ಪುಟ:ಅರಮನೆ.pdf/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅರಮನೆ

೨೪೧


ಸ್ರೀಭೀಮಲಿಂಗೇಶ್ವರ ಸ್ವಾಮಿಗೆ ಯೀಡುಗಾಯಿ, ಜೋಡುಗಾಯಿ ಹೊಡೆಸಿ
ವುದ್ದಂಡ ಪ್ರಣಾಮ ಸಲ್ಲಿಸಬೇಕೆಂದು ನಿಶ್ಚಯಿಸಿದ ನಾಗಿರೆಡ್ಡಿಯು ಹಗಲು
ಹೊತ್ತಲ್ಲಿ ವಂದೊಂದು ಮಾರುಗಳಲ್ಲಿ ತಂಗಾಳಿಯಂತೆ ಸುಳಿದಾಡುತ
ಜಮೀಂದಾರರ ಮನೆಗೆ ಹೋಗಿ ಯಿದೇ ಬುದ್ದೀನ ಮೊದಲೇ ತೋರಿಸಿದ್ದಲ್ಲಿ
ತಾನ್ಯಾಕ ನಿಷು«ರ ಹೊತ್ತುಕೊಳ್ಳಬೇಕಾಗಿತಪ್ಪಾ ಯಂದು ಹೇಳುತ
ಅಭಿನಂದಿಸಲಾರಂಭಿಸಿದನು. ಬಡಬಗ್ಗರ ತಲೆ, ಬೆನ್ನು ನೇವರಿಸಲಾರಂಭಿಸಿದನು.
ಗಡೇಕಲ್ಲಿಗೆ ಮುದ್ದಾಂ ಹೋಗಿ ತನ್ನ ಯಿಷ್ಟದಯವಕ್ಕೆ ಹರಕೆ ಸಲ್ಲಿಸಿ ಗಳಗಳಾಂತ
ಆನಂದಬಾಷ್ಪ ಸುರಿಸಿ ಅಭಿಸೇಕ ಮಾಡಿಸಿದನೆಂಬಲ್ಲಿಗೆ ಸಿವಸಂಕರ
ಮಾದೇವಾss...
ಹ್ಹಾ... ಹ್ಹಾ.. ಯಿನ್ನೇನು ನಾಗಿರೆಡ್ಡಿಯ ಸರೀರವನ್ನು ಸಡುಲ ಬಿಟ್ಟಿರುವನು..
ಯೀಗವಯ್ಯನ ಕಣ್ಣುಗಳಲ್ಲಿ ಗುಗ್ಗುಳಗಳಿಲ್ಲ.. ತುಪ್ಪದ್ದೀವಿಗೆಗಳು ಬೆಳುಗುತಾ
ಅವೆ.. ಯೀಗವಯ್ಯನು ಮನಸೊಳಗ ಭಯೋತ್ಪಾದನಾ ಮಂತ್ರಯಿಲ್ಲ.. ಮಗು
ಮಲಕ್ಕೊಂಡಿರೋ ತೊಟ್ಟುಲು ವಾಲಾಡುತಾ ಅದೆ... ಹೇಗವಯ್ಯನು.. ಸಿವ
ಸಿವಾ....
ಮಲಪನಗುಡಿ ಯಂಬ ಮೂರಲ್ಲಿದ್ದ ನಾಗಿರೆಡ್ಡಿಯನ್ನು ಹೆನ್ರಿಯೇ ಮುದ್ದಾಂ
'ದೊರೆಯೇ ಬಡವರ ಬಂಧುವೇ.. ಅನಾಥ ರಕ್ಷಕನೇ” ಯಂದು ತರ್ಜುಮೆಗಾರರ
ಸಾಯದಿಂದ ಶ್ಲಾಘನೆ ಮಾಡುತ ಕಂಡನು. ನಾಗಿರೆಡ್ಡಿ ತಾನೆಂಥ
ಕ್ರಾಂತಿಕಾರಿಯೆನಿಸಿದ್ದರೂ ಜನುಮತಹ ರೆಡ್ಡಿಯೇ. ನಾಕಾರು ಹೊಗಳಿಕೆ
ಮಾತುಗಳಿಗೆ ತಾನು ಹಿಗ್ಗದಿದ್ದಾನೆಯೇ? ಸಾಕಷ್ಟು ವುಬ್ಬಿದ್ದನ್ನು ಗಮನಿಸಿದ
ಹೆನ್ರಿಯು ಥಾಮಸು ಮನ್ರೋ ಸಾಹೇಬರು ತಮ್ಮೊಂದಿಗೆ ಸಹಭೋಜನ
ಮಾಡಬೇಕೆಂಬ ಯಿಚ್ಚೆವುಳ್ಳವರಾಗಿರುವರೆಂದೂ, ಆ ಮೂಲಕ ಕುಂಪಣಿ
ಸರಕಾರದೊಂದಿಗೆ ರಾಜಿ ಸಂಬಂಧೀ ಮಾತುಕತೆ ನಡೆಸಿ ಸಾಂತಿ ಸಂಧಾನ
ಮಾಡಿಕೊಳ್ಳಬೇಕೆಂದೂ ಅರಕೆ ಮಾಡಿಕೊಂಡನು. ಮಗ್ಗುಲಿದ್ದ ಜೀವದ ಗೆಳೆಯ
ಬಾಚಯ್ಯನು ತೊಡೆ ಸಿವುಟದಿದ್ದಲ್ಲಿ ರೆಡ್ಡಿ ಮತ್ತಷ್ಟು ವುಬ್ಬದಿರುತ್ತಿರಲಿಲ್ಲ. ರೆಡ್ಡಿಯ
ಪರವಾಗಿ ಗೆಳೆಯನೇ ತರುಮೆಗಾರನ ದ್ವಾರ ಯಿದರಾಗ ರಾಜಿ ಪ್ರಸಕ್ತಿ
ಯೇನಯ್ತೆ..? ಯಲ್ಲಾರಿಗೂ ಬುದ್ದಿ ಬಂದಯ್ತೆಂದ ಮ್ಯಾಲ ರಾಜಿ ಮಾತುಕತೆ
ಯಾಕ, ಕಲೆಟ್ಟರ ಸಾಹೇಬನೊಂದಿಗೆ ವುಣ್ಣುವುದ್ಯಾಕೆಂದು ಕಡ್ಡಿ ಮುರಿದಂತೆ
ಜವಾಬು ನೀಡಿದನು. ಆಗಿದ್ದು ರೆಡ್ಡಿಯು ಮನ್ರೋ ಸಾಹೇಬ ಕರ್ನೂಲು