ಪುಟ:ಅರಮನೆ.pdf/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅರಮನೆ

೨೩೧


ಬರುವುದು ತನಗಿಷ್ಟಯಿಲ್ಲದಿದ್ದರೂ ಸಹ.. ಹರಿಯೇ ಆಕೆ ಸಿಪಾಯಿಯ ಹಿಂದೆ
ಬಾರದಿರಲಿ.. ವುತ್ಕಂಠಭರಿತನಾಗಿರಲು ಚಣವೊಂದು ಮನುವಂತರ ವಾಯಿತು..
ಅಂತೂ ಸಿಪಾಯಿ ಬರಿಗಯ್ಲಿ ವಾಪಾಸು ಬಂದ, ದೇವರು ದೊಡ್ಡವನು.
ಸ್ವಾಮಿ.. ನಿನ್ನನ್ನೇ ಬರಲಕ ಹೇಳಿದಳು. ಬಹುವಚನದ ಬಳಕೆ ಗೊತ್ತಿಲ್ಲದ
ಸಿಪಾಯಿಗಳಿಂದ ಕುಂಪಣಿ ಸರಕಾರಕ್ಕೆ ಗಂಡಾಂತರ ತಪ್ಪಿದ್ದಲ್ಲ. ಸಿಪಾಯಿಗಳಿಗೆ
ಸವುಜನ್ಯ ಕಲಿಸುವ ಯೋಜನೆಯೊಂದನ್ನು ತಾನು ರೂಪಿಸಬೇಕಿದೆ. ವುತ್ತಮ
ವಮುಸೋದ್ಭವನಾದ ರಾಯನು ವುತ್ತಮ ವುಡುಪು ಧರಿಸಿದನು. ರುದ್ಯಾಪ್ಯದ
ಲಕ್ಷಣ ಯಂದು ಬೆಳ್ಳಿ ಖಚಿತ ಮರುಗೋಲನ್ನು ಕಯ್ಗೆ ತೆಗೆದುಕೊಳ್ಳಲಿಲ್ಲ.
ಪೂರ್ವಜರಿಂದ ಬಳುವಳಿಯಾಗಿ ಬಂದಿದ್ದಂತ ಪಂಚಲೋಹ ದರ್ಪಣದೊಳಗ
ತನ್ನನ್ನು ತಾನು ನೋಡಿಕೊಂಡನು. ತನ್ನ ಪ್ರತಿಬಿಂಬ ಯಿಟಪುರುಷನದ್ದೋ...
ಗವುರವಾನ್ವಿತ ಸಜ್ಜನನದ್ದೋ.. ಯಿರಲಿ ಯೇನಾದರೊಂದು!
ಗತ್ತಿನಿಂದ ಬೀದಿಯಲ್ಲಿ ಕಾಣಿಸಿಕೊಂಡ ರಾಯನತ್ತ ಕೆಲವು ಹಯ್ಕಳು
ಜಠರಾಗ್ನಿಯಿಂದ ದಹಿಸುತ್ತ ನೋಡಿದರು. ಯೀತನ ಗುರಿ
ತಾಯಿಯಾಗಿರಬೌದಾ? ಮಗಳಾಗಿರಬೌದಾ? ವಾರ ದಿನಮಾನದಿಂದ ಗರಿಷ«
ಮಟ್ಟದಲ್ಲಿ ಅಪಪ್ರಚಾರವನ್ನು ಪ್ರಗ್ನಾಪೂರುವಕವಾಗಿ ಮಾಡುತ್ತ ಬಂದಿದ್ದ
ಹಯ್ಕಳು, ರಾಯನಿಗೆ ಜೀವನದಲ್ಲಿ ಜುಗುಪ್ಸೆ ಹುಟ್ಟುವಂತೆ ಮಾಡಿ ಸದರಿ
ಪಟ್ಟಣದಿಂದ ತೊಲಗಿಸಬೇಕೆಂದು ತೆರೆಮರೆಯಲ್ಲಿ ಯುದ್ಧೋಪಾದಿಯಲ್ಲಿ
ತಂತ್ರಗಳನ್ನು ರೂಪಿಸಿದ್ದ ಹಯ್ಕಳು, ರಾಯನಿಗೆ ತಾಯಕ್ಕನೊಂದಿಗೆ
ದಹಿಕವಾಗಿಯು, ಚಿನ್ನಾಸಾನಿಂರೊಂದಿಗೆ ಮಾನಸಿಕವಾಗಿಯೂ
ಸಂಬಂಧವುಂಟೆಂದು ಚಾಡಿ ಟೊಂಗು ಟುಸುಕುಗಳನ್ನು ಪ್ರತಿಫಲಾಪೇಕ್ಷೆಯಿಲ್ಲದೆ
ಹಬ್ಬಿಸಿದ್ದ ಹಯ್ಕಳು, ರಾಯ ಕ್ರಮಿಸಲಿದ್ದ ವಂದೆರಡು ಫರಲಾಂಗು ವುದ್ದದ
ಹಾದಿಯಲ್ಲಲ್ಲಿ ಅನೇಕ ಕಂಟಕಗಳನ್ನು ಮಿಂಚಿನಂತೆ ಸ್ರುಷ್ಟಿಸಿದ್ದ ಹಯ್ಕಳು..
'ವೇದಕ್ಕೂ ಬೇಕೆ ಯಭಿಚಾರ' ಯಂಬ ಪದಪುಂಜಗಳನ್ನು ಅಲ್ಲಲ್ಲಿ ಗೋಡೆಗಳ
ಮ್ಯಾಲ ಬರೆದಿದ್ದ ಹಯ್ಕಳು.. ಹ್ಹಾ... ಹಾಯ್ ಹಯ್ಕಳೇ.. ಹ್ಹೊ.. ಹೋಯ್
ಹಯ್ಕಳೇ..
ತನ್ನ ಗಮನ ಯಾವ ಅರ್ಥ, ಅನಾರಕ್ಕೆ ಭಾಜನವಾಗುವುದೋ... ವಳ್ಳೊಳಗೆ
ತಲೆಯಿಟ್ಟು ಯೇಸೋ ದಿವಸಗಳುರುಳಿರುವವು, ಯಿನ್ನು ವಣಕೆಗೆ
ಹೆದರಿದರಾದೀತೇ? ರಾಯನ ಯಿಶೇಷ ಪಾದರಕ್ಷೆಗಳು ಮಾಡಿದ ಯಿಶೇಷ