ಪುಟ:ಅರಮನೆ.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

xxvii

ಸರಹದ್ದಿನದು. ಭಾಷೆ ಮತ್ತದರ ಎಲ್ಲಾ ಆಯಾಮಗಳನ್ನು ಯಥಾರೀತಿ ಬಳಸಿರುವೆ.
ವಾಕ್ಯದೊಂದಿಗೆ ಸಹಜವಾಗಿ ಅರ್ಥವಾಗಲಿ ಎಂಬ ಕಾರಣಕ್ಕೆ ತೆಲುಗು ಪದಗಳಿಗೆ
ಅರ್ಥ ಕೊಡಲು ಇಚ್ಛಿಸಿಲ್ಲ. ನಂಬಿಕೆ, ಸಂಪ್ರದಾಯಗಳು ಈ ಭಾಗದವು. ಇತಿಹಾಸ
ಶೇಕಡಾ ಅರವತ್ತರಷ್ಟು.. ಕಲ್ಪನೆ ಶೇಕಡಾ ನಲವತ್ತರಷ್ಟುಂಟು. ಕಾದಂಬರಿಯ
ಆರಂಭಿಕ ಕೆಲ ಪುಟಗಳನ್ನು ತಾಳ್ಮೆಯಿಂದ, ಗಟ್ಟಿಯಾಗಿ ಓದಿಕೊಂಡಲ್ಲಿ ಕೊನೆ
ಪುಟವನ್ನು ತ್ರಾಸಿಲ್ಲದೆ ತಲುಪಬಹುದು. ಓದಿದ ನಂತರ ಈ ಕಾದಂಬರಿ ನಿಮ್ಮೊಳಗೆ
ಬೆಳೆದಲ್ಲಿ ನಾನು ಬರೆದದಕ್ಕೂ ಸಾರ್ಥಕ. ದಯವಿಟ್ಟು ಓದುವಿರಿ ತಾನೆ....