ಪುಟ:ಅರಮನೆ.pdf/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಅರಮನೆ

೨೪೯


“ವಸ್ತಿಗೆ ವುಂಬಲಕ ಕಡಿಮೆ ಮಾಡಿಲ್ಲ ಯಜಮಾನ, ವಸ್ತಿಗೆ ಕುಡಿಯಲಕ
ಕಡಿಮೆ ಮಾಡಿಲ್ಲ ಯಜಮಾನ. ಮ್ರುಷ್ಟಾನ್ನ ಭೋಜನದ ಕಡೇಕ ವಸ್ತಿ ಕಣ್ಣೆತ್ತಿ
ನೋಡುವಲ್ಲದು ಯಜಮಾನ. ನೀರ ಕಡೇಕ ಕಣ್ಣೆತ್ತಿ ಸಹ ನೋಡುವಲ್ಲದು
ಯಜಮಾನ. ಕರಗಲ್ಲು ಬರುತ್ತಲೆ ಪರಸಿವನ ಆತುಮಲಿಂಗದಂತೆ ನೆಲಕಚ್ಚಿಬಿಟ್ಟಿತೀ
ವಸ್ತಿಯು.. ಯಿದರೊಳಗ ಪಟ್ಟಣದ ತಪ್ಪೇನು ಯಿಲ್ಲ... ಅದರೊಳಗಿನ ತಾಯಿ
ಪಟ್ಟಣದ ಮ್ಯಾಲ ಮುನುಸುಕೊಂಡವಳೆ. ಪಟ್ಟಣದೊಳಗಿನ ವಂದೊಂದು
ನರಹುಳ ಕಾದೂ ಕಾದೂ ಬಲು ನಿತ್ರಾಣವಾಗಯ್ತೆ ಕಣ ತಂದೆಯೇ..
ತ್ರಿಕಾಲಗ್ನನಿಯಾದ ನಿನಗಿದನ್ನೆಲ್ಲ ಬುಡುಸಿ ಹೇಳಲಕ ನಾವೆಷ್ಟರವರಪ್ಪಾ..
ಹೆಂಗೋ ತಾಯಿ ತಂದೆಯಂಗ ಬಂದಿರುವಿ.. ಯಿದರ ಯೇಕರಕೆ ದೇಕರಿಕೆಯಲ್ಲಿ
ನಿನಗೆ ಸೇರಿದ್ದು ” ಯಂದು ಜಡತಾತನೂ.. ಕಾಡುಗೊಲ್ಲರೀರಯ್ಯನೂ..
ಹೇಳಲಾರದೆ ಹೇಳುತ ದುಕ್ಕ ತಡೀಲಾರದೆ ವಲ್ಲಿಯನ್ನು ಬಾಯಿಗಡ್ಡ
ಯಿಟ್ಟುಕೊಂಡರು.
ಅದಕಿದು ಕಂದಯ್ಯನೋ? ಯಿದಕದು ಕಂದಯ್ಯನೋ?
ಗೊಂಜಾಡರಲಡವಯ್ಯನೇ ಮೊದಲಾದವರು ಪಟ್ಟಣದ ಬದುಕು
ವಂಚೂರು ಹಿಂದಕ ಹೋಗದೆ, ವಂಚೂರು ಮುಂದಕ ಹೋಗದೆ ನಿಂತಲ್ಲೆ
ನಿಂತು ಬಲು ತ್ರಾಸುಪಡತಯ್ತೆ ಯಂದು ಮುಂತಾಗಿ ತಲಾ ವಂದೊಂದು
ದುಕ್ಕ ತೋಡಿಕೊಳುತ ಬಿಕುಬಿಕ್ಕಿ ಅಳಲಾರಂಭಿಸಿದರು. ಯದೆ ವುಂಬದೆ ಸುಟ್ಟು
ಕರಕಿಟ್ಟಂತಾಗಿದ್ದ ತಮ ತಮ್ಮ ಕಂದಮ್ಮಗಳನ್ನು ಹೊತ್ತುಕೊಂಡು ಆ ಕಡೇಲಕಿಂದ
ಬಂದ ತಾಯಂದಿರೆಷ್ಷೋ... ನಗೆ ಮಾಯವಾಗಿ ಗಂಟುಗಳೇ ತುಂಬಿದ ಮುಖೇಡಿ
ಗಂಡಂದಿರನ್ನು ಕರಕೊಂಡು ಯೀ ಕಡೇಲಕಿಂದ ಬಂದ ಹೆಂಡಂದಿರೆಷ್ಟೋ?
ತಪ್ಪು ಮಾಡುತೀವೆಂದೇ ನರ ಮನಶ್ಯೋರು ತಾವು.. ಪಶ್ಚಾತ್ತಾಪ ಪಡುತೀವೆಂದೇ
ನರಮನುಶ್ಯೋರು ತಾವು. ತಾವು ಅನುಭೋಸಿದ ಶಿಕ್ಷೆಯಿಷ್ಟು ಸಾಲದಾಯಿತೇನು
ತಾಯಿಗೆ.. ತಾಯಿಯಾದವಳೆದೆಯೊಳಗ ವಂಥಟಗಾರ ಕರುಣೆ ಯಿರೋದು
ಬ್ಯಾಡವೇನು? ತಾಯಿಯಾದವಳ ಕರುಳೊಳಗ ವಂಚೂರಾರ ಅಂತಃಕರಣ
ಯಿರೋದು ಬ್ಯಾಡವೇನು? ತಾಯಿಯಾದವಳಿಗೆ ಹೆಣ್ತನ ಅರ್ಥವಾಗೋದು
ಬ್ಯಾಡವೇನು?
ಸದರಿಪಟ್ಟಣದ ವರ್ತಮಾನದ ಮ್ಯಾಲ ತನ್ನ ತಾಯಿ ಯೀ ತೆರನ
ಬರೆಯಳೆದಿರಬೌದೆಂದು ತಾನು ಕಣಸುಮಣಸಿನಲ್ಲೂ ತಾನು ಮಾಹಿಸಿರಲಿಲ್ಲ...