ಪುಟ:ಅರಮನೆ.pdf/೨೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೩೬

ಅರಮನೆ

ವಾಸಿಯಾಗುವ ಕಾಲ ದೂರಯಿಲ್ಲ ತಾಯೀ. ಮೂರು ತಿಂಗಳೊಳಗ ಕುಜ
ಸಾಂತಿ ಮಾಡಿಸಿದಲ್ಲಿ ಅಮ್ಮಮ್ಮಾ ಅಂದರ ಆರು ತಿಂಗಳು ಬದುಕಿರುತ್ತೀ..
ಕಾಳಹಸ್ತೀಸ್ವರಂಗೆ ಪಂಚಾಂಬ್ರುತಾಭಿಶೇಕ ಮಾಡಿಸಿದಲ್ಲಿ ಅಮ್ಮಾಮ್ಮಾ ಅಂದರ
ವಂಭತ್ತು ತಿಂಗಳು ಬದುಕಿರುತ್ತೀ.. ನವಗ್ರಹ ಸಾಂತಿ ಮಾಡಿಸಿದಲ್ಲಿ ಅಮ್ಮಾಮ್ಮಾ
ಅಂದರ ವರುಷೊಪ್ಪತ್ತು ಬದುಕಿರುತ್ತೀ. ಸಾವುರದಾವಂದು ಬ್ರಾಮ್ಮಣರಿಗೆ
ಸೊರ್ಣದಾನ ಮಾಡಿಸಿದಲ್ಲಿ ಅಮ್ಮಮ್ಮಾ ಅಂದರ ಅಯ್ದು ವರುಷಗಳ ಕಾಲ
ಬದುಕಿರುತ್ತೀ... ಯಾವುದನಾಯ್ಕೆ ಮಾಡ್ಕೊತೀಯಾ?” ಯಂದು ಮುಂಜಾನೆ
ಹೇಳಿದ್ದ ನಿಗಿನಿಗಿ ವುರಿಯುತಲಿದ್ದ ಮಾತುಗಳನ್ನು ಯದೆಯೊಳಗಿಟ್ಟುಕೊಂಡೇ
ಅಲ್ಲಿಗೆ ಬಂದು ಬಿಕೋ ಅನುತ ನಿಂತಿದ್ದ ರಾಜಮಾತೆ ಭಯ್ರಮಾಂಬೆಯ
ಕಡೇಕ ಯಾರೊಬ್ಬರೂ ನೋಡಿಯೂ ನೋಡದವರಂಗ ಯಿದ್ದರು ಸಿವನೇ...
ಮಂದಿ ತಮಗೆ ತಾವs ಬೇಯುತ್ತ, ಬೆಮರು ಚೆಲ್ಲುತ್ತ ನಿತ್ರಾಣವಾಗುತಲಿದ್ದರು
ಸಿವನೇ... ಹಂಪಜ್ಜನ ಬರುವಿಕೆಗಾಗಿ ಯದುರು ನೋಡೀ ನೋಡೀ ಮಂದಿಯ
ರಾಸಿರಾಸಿ ಕಣ್ಣುಗಳಿಗೆ ಬ್ಯಾನೆ ತಗುಲಿತು ಸಿವನೇ... ಕುಂತವರ ಕುಂಡಿ ಮರಗಟ್ಟಿತು
ಸಿವನೇ.. ನಿಂತವರ ಕಾಲು ಜಡ್ಡುಗಟ್ಟಿತು ಸಿವನೇ... ಆದರೂ ಸಜೀವ ಸಮಾಧಿ
ಆಗಲಿರುವವರಂತೆ ನಿಷ«ಯಿಂದ ಕಾಯುತಲಿದ್ದರು ಸಿವನೇ...
ಹೊತ್ತಿಗೆ ಕರುಣೆ ಬಂದು ನೆತ್ತಿಯಿಂದ ಪಡುವಣದ ಕಡೆ ವಾಲಿತು.
ಅಗೋ ಆಟು ದೂರದಲ್ಲಿ ಕೆಂಧೂಳು ಕಾಣಿಸಿಕೊಂಡಿತು.. ಕಾಣಿಸಿಕೊಂಡ
ಕೆಂಧೂಳೊಳಗಿಂದ ಖುರಪುಟಗಳ ಸದ್ದು ಕೇಳಿ ಬಂತು. ಅದರೊಟ್ಟಿಗೆ
ಸಾರೋಟು ಕೆಂಧೂಳೊಳಗಿಂದ ಅನಾವರಣವಾಯಿತು.. ಅನಾವರಣಗೊಂಡಂಥ
ಸಾರೋಟಿನ ತುದಿ ಮ್ಯಾಲ ಮುತ್ತಯ್ದೆತನದ ಸಂಕೇತವಾದ ಹಳದಿ
ಕುಂಕುಮವರಣದ ದೊಜ ಹಾರಾಡುತ್ತಿರುವುದು ಕಾಣ ಬಂತು.. ವಾದ್ಯಗಳ
ನಾದ ಪ್ರವಾಹ ಹರಿಯಲಾರಂಭಿಸಿದೊಡನೆ, ಜನ ಸಾಗರವು ಸಿವನ್ನಾಮ
ಪಾರೋತೀ ಯಂದು ಜಯಘೋಷ ಮಾಡಲಾರಂಭಿಸಿದೊಡನೆ, ವುಧೋ
ವುಧೋ ಯಂಬ ನಿನಾದ ಮಗುಲಿಗೆ ಮುಟ್ಟಿದೊಡನೆ, ಅಳ್ಳಾಡುತ
ಅಳ್ಳಾಡುತ ಬಂದು ನಿಂತ ಸಾರೋಟೊಳಗಿಂದ... ಯಂಬಲ್ಲಿಗೆ ಸಿವಸಂಕರ ಮಾದೇವಾ...
ಬೋಸಯ್ಯ ತನ್ನ ಸಂಗಡಿಗರು ವಬ್ಬೊಬ್ಬರಾಗಿ ಯಿಳದದ್ದಾತು.. ನಾಕು
ಗಾಲಿಗಳ ಕೀಲು ಸಂದುಗಳೊಳಗಿಂದ ಕೀರಕು ಕೀರುಕ ಯಂಬ ವುಧೋ
ವುಧೋಕ್ಕ ಸಮನಾದ ನಾದವು ಹೊರ ಹೊಂಟು ಬಯಲೊಳಗ