ಪುಟ:ಅರಮನೆ.pdf/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೪೦

ಅರಮನೆ

ತಮ್ಮನ್ನು ತಾವು ಹಳಿದುಕೊಳುತ ಯಾವೊಬ್ಬ ಅಧಿಕಾರಿಯೂ ಸಮವಸ್ತರ
ಕಳಚಲಿಲ್ಲ.. ಸೆಕೆ ಸೆಕೆ ಕುಚ್ಚಿ ಅಂಗಾಲುಗಳಲ್ಲಿ ವುರಿ ಕಾಣಿಸಿಕೊಂಡಿದ್ದರೂ
ದಡೇವು ತೂಕದ ಬೂಟುಗಳನ್ನು ವುದುರಿಸಲಿಲ್ಲ.. ತಾವೇ ತಲಾ ವಂದೊಂದು
ದಿಕ್ಕನ್ನು ಹಂಚಿಕೊಂಡರು, ಆಯಾ ಮಾರುಗಳಲ್ಲಿದ್ದ ಸಾಂತಿಪಾಲನಾ ಪಡೆಗಳನ್ನು
ಬಳ್ಳಾರಿ ರೆಜಿಮೆಂಟಿಗೆ ವಾಪಾಸು ಕರೆಯಿಸಿಕೊಂಡರು.. ನಿಮ್ನ ನಿಮ್ಮ ಕಯ್ನ
ಸಡುಲ ಬಿಟ್ಟು ಬಡಬಗ್ಗರಿಗೆ ದಾನ ಮಾಡಬೇಕರಪ್ಪಾ ಯಂದು ಆಯಾ
ಮಾರುಗಳ ಜಮೀಂದಾರ, ಗವುಡ, ಜಾಗೀರುದಾರ, ಪಟುವಾರಿಗಳಿಗೆ ಕಿವಿಮಾತ
ಹೇಳಿದರು. ತಮ್ಮ ತಮ್ಮ ಹೆಂಡಂದಿರ ಕೊರಳ ಮಾಂಗಲ್ಯ ಭಾಗ್ಯ ವುಳಿಸುವ
ಸಲುವಾಗಿ ದವುಳೇರೆಲ್ಲ ತಮ ತಮ್ಮ ಹಗೇವುಗಳನ್ನು ಹಾರು ಹೊಡೆದು
ಕಾಳುಕಡಿ ಹಂಚಲಾರಂಭಿಸಿದರು.. ಸುಸ್ತಿದಾರರ ಬಡ್ಡಿ ಮಾಘು
ಮಾಡಿದವರೆಷ್ಟೋ? ಸಾಲಪತ್ರ, ಕ್ರಯಪತ್ರಗಳನ್ನು ಯರಡೆರಡು ಭಾಗವಾಗಿ
ಸೀಳಿ ಸಾಲಗಾರರಿಗೆ ವಾಪಾಸು ಮಾಡಿದವರೆಷ್ಟೋ..? ಪರನಾರಿ
ಸೋದರರಾದವರೆಷ್ಟೋ? ಸತ್ಯ ಹರಿಶ್ಚಂದ್ರನ ಪದವಿಗೇರಿದವರೆಷ್ಟೋ?..
ಯಿದೇನಪಾ ಯಿದು!... ಸಿವನ ಮಾಯೆಯಿಂದ ಹುಲಿ ಹುಲ್ಲು ತಿನ್ನಲುಬೌದು,
ತೋಳ ಕುರಿಯೊಂದಿಗೆ ಆಟ ಆಡಬೌದು, ಮೊಲ ನಾಯಿಯನ್ನಟ್ಟಿಸಿಕೊಂಡು
ಮೋಡಬೌದು.. ಆದರ ತಮ ಪ್ರಾಂತದ ಭೂಸ್ವಾಮಿಗಳು ಅಸಂಗ್ರಹ ಬುದ್ದಿಯನ್ನು
ಪ್ರಕಟಿಸುತ್ತಿರುವುದೆಂದರೇನು? ಯೇನೋ ಯಿದರಾಗ ಸಂಚು ಅಡಗಿದಂಗಯ್ತಿ..
ಮೋಸ ಅಡಗಿದಂಗಯ್ತೆ.. ಯಂದು ಅನುಮಾನಪಟಗಂತು ಮಂದಿ..
“ವದ್ದುದೊರಾ.. ವದ್ದುದೊರ” ಅನಕಂತಲೆ ಕೊಟ್ಟದ್ದನ ಹಿಸಗಂತು ಮಂದಿ..
ಕಡುಪು ಕೇಳಬೇಕಲ್ಲಾ.. ಬ್ರತುಕು ಕೇಳಬೇಕಲ್ಲ.. ಅದಕ್ಕೆ ಆದರೂ ದೊರಗಾರಿಕಿ
ಜಯ್ ಅನಲಿಲ್ಲ.. ಅಯ್ಯೋ ನಮಕರುವೇ ಅಂತ ದೂರಲು ಬ್ಯಾಸರ
ಮಾಡಿಕೊಂಡರು.. ಕುಂಪಣಿ ಸರಕಾರಕ್ಕೆ ಜಯ್ ಅನಲಿಲ್ಲ. ಸರಕಾರದ ಮಂದಿ
ಬ್ಯಾಸರ ಮಾಡಕಂತು..
ವರ್ತಮಾನ ವಿನಿ ಬೊಬ್ಬಲಿ ನಾಗಿರೆಡ್ಡಿ ಗೋದಾರಿ ನದಿಗೆ ನೆರೆ ಬಂದಂತೆ
ವುಬ್ಬಿದನು.. ತನ್ನ ಪ್ರಾಂತದ ದೊರೆಗಳಿಗೆ ಸದ್ಭುದ್ದಿ ಅಂತೂ ಬಂದಯ್ತಲ್ಲಾ...ತನ್ನ
ಪ್ರಾಂತದ ಪ್ರಜೆಗಳು ಅಂತೂ ಸುಖವಾಗಿದ್ದಾರಲ್ಲಾ.. ಸದ್ಭುದ್ದಿ ಬಂದಿರುವ
ದೊರೆಗಳನ್ನು ತಾನು ಅಭಿನಂದಿಸಬೇಕೆಂದು, ಸುಖವಾಗಿರುವ ತನ್ನ ಪ್ರಜೆಗಳನ್ನು
ಕಣ್ತುಂಬ ನೋಡಬೇಕೆಂದು.. ಯಿದಕ್ಕೆಲ್ಲ ಕಾರಣೀಭೂತನಾದ