬೌದಾದ ಸಾಹೇಬ ಖುದ್ದ ತಾನೇ ವಂದೇ
ವಂದು ರಜೆ ಪಡೆಯದೆ ಕುಂಪಣಿ ಸರಕಾರದ ಯೇಳಿಗೆಗಾಗಿ
ದುಡಿಯುತ್ತಿರುವನೆಂಬ ವದಂತಿಯೂ ವುಂಟು, ಅಂಥಾದ್ದರಲ್ಲಿ ತಾನು..!!
ಆದರೂ ಪರಶುರಾಮ ಸೂಕ್ತವನ್ನು ನೆನೆಯುತ್ತಲೇ ರಾಯನು ಯಂಟು
ಪುಟ ಗಾತ್ರದ ರಜೆ ಚೀಟಿಯನ್ನು ಬರೆದುಕೊಂಡು ಮಾಲಕಿನ್ನಳ ದ್ವಾರಾ
ಸಿಪಾರಸು ಮಾಡಿಸಬೇಕೆಂಬ ನಿರ್ಣಯದಿಂದ ನಿವಾಸದ ಬಂಗಲೆಗೆ ಹೋದನು.
ತಯ್ಲವರ್ಣಗಳ ಮಿಶ್ರಣದ ಕ್ರಿಯೆಯೊಳಗೆ ತಲ್ಲೀನಳಾಗಿದ್ದ ಆಕೆ ಮುಖ
ತಿರುಗಿಸಿದೊಡನೆ ಚೆನ್ನಾಸಾನಿ ಯಂದು ವುದ್ಗಾರವನ್ನು ಯಿನ್ನೇನು ತೆಗೆಯಬೇಕು,
ಅಷ್ಟರಲ್ಲಿ ನಿಯಂತ್ರಿಸಿಕೊಂಡನು. ಯೀ ಸಜ್ಜನನ ಗಂಟಲಲ್ಲಿ ಯೇನುಂಟು
ಯಂದು ಮಾಹಿಸಿ ಖಚಿತಪಡಿಸಿ ಕೊಂಡವಳಾದ ತಾನು "ರಾಯರೇ ನಿಮ್ಮ
ಗಂಟಲಲ್ಲಿರುವಾಕೆಯನ್ನು ನಾನು ನೋಡಬೇಕೆಂದಿರುವೆನಲ್ಲಾ” ಯಂದು
ಅಭಿಲಾಷೆ ಯಕ್ತಪಡಿಸಿದೊಡನೆ ಜಂಘಾಬಲ ವುಡುಗಿ ಹೋಗಿ “ನಿಮ್ಮಂಥವರು
ಆಕೆಯನ್ನು ಕಾಣುವುದು ಸೂಕ್ತವಲ್ಲವೆಂದು ನನ್ನ ಭಾವನೆ” ಯಂದನು.. ತಕ್ಕಮಟ್ಟಿಗೆ
ಅವರೀರ್ವರ ನಡುವೆ ಯಿಂಗಲೀಸು ಭಾಷೆಯೊಳಗೆ ಮಾತುಕತೆ ನಡೆಯಲಕ
ಹತ್ತಿತ್ತು... ಇತ್ಯಗಾತಿಯನ್ನು ನೋಡಿದ ನಂತರವೇ ತಾನು ಚೀಟಿಯನ್ನು
ಪರಿಸೀಲನೆಗೆ ಮುತ್ತಿಕೊಳ್ಳುವುದೆಂದು ಖಂಡತುಂಡವಾಗಿ ಹೇಳಿದಳು..
ಮಾನಸಿಕವಾಗಿ ತಾನು ಆಕೆಯನ್ನು... ತಾನೇ ಖುದ್ದು ನಿರೂಪ ವಯ್ಯುವುದೋ
ಅಥವಾ ಸಿಪಾಯಿಗಳ ಮೂಲಕ. ತಾನೇ ಭವುತಿಕವಾಗಿ ಹೋಗುವುದೇ
ಯಿಹಿತವು.. ಯಾಕೆಂದರೆ ತನ್ನ ಅಂತಿಮ ಆಸೆಯೂ ಅದೇ ಆಗಿರುವುದು..
ಹೋದಲ್ಲಿ ನೋಟ ಮಾತ್ರದಿಂದ ಅಪಯಿತ್ರಾಗುವುದು ಖಚಿತ. ಹೋಗದಿದ್ದಲ್ಲಿ...
ಅದೊಂದು ಯಿಧದ ಆತುಮ ವಂಚನೆಯು.. ಯೇನು ಮಾಡುವುದು ತಾನು?
“ದಿವಸಕ್ಕೊಂದು ಸಲವಾದರೂ ಆಗಮಿಸಿ ಮನೆಯನ್ನು ಪಯಿತ್ರಮಾಡಿ ಸ್ವಾಮಿ..”
ತಾಯಕ್ಕ ಯರಡು ಮೂರು ಸಲ ಹೇಳಿದ್ದ ಮಾತುಗಳು ನೆನಪಾಗುತ
ಅದೊಂದು ನಮೂನಿ ಧರುಮ ಸಂಕಟಕ್ಕೆ ಸಿಲುಕಿಸಿರುವವು ತನ್ನನ್ನು. ಮೋಂ
ಭೂರ್ಬವಸ್ವಃ.. ಸಾಧಿಸಿದ ಅರಗಳಿಗೆ ಯವಧಾನದೊಳಗೆ ಸಿಪಾಯಿ ಮೂಲಕ
ತಾಯಕ್ಕನಲ್ಲಿಗೆ ನಿರೂಪ ಕಳಿಸಿದನು.. ಸಿಪಾಯಿ ಕರೆಗೆ ಹೂಂಗುಟ್ಟು ಆಕೆ