ಪುಟ:ಅರಮನೆ.pdf/೨೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅರಮನೆ

೨೩೫


ಅರ್ಥಮಾಡಿಕೊಂಡು ಪಟ್ಟಣದ ನಾಲ್ದೆಸೆಗೆ ಬಿತ್ತಿದ್ದ ತಡ ಆಗಲಿಲ್ಲ. ಅರಗಳಿಗೆ
ವಳಗ ಸಮಸ್ತ ಪಟ್ಟಣವು ಹಂಪಜ್ಜ ಯಂಬ ಪದ ಪುಂಜಕ್ಕೆ ಹೊಸ ಯಾಖ್ಯಾನ
ಬರೆಯಲಕ ತೊಡಗಿದ ಪರಿಣಾಮವಾಗಿ ಸಡಗರ, ಕುತೂಹಲ,
ರೋಮಾ೦ಚನಗಳೇ ಮೊದಲಾದ ಸಂಯೇದನೆಗಳು
ಅಂಗಲಂಗುಲಕ್ಕೊಂದೊಂದರಂತೆ ಹುಟ್ಟಿಕೊಂಡು ಬಿಟ್ಟವು.. ವಬ್ಬರಿಬ್ಬರಾಗಿ,
ಯಿಬ್ಬರು ನಾಕು ಮಂದಿಯಾಗಿ.. ನಾಕು ಮಂದಿ ಹದಿನಾರು ಮಂದಿಯಾಗಿ
ಮೂಡಲ ಕಡೇಲಕಿದ್ದ ಡೊಳ್ಳಯ್ಯನಗಸೇ ಬಾಗಿಲ ಕಡೆ ಹರಿದು
ಜಮಾವಣೆಗೊಳ್ಳತೊಡಗಿದರು. ಆ ಹೊತ್ತಿಗಾಗಲೇ ಹಂಪಜ್ಜನ ಬಗ್ಗೆ
ಹುಟ್ಟಿಕೊಂಡಿದ್ದ ನೂರಾರು ಕಥೆಗಳ ಸ್ರವಣ ಕರುಮವೇ ಅದಕ್ಕೆ ಕಾರಣ...
ಪಟ್ಟಣದಾದ್ಯಂತ ಸಿವನ್ನಾಮ ಪಾರೋತಿ ಪತಿ ಹರಹರ ಮಾದೇವ.... ಮುಗುಲು
ಮುಟ್ಟಿಬಿಟ್ಟಿತು. ಹತ್ತು ಕಡೇಲಿಂದ ಹತ್ತು ನಮೂನಿ ವಾದ್ಯಗಳ ನಾದದ ನೆರೆ
ಬಂತು. ಯೀ ನಸ್ಸೋರ ಪರಪಂಚದೊಳಗ ತಮ್ಮೋಟು ವಯಸ್ಸಾಗಿರೋರು
ಯಿನ್ನೊಬ್ಬರಿರಲಿಕ್ಕಿಲ್ಲ ಯಂದು ಬೀಗುತಲಿದ್ದ ಬಯ್ಯವ್ವ... ಬಯಲವ್ವ,
ತೊಂಬಲವ್ವ, ಕಾಳಗಯ್ಯ, ನಗಾರಯ್ಯರೇ ಮೊದಲಾದ ನೂರಾರು ಮಂದಿ
ಮುಪ್ಪಾನು ಮುದೇರು ನಾಮುಂದು, ತಾಮುಂದು ಅಂತ ಪಯಿಪೋಟಿಗೆ
ಬಿದ್ದು ನಡಕೋತ ನಡಕೋತ ಬಂದು ಅಗಸೆ ಬಾಕಲ ಮುಂದಿದ್ದ ಬಯಲು
ತುಂಬೆಲ್ಲ ಅಲಂಕ್ರುತರಾದರು, ಸಿಪ್ಪಗಿರಿಯ ಮ್ಯಾಲ ನಡೆದ ನಿರ್ಣಾಯಕ ಕಾಳಗದಲ್ಲಿ
ಜಯ ಸಾಧಿಸಿದ ಸವಿ ನೆನಪಿಗಾಗಿ ಹಿರೇ ಮುದೆಪ್ಪನಾಯಕನು ಯಿಜಯೋತ್ಸವ
ಆಚರಿಸಿದ್ದಂಥ ಬಯಲು ಅದಾಗಿತ್ತು, ಡೊಳ್ಳಯ್ಯನೆಂಬ ಪರಾಕ್ರಮಿ ಸವುರ್ಯ
ಮೆರೆದು ಬಲಿಗೊಂಡಿದ್ದಂಥ ಬಯಲು ಅದಾಗಿತ್ತು, ನೂರಾರು ವರುಷಗಳ
ಪೂರುವದಲ್ಲಿ ಸಾಯಿರಾರು ಮಂದಿ ರಣ ಕೇಕೆ ಹಾಕುತ ಕುಣಿದು
ಕುಪ್ಪಳಿಸಿದ್ದಂಥ ಬಯಲು ಅದಾಗಿತ್ತು, ಆ ಬಯಲು ತುಂಬೆಲ್ಲ ಸಾಯಿರಾರು
ಮಂದಿ ತಮ್ಮ ತಮ್ಮ ಕಣ್ಣೂಳಗ ಯಣ್ಣೆ ಬಿಟುಕೊಂಡು ಯೀಗ ಬರುತಾನ..
ಆಗ ಬರುತಾನ ಯಂದು ಕಾಯಲಕ ಹತ್ಯಾರ ಸಿವನೇ.. ಸೂರಪರಮಾತುಮ
ಬಿಸಿಲ ಸುಗ್ಗಿಯನ್ನು ಘನುವಾಗಿಯೇ ನಡೆಸಿದ್ದ ಮಟ ಮಟ ಮದ್ಯಾಣದೊಳಗ.
ಕಾವಳ ಕವಿದರ ಯಿರಲಂತ ನೂರಾರು ದೀವಟಿಗೆಗಳ ಹಿಡಕೊಂಡು ಸಜ್ಜಾಗಿ
ನಿಂತವರೆ ಸಿವನೇ..
ಚಿಕ್ಕುಜ್ಜುಣಿಯ ಸಿವರಾಮ ಸಾಸ್ತಿರಿಯು “ನೀನು ವಯಕುಂಠ