ಪುಟ:ಅರಮನೆ.pdf/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಅರಮನೆ

೨೪೭

ಸಿವನೇ....
ಅವರೆಲ್ಲರ, ಸಮಸ್ತ ಪಟ್ಟಣದ ಕಷ್ಟನಷ್ಟ ಕಂಟಕ, ಸಂಕಟ, ದುಕ್ಕ ದುಮ್ಮಾನ,
ಭೂತ, ವರ್ತ, ಭವಿಷತ್‌ಗಳೆಂಬ ತ್ರಿಕಾಲ ಸತ್ಯೇವುಗಳು ಅವಯ್ಯನ ಅರುವಿಗೆ
ಬಂದು ನೆಲೆಗೊಳ್ಳಲಕ ವಂದು ಚಣವೇ ಸಾಕಾತು ಸಿವನೇ.. ಯಿನ್ನೇನು?
ಮುಂದೆ ಯಿನ್ನೇನಿನ್ನೇನು? ಯಂದು ಪಟ್ಟಣದ ದೇವತೆಯು ನೋಡು
ನೋಡುತಿರಲಕ. ಮೇರೋ ಪರುವುತ ಪ್ರಾಯದವಯ್ಯನ ಸರೀರದೊಳಗ
ಸಾವುರಾರು ವುಯ್ಯಾಲೆ, ಜುವ್ವಾಲೆ ತೂಗಾಡಲಕ ಹತ್ತಿದವು, ಳೊಳ್ಕೊಳ್ಳಾಯಿ
ಮಾರ್ಮಲೆಯಲಕ ತೊಡಗಿತು.. ಕಜ್ಜಿ ಪುಳ್ಳೆ ಕಂದಮ್ಮನಂತೆ ಅಂಬೆಗಾಲಿಡುತ..
ಅಲೆಯುತ.. ತನ್ನ ತಾಯಿಗಾಗಿ ಹಂಬಲಿಸಲಕ ಹತ್ತಿತು. ಯವ್ವಾ... ಯವ್ವಾ
ಯಲ್ಲದೆಯೇ ನಮ್ಮವ್ವನೇ.. ಯಾವ ರೂಪದಲ್ಲಿರುವ ನಮ್ಮವ್ವನೇ.. ಯಲ್ಲಿ
ವಡಮೂಡಿರುವಿ ನಮ್ಮವ್ವನೇ.. ಯಂದವಯ್ಯ ಅಬ್ಬರಿಸುತ ಬೋರು ಬೋರಾಡಿ
ಅಳತೊಡಗಲು, ವಂದೇ ಗುಕ್ಕಿಗೆ ಆಪೋಸನ ತೆಗೆದುಕೊಳ್ಳಲಿರುವಂತೆ ನೆಲಕ್ಕೆ
ಬಾಯ್ನ ಹಚ್ಚಲು.. ಮಂದಿಯು ಅರಗಳಿಗೆಯೊಳಗೆ ಸಿಲಾಯಿಗ್ರಹಗಳಾದರು,
ಯಿನ್ನೊಂದರ ಗಳಿಗೆಯೊಳಗೆ ಸಿಲಾಯಿಗ್ರಹಗಳಿಂದ ಜೀವಧಾರಣ ಮಾಡಿ
ಮೂಡಿದರು. ಅವರೆಲ್ಲ ನೋಡುನೋಡುತ್ತಿದ್ದಂತೆ ಅವಯ್ಯನು ಸಾವುರ
ಕಯ್ಯಿಗಳಿಂದ ತಾಯಿಯನ್ನು ಗೆಬರಾಡುತಲಿದ್ದಾನೆ, ಸಾವುರ ಕಾಲುಗಳಿಂದ
ಸಾವುರ ದಿಕ್ಕಿಗೆ ಸುಳಿದಾಡುತಲಿದ್ದಾನೆ ಸುಂಟರಗಾಳಿಯಂತೆ ಅಲ್ಲದಿಯೇನವ್ವಾ
ಯಂದನಕಂತ ಅಡ್ಡಡ್ಡ ಬಿತ್ತುವುದು ಮಾಡಿದನು ಮಾರಮ್ಮನ ಮಾರುದ್ದದ
ನಾಮಾವಳಿಗಳ.. ಬಿರುಗಾಳಿಯೋಪಾದಿಯಲ್ಲಿ ಸಂಚಾರವಂ ಕಯ್ಯಕೊಂಡು
ಪಟ್ಟಣದ ಆಯ್ದೂ ದಿಕ್ಕಿನಲ್ಲಿ ನೆಲಕ್ಕಮರಿಕೊಂಡಿದ್ದ ಕರಗಲ್ಲುಗಳ ನೇವರಿಕೆ
ಮಾಡಿ ಅವುಗಳಿಗೆ ತಗುಲಿರುವ ದುಕ್ಕ ದುಮ್ಮಾನವನ್ನು ಸಂತಯಿಕೆ ಮಾಡಿದನು.
ಅವಯ್ಯಗ ತನ್ನ ಹಿಂದಕ ಯಾರವರೆ? ಮುಂದಕ ಯಾರವರೆ? ಯಂಬ
ಖಬರು ಯಿರಲಿಲ್ಲ. ಅವಯ್ಯನ ಮಯ್ಯೋಳಗ ಧಗಧಗನೆ ಕ್ರಿಯಾಸೀಲವಾಗಿದ್ದ
ದಯವಂಗಳ ಮರುಮವನ್ನು ಅರಿತನಾಗಿದ್ದ ಜಡೆತಾತನು ಹಿಂದಲಕಿರೋರು
ಹಿಂದಲಕ ಹೋಳಾಗಿರಿ, ಮುಂದಲಕಿರೋರು ಮುಂದಲಕ ಹೋಳಾಗಿರಿ
ಯಂದನುತ ದಾರಿ ಸುಗಮ ಮಾಡತಲಿದ್ದನು. ಹಂಗೆ ಮಾಡಿಕೊಟ್ಟಂಥ ದಾರಿಯು
ಸಿಡೇಗಲ್ಲು ಗ್ರಾಮಕ್ಕಭಿಮುಖವಾಗಿ ಮಳ್ಳಗೆ ಮಲಗಿಕೊಂಡಿತ್ತು. ಭಕುತಾದಿ
ಮಂದಿಯು ವಾರ ದಿನಮಾನದಿಂದ ಅಂದಿದ್ದ, ಅನ್ನುತಲಿದ್ದ ಜಯನ್ನಾಮ