ಪುಟ:ಅರಮನೆ.pdf/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಅರಮನೆ

೨೪೫

ಅಂದರೆ ಯೆಂಜಲು ಯಂದು ಅಪಾರ್ಥ ಮಾಡಿಕೊಂಡಿದ್ದುಂಟು... ಯೇಂಜಲ್
ಅಂದರ.. ದೇವತಾಸುಂದರಿಯ ಹೆಸರು ಯಂದು ಯಿವರಿಸಿದ್ದುಂಟು ಆಕೆ..
ಓಹ್.. ತಾನು ದೇವಲೋಕದ ಸುಂದರಿ..!
ಅತ್ತ ಕುದುರೆಡವು ಪಟ್ಟಣದೊಳಗ ಜನರು ಹೆದರಿ ಯದ್ದೋಡುವಂತೆ
ನಿಂತು ನಿಂತಲ್ಲೇ ಕುಂತ ಕುಂತಲ್ಲೇ ಜಲಜಲನೆ ಬೆವರುವಂತೆ, ಸಿವ ಸಂಕರ
ಮಾದೇವ ಅಂಬುವಂತ, ವುಧೋ ವುದೋ ಯಂದು ವುಲಿಯುವಂತೆ,
ಸತಮಾನ ಗಾತ್ರದ ನಿದ್ದೆಯಿಂದ ಯಿದ್ದಕ್ಕಿದ್ದಮೊಲು ಮರಳಿ ಸಡನ್ನ ಯಚ್ಚರ
ಗೊಂಡಂಥವನಾದ ಹಂಪಜ್ಜನು ಬಿರುಗಾಳಿ ನೋಡಿದೊಡನೆ ಅದು ತಂಗಾಳಿ
ರೂಪ ಧರಿಸಿ ತಾಯೇ ಗವುರಸಂದರದ ಮಾಯಗಾತಿಯ ನಿಜಸರಣೆ
ಯಂದನಕಂತ ಅವಯ್ಯ ಪಾದದ ಬುಡಕೆ ಸರಣ ಹೋತು. ಅವಯ್ಯನ ಸರೀರದ
ಲಕ್ಷಾಂತರ ಸ್ವೇದ ರಂದ್ರಗಳಿಂದ ಬುದುಬುದಕ್ಕಂತ ವುಕ್ಕಿದ ಬೆವರು ವಂದೊಂದು
ರೋಮದ ತುದಿಯಿಂದ ಯಿಳಿತಾs ಯಿಳಿತಾ ಕೆಳಕ್ಕುದುರಿ ಭೂಮಿಯನ್ನು
ಫಲವತ್ತು ಮಾಡಿದವು.. ಅವಯ್ಯನ ಸರೀರ ಯಂಬುವ ಗವುರ ಸಂದರದೊಳಗೆ
ಮಾರೆಮ್ಮ ತಾಯಿ ಕ್ರಿಯಾಸೀಲಳಾಗಿರುವ ಸಂಗತಿ ಸದರಿ ಪಟ್ಟಣದ
ಮಳ್ಳಮಂದಿಗೆ ಹೆಂಗ ಗೊತ್ತಾದೀತು? ಸಿವ ಸಿವಾ ಅಂದು ಬಿಟ್ಟಿತಲಾ.. ಯಿಧಿ
ಮಾಯೇ ಅಂದು ಬಿಟ್ಟಿತಲ್ಲಾ.. ಯವಯ್ಯನ ಸರೀರ ಅದನು ನುಡಿತಯ್ತೆ...
ಯಿದನು ನುಡಿತಯ್ತೆ ಯಂದು ತಮ ತಮ್ಮ ಮುಖಗಳೊಳಗ ತುದಿಗಾಲ
ಮೂಡಿಸಿಕೊಂಡು ಕಾಯಲಕ ಹತ್ತಿಬಿಟ್ಟಿತಲ್ಲಾ...! ಅದು ಯಿದ್ದ ಯಿದ್ದಲ್ಲೇ ನಾನಾ
ಅಲವುಕಿಕ ಅವಧೂತ ಸಂಬಂಧೀ ಭಾವನೆಗಳನ್ನು ಅನುಭವಿಸುತ್ತಿರು ವಾಗಲೇ
ಯತ್ತಲೆತ್ತಲಿಂದಲೋ ಡೊಳ್ಳು, ಕಹಳೆ, ಹಲಗೆ, ತಮ್ಮಟೆ, ಸೊನ್ನಾಯಿ ರುಮ್ಮಿಯೇ
ಮೊದಲಾದ ಸತಯಿಂಸತಿ ವಾದ್ಯಗಳು ಬರು ಬರುತ್ತಲೇ ಮಾರ್ಮಲೆಯರಾಂಭಿಸಿ
ಬಯಲ ತುಂಬೆಲ್ಲ ಅಗಾಧ ನಾದ ಸಾಗರವನ್ನು ತರುಬಿದ್ದರ ಬಗ್ಗೆ ಯೇನು
ಹೇಳುವುದು ಸಿವನೇ, ಅವಯ್ಯನ ಸರೀರದ ವಂದೊಂದು ಸಂಧಿಯನ್ನು ಗುಡಿ,
ಗುಂಡಾರ, ದೇವುಳ, ಜುಮ್ಮಿ, ಬನ್ನಿ, ಬೇವು, ವುತ್ರಾಣಿ ವನವೆಂದು ಭಾವಿಸಿ
ಮಂದಿಯು ದೀಪಾರತಿ, ಭೂಪಾರತಿ ಯತ್ತಲಾರಂಭಿಸಿದ್ದರ ಬಗ್ಗೆ ಯೇನ
ಹೇಳಲಿ ಸಿವನೇ,
ಆದರ ಹಂಪಜ್ಜನ ಭವತಿಕ ಸರೀರವು ಹೇಳೋ ಸ್ಥಿತೀಲಿರಲಿಲ್ಲ. ಕೇಳೋ
ಸ್ಥಿತೀಲಿರಲಿಲ್ಲ... ಅವಯ್ಯನ ಸರೀರ ಸೊಸ್ಥಾನದಿಂದ ಪಂಚೇಂದ್ರಿಯಂಗಳು