ಪುಟ:ಅರಮನೆ.pdf/೨೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೫೦

ಅರಮನೆ


ಕಾಟ, ಸಾಂತುವನ ತಾಯಿ ರುದಯದ ಯರಡು ಮಗ್ಗಲುಗಳು, ಯೀ ಪರಿ
ಕಾಡಲಕ ಹತ್ತಿರುವಳೆಂದ ಮ್ಯಾಲ.. ತನ್ನ ತಾಯಿಯೊಳಗೆ ತಾಯ್ತನ
ವುಳಕೊಂಡಯ್ತಾ? ಯಿಲ್ಲವಾ?.. ತಾಯ್ತನವನ್ನು ಕಲಿ ಯೇನಾರ ಅಪಹರಣ
ಮಾಡಿರುವನಾ?.. ಛೇ! ಛೇ.. ತನ್ನ ತಾಯಿ ತನ್ನ ತಾಯಿಯೇ...
ಯವ್ವಾ ತಾಯೇ.. ನಿನ್ನೆದೆ ಕರುಣೆ ನೆಂಜಾಗಿ ಬುಟ್ಟರಂಗವ್ವಾ.. ಯಾಕ
ಮುನುಸುಕೊಂಡಿರುವಿ..? ಕೇಳ್ತಿರೋದು ಯೀ ನಿನ್ನ ಸಿಸುಮಗ ಹಂಪಜ್ಜ..
ಕೇಳುತಿರೋದು ಗವುರಸಂದರ ಮಾರೆಮ್ಮನ ನಿಜ ಭಕುತನಾದ ಹಂಪಜ್ಜ..
ಕೇಳುತಿರೋದು ದ್ವಾಪರ ಕಾಲದಲ್ಲಿ ಹುಟ್ಟಿ ಕಲಿ ಕಾಲದಲ್ಲಿ ಮುದೇನಾಗಿರೋ
ಹಂಪಜ್ಜ.. ಅದೇನು ಮನಸಿನಾಗ ಯಿಟುಕೊಂಡಿದ್ದೀ.. ಬಾಯಿಬುಟ್ಟು ನೀನು
ಹೇಳಾಕೆ ಬೇಕವ್ವಾ.. ಹೇಳದಿದ್ದರೆ ನನ್ನಾಣೆ ಆಯ್ತೆ.
ಅದಕಿದು ಕಂದಯ್ಯನೋ? ಯಿದಕದು ಕಂದಯ್ಯನೋ?
ವಂದು ಗಳಿಗಾತು, ಯರಡು ಗಳಿಗಾತು... ಬರೋಬ್ಬರಿ ಮೂರು
ಗಳಿಗೇನೂ ಆತು. ಅದರ ವಸ್ತಿ ಮಾತ್ರಹೂ ಅನುವಲ್ಲದು, ವುಸುರು ಬಿಡವಲ್ಲದು.
ನಗೆ ಚಾಟಿಕೆ ತುಂಬಿಕೊಂಡಯ್ತೆ ಮುಖದ ತುಂಬೆಲ್ಲ.....
ಆಗ ಸಿಟ್ಟು ಬಂದು ಮುದೇನು.. “ನಿಂದ್ಯಾಕೋ ಅತಿ ಆತು ಬುಡವ್ವಾ...
ನೀನಿಂಗs ಹಟ ಮಾಡಿದರ ನರಲೋಕದೊಳಗ ಆಸ್ತೀಕತೆಯು ಸುಟ್ಟು ಕರಕಾಗಿ
ಹೋತಯ್ತೆ. ನರಮಂದಿನೇಲ್ಲ ವಂದೇಟಿಗೆ ಮುಗಿಸಿ ಬಿಡು.. ಯಾರು ಅಡ್ಡ
ಬಂದಾರು ನಿನಗೆ.. ಯೀ ಭೂಮಿ ಮ್ಯಾಲ ನೀನೊಬೈಯಿದ್ದು ಅದ್ಯಾವ
ಅಯಿಭೋಗನ ಅನುಭೋಸು” ಯಂದನು.
ಅದಕಾರ ವಸ್ತಿಯು ಪ್ರತಿ ಜವಾಬು ನುಡಿಯಲಿಲ್ಲ.
ಅದಕ ಮತ್ತೋಟು ಸಿಟ್ಟು ಬಂದು ಮುದೇತನು ಕುಂತಿದ್ದಾತನು ಯದ್ದು
ನಿಲ್ಲುತ-
“ಯೋಟು ಗಲಗಲಾಂದರೂ ವಂಚೂರಾರ ಮಿಸುಕಾಡವಲ್ಲಲ್ಲೇ
ನಮ್ಮವ್ವನೇ.. ಯದಿ ಗುಂಡಿಗೀನ ಕಲ್ಲು ಮಾಡಿಕೊಂಡಿಯಾ ಹೆಂಗೆ? ನನ
ಮಾತಿಗೆ ಬೆಲೆಕೊಟ್ಟು ಯದ್ದು ಕುಂತಗಂಡು ನಾಕು ಮಾತಾಡುತಿಯೋ
ಯಿಲ್ಲಮೋ ಆಟೇಳು?” ಯಂದು ಜಬರದಸ್ತು ಮಾಡಿದ್ದೂ ಪ್ರಯೋಜನಕ
ಬರಲಿಲ್ಲ.
“ಸರ್ರೆಬುಡು.. ಆದಿಸಗುತಿಯಾದ ನಿಂಗೆ ಯೀಟೊಂದು ಟೆಬರು