ಪುಟ:ಅರಮನೆ.pdf/೨೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೫೪

ಅರಮನೆ


ಆಗಿದ್ದಂಥ ಕಲ್ಲು ಕೋಳಿಯು ಕೊಕ್ಕೊಕ್ಕೋ ಯಂದು ಕೂಗಿತಂತೆ ಸಿವನೇ...
ಹಂಪಿವಳಗ ಕಲ್ಲುರಥದ ಗಾಲಿಗಳು ಭರ್ರಂತ ತಿರುಗಿದವಂತೆ ಸಿವನೇ..
ಚುಟುಕಲಕನಂದನೆಯು ವುಷ್ಟೊಂಗಿದಗಳಂತೆ ಸಿವನೇ.. ದಿಗಂತದಂಚಿನಿಂದ
ವಂದಂಗಯ್ಯಗಲದ ಮೋಡವು ಬೆಳೀತಾ ಯೇರುತಾ.. ಯೇರುತಾ ಬೆಳಿತಾ
ಮುಗಿಲಗಲ ಯಿಸ್ತಾರಗೊಂಡು ಬಿಸಿಲ ಸೊಕ್ಕು ಮುರಿಯಿತಂತೆ ಸಿವನೇ..
ಕೋಳಿ ಕೂಗಿದಂತಾತಲ್ಲ ಯಾಕss? ಕತ್ತಲು ಕವುದಂಗಾತತಲ್ಲ ಯಾಕ..? ಪಕ್ಷಿಗಳು
ಬಿಸಿಲನ್ನು ಬೆಳದಿಂಗಳೆಂದು ಭಾವಿಸಿ ಕುಡಿಯುತ್ತಿರುವವಲ್ಲಾ ಯಾಕss ಯಲ್ಲಿತ್ತೋ
ಯಪ್ಪಾ ಗುಡುಗು.. ಯಲ್ಲಿತ್ತಷ್ಟೋ ಸಿಡಿಲು... ಯಲ್ಲಿದ್ದವಪ್ಪಾ ಕೋಲ್ಮಿಂಚುಗಳು!
ನೋಡು ನೋಡುವಷ್ಟರೊಳಗ ಆಕಾಸದ ತುಂಬೆಲ್ಲ ರಣಭೇರಿ.. ನೋಡು
ನೋಡುತ್ತಿದ್ದಂತೆ ಆಕಾಸದ ತುಂಬೆಲ್ಲಾ ದೀಪಗಳ ಹಾವಳಿ.. ಮುಗುಲೊಳಗ
ಸಕಲ ಹೊಳೆ ಹಳ್ಳಗಳ ಮಹಾಧಿವೇಸನ ಆರಂಭಗೊಂಡಿತಪ್ಪಾ ಸಿವನೇ!..
ಚಣೋಪ್ಪತ್ತಲ್ಲಿ ರಂದು ಮಳೆರೂಪೀ ಅಂಬ್ರುತಧಾರೆ
ಸುರಿಯಲಾರಂಭಿಸಿತು.. ಆ ಗ್ರಾಮದ ಸಚರಾಚರ ಸ್ಥಾವರ ಜಂಗಮಗಳೆಲ್ಲ
ಅಭ್ಯಂಜನ ಮಜ್ಜಣ ಮಾಡಿದವು.. ಗುಂಡಿಗಳು ಸರೋವರಗಳಾದದ್ದು ತಡ
ಆಗಲಿಲ್ಲ.. ತೊರೆಗಳು ಹಳ್ಳಗಳಾದದ್ದು ತಡ ಆಗಲಿಲ್ಲ... ಹಳ್ಳಗಳು
ಹೊಳೆಗಳಾದದ್ದು ತಡ ಆಗಲಿಲ್ಲ... ಹೊಳೆಗಳು ನದಿಗಳಾದದ್ದು ತಡ ಆಗಲಿಲ್ಲ..
ಯ್ಯಾಸರಾಂರುರ ಪ್ರಾಣದೇವರು ಕುದುರೆಡವಿದ್ದ ಕುಂತಳ
ಪ್ರಾಂತಕ್ಕಭಿಮುಖಗೊಂಡದ್ದು ತಡ ಆಗಲಿಲ್ಲ... ಮುಖ ಮಾಡಿದಂಥಾ
ಆಂಜನೇಯಸ್ವಾಮಿಯು ತಾಯಿ ಸಾಂಬವೀss ನಿನ್ನೆದೆಯ ಕರುಣೆಯನ್ನು
ಮುಗುಲಿಂದ ಸುರುಸಿ ಸಚರಾಚರಗಳ ಪ್ರಾಣ ವುಳಿಸಿದಿ ತಾಯಿ.. ನಿನ್ನ ಪವಾಡ
ಅಂದಿಗುಂಟು ಯಿಂದಿಗಿಲ್ಲ ಯಂಬುವ ನರಾಧಮರನ್ನು ಆಸ್ತಿಕರನ್ನಾಗಿ
ಮಾಡು... ತುಪ್ಪದ್ದೀವಿಗೆಯ ಬೆಳಕೊಳಗ ನಿನ್ನ ಮುಖ ಆಯಿಭೋಗವನ್ನು
ಯೀರೇಳು ಲೋಕಗಳೊಳಗೆ ತುಂಬ ಪ್ರಕಾಸಿಸು” ಯಂದು ಸಣಮಾಡಿದ್ದು
ತಡ ಆಗಲಿಲ್ಲವಂತೆ ಸಿವನೇ..
ಮುರುಡಿಯ ಅಬಾಲರುದ್ಧರಾದಿಯಾಗಿ ಯಲ್ಲರೂ ಮಳೆಯ
ವಂದೊಂದು ಹನಿಯನ್ನು ತಾಯಿ ಕೊಡಮಾಡಿದ್ದ ತೀರ್ಥವೆಂದು ಭಾವಿಸಿ
ಮುಗುಲು ಕಡೇಕ ಮುಖ ಮಾಡಿ ಸವುದರು.. ಕಣ್ಣೊಳಗ ನೀರು
ತುಳುಕಿಸಿಕೊಂಡು ಮ್ರುತದುಸ್ಯಾವಳಿಗಳಿಗೆ ಜೀವ ತುಂಬಿದರು.. ಕೆಸರ